ಶಾಸಕರ ಶಾಲೆಯ ದುಃಸ್ಥಿತಿ| ಮಳೆಯಿಂದಾಗಿ ಸ್ವಿಮ್ಮಿಂಗ್‌ ಫೂಲ್‌ನಂತಾದ ಶಾಲಾ ಆವರಣ

ರಾಯಚೂರು: ಸರ್ಕಾರಿ ಉರ್ದು ಹಿರಿಯ ಪ್ರಾಥಮಿಕ ಶಾಲೆಯ ಆವರಣ ಮಳೆನೀರಿನಿಂದ ತುಂಬಿದ್ದು, ಸಂಪೂರ್ಣ ಕೆರೆಯಂತಾಗಿರುವ ದುಃಸ್ಥಿತಿ ರಾಯಚೂರು ಜಿಲ್ಲೆಯ ಲಿಂಗಸೂಗೂರಿನಲ್ಲಿ ಕಂಡುಬಂದಿದೆ.ಮಳೆಯಿಂದಾಗಿ 

ಇದನ್ನೂ ಓದಿ:ಅತಿಥಿ ಉಪನ್ಯಾಸಕರಿಗೆ ಸೇವಾ ಭದ್ರತೆ ಒದಗಿಸುವಂತೆ ಎಸ್‌ಎಫ್‌ಐ ಪ್ರತಿಭಟನೆ

ಲಿಂಗಸುಗೂರು ಶಾಸಕರಾದ ಮಾನಪ್ಪ ವಜ್ಜಲ್ ಅವರ ಕ್ಷೇತ್ರದ ಶಾಲೆಗಳ ಪರಿಸ್ಥಿತಿ ಇದು. ತಾಲೂಕಿನಾದ್ಯಂತ ಎರಡು ಮೂರು ದಿನಗಳಿಂದ ಸುರಿದ ಧಾರಾಕಾರ ಮಳೆಗೆ ಪಟ್ಟಣದ ಶಾಸಕರ ಸರ್ಕಾರಿ (ಕನ್ನಡ ಮಾಧ್ಯಮ) ಮಾದರಿಯ ಹಿರಿಯ ಪ್ರಾಥಮಿಕ ಕೇಂದ್ರ ಶಾಲೆ ಹಾಗೂ ಸರ್ಕಾರಿ ಹಿರಿಯ ಉರ್ದು ಪ್ರಾಥಮಿಕ ಶಾಲಾ ಆವರಣವು ಸಂಪೂರ್ಣ ಕೆರೆಯಂತಾಗಿ ಮಾರ್ಪಟ್ಟಿದೆ.

ಶಾಸಕರ ಮನೆ ಮತ್ತು ಕಚೇರಿಯಿಂದ ಕೆಲವೇ ಮೀಟರ್‌ ಅಂತರದಲ್ಲಿರುವ ಸರ್ಕಾರಿ ಉರ್ದು ಹಿರಿಯ ಪ್ರಾಥಮಿಕ ಶಾಲೆಯ ಆವರಣದಲ್ಲೆಲ್ಲಾ ಮಳೆ ನೀರು ತುಂಬಿದ್ದು, ಕೆರೆಯಂತೆ ಮಾರ್ಪಟ್ಟಿದೆ. ಆದರೂ ಶಾಸಕ ಮಾನಪ್ಪ.ಡಿ.ವಜ್ಜಲ್‌ ಅವರು ಜಾಣ ಕುರುಡು ಪ್ರದರ್ಶಿಸುತ್ತಿದ್ದಾರೆ ಎಂದು ಸ್ಥಳೀಯ ಸಂಘಟನಾ ಕಾರ್ಯಕರ್ತರು ಆರೋಪಿಸಿದ್ದಾರೆ.

ಮಳೆಯಾದಾಗೊಮ್ಮೆ ಇಲ್ಲಿನ ಶಾಲೆಯಲ್ಲಿ ಓದುತ್ತಿರುವ ಸಾವಿರಾರು ಮಕ್ಕಳು ಪ್ರತಿಬಾರಿಯೂ ಈ ಸಮಸ್ಯೆ ಎದುರಿಸುತಿದ್ದಾರೆ. ಮಕ್ಕಳು ಮತ್ತು ಶಿಕ್ಷಕರು ಅನುಭವಿಸುತ್ತಿರುವ ಸಮಸ್ಯೆಗಳ ಕುರಿತು ಹಲವು ಸಂಘ-ಸಂಸ್ಥೆಗಳು ಇಲ್ಲಿನ ಕ್ಷೇತ್ರ ಶಿಕ್ಷಣಾಧಿಕಾರಿ ಹಾಗೂ ಸ್ಥಳಿಯ ಶಾಸಕರ ಗಮನಕ್ಕೆ ತಂದರು ಸಹ ಯಾವುದೇ ರೀತಿಯ ಪರಿಹಾರ ಮಾತ್ರ ಸಿಗುತ್ತಿಲ್ಲ.ಮಳೆಯಿಂದಾಗಿ 

ಇದನ್ನೂ ಓದಿ:ಸರಕಾರಿ ಶಾಲೆಗಳನ್ನು ಖಾಸಗಿ ಶಾಲೆಗಳಿಗೆ ದತ್ತು‌: ಜಾಗೃತ ನಾಗರಿಕರಿಂದ ವಿರೋಧ

ಕ್ಷೇತ್ರ ಶಿಕ್ಷಣಾಧಿಕಾರಿ ಹುಂಬಣ್ಣರವರೇ, ನೀವು ಸರ್ಕಾರಿ ಅಧಿಕಾರಿಯಾಗಿ ಸೇವೆ ಸಲ್ಲಿಸುತ್ತಿದ್ದೀರ ಅಥವಾ ಸರ್ಕಾರದಿಂದ ಲಕ್ಷ ಲಕ್ಷ ಸಂಬಳವನ್ನು ಪಡೆಯುತ್ತಿದ್ದೀರಾ? ಯಾಕೆ? ನಿಮ್ಮ ಕಣ್ಣಿಗೆ ಈ ಶಾಲೆಯ ಸಮಸ್ಯೆ ಕಾಣುತ್ತಿಲ್ಲವೆ..??  ಹಲವು ಬಾರಿ ಸ್ಥಳೀಯರು ತಮ್ಮ ಗಮನಕ್ಕೆ ತಂದರು ಸಹ ನೀವು ಇಲ್ಲಿನ ಸಮಸ್ಯೆಗೆ ಪರಿಹಾರ ದೊರಕೀಸದೆ ನಿರ್ಲಕ್ಷ್ಯ ತೋರುತ್ತಿರುವುದು ಯಾಕೆ..?? ನಿಮ್ಮ ಮನೆಯ ಪರಿಸ್ಥಿತಿ ಇದೆ ರೀತಿ ಇದ್ದರೆ ನೀವು ಹೀಗೆಯೆ ನಿರ್ಲಕ್ಷ್ಯ ತೋರುತ್ತೀರಾ.?  ಉತ್ತರಿಸಿ.

ಶಾಸಕರೇ ತಾವು ಇಡೀ ರಾಯಚೂರು ಜಿಲ್ಲೆಯಲ್ಲಿಯೇ ಆಗರ್ಭ ಶ್ರೀಮಂತರು ತಾವು ಇಡೀ ಕರುನಾಡಿಗೆ ಶ್ರೀಮಂತರಾಗಿ ಬೆಳೆಯಿರಿ ನಮ್ಮ ಹಾರೈಕೆ ಇದೆ ಆದರೆ ತಾವು ಮಾತ್ರ ಭವ್ಯ ಬಂಗಲೆಯನ್ನು ನಿರ್ಮಿಸಿಕೊಂಡು ತಮ್ಮ ಕ್ಷೇತ್ರದ ಜನರ ಮಕ್ಕಳ ಭವಿಷ್ಯ ರೂಪಿಸಿಕೊಳ್ಳುವ ಸರ್ಕಾರಿ ಶಾಲೆಗಳ ಬಗ್ಗೆ ನಿಮ್ಮ ಅಸಡ್ಡೆತನ ಯಾಕೆ..??  ಈ ಕ್ಷೇತ್ರದ ಶಾಸಕರಾದ ನಿಮಗೆ ಸರ್ಕಾರಿ ಶಾಲೆಗಳ ಈ ಪರಿಸ್ಥಿತಿಗಳ ಬಗ್ಗೆ ಕರುಣೆ ಇಲ್ಲವೆ..? ಎಂಬುದು ಸ್ಥಳೀಯ ಸಾರ್ವಜನಿಕರ ಪ್ರಶ್ನೆಯಾಗಿದೆ.

ಶಾಸಕರೇ ಇದು ನಿಮ್ಮ ಜವಾಬ್ದಾರಿಯಾಗಿದೆ ದಯಮಾಡಿ ಆದಷ್ಟು ಬೇಗ ಈ ಶಾಲೆಯ ಆವರಣದ ದುಃರಸ್ಥಿ ಕಾರ್ಯಕ್ಕೆ ಮುಂದಾಗಬೇಕು. ಅಲ್ಲಿನ ಮಕ್ಕಳ ಕಲಿಕೆಗೆ ಹಾಗೂ ಉತ್ತಮ ಭವಿಷ್ಯವನ್ನು ರೂಪಿಸಿಕೊಳ್ಳುವುದಕ್ಕೆ ಮೂಲಭೂತ ಸೌಕರ್ಯವನ್ನು ಒದಗಿಸಿ  ಅನುಕೂಲ ಮಾಡಿಕೊಡಲು ಮುಂದಾಗಬೇಕಿದೆ ಎಂದು ಸಾಮಾಜಿಕ ಕಾರ್ಯಕರ್ತ ಅಕ್ರಂಪಾಶಾ ಸಾಮಾಜಿಕ ಜಾಲತಾಣ ಪೇಸ್‌ ಬುಕ್‌ ಖಾತೆಯಲ್ಲಿ ಪೋಸ್ಟ್‌ ಹಂಚಿಕೊಂಡಿದ್ದಾರೆ.

ಎಸ್‌ಎಫ್‌ಐ ಖಂಡನೆ:

ಈ ಕುರಿತು ಎಸ್ಎಫ್ಐ ಜಿಲ್ಲಾಧ್ಯಕ್ಷ ರಮೇಶ್‌ ವೀರಾಪೂರು ಅವರು ಜನಶಕ್ತಿ ಮೀಡಿಯಾ ಜೊತೆಗೆ ಮಾತನಾಡಿ, “ತಾಲೂಕಿನ ಸರ್ಕಾರಿ ಶಾಲೆಗಳಲ್ಲಿ ಈಗಾಗಲೇ ಶಿಕ್ಷಕರ ಕೊರತೆಯಿಂದ ವಿದ್ಯಾರ್ಥಿಗಳು ವಂಚಿತರಾಗುತ್ತಿದ್ದಾರೆ. ಹಲವು ಶಾಲೆಗಳ ಪೈಕಿ 1,037 ಕೊಠಡಿಗಳು ಶಿಥಿಲಾಸ್ಥೆಯಲ್ಲಿವೆ. ಮಳೆ ಬಂದ ಹಿನ್ನೆಲೆಯಲ್ಲಿ ಇದೀಗ ಲಿಂಗಸೂಗೂರು ಶಾಸಕರ ಮನೆ ಮತ್ತು ಕಚೇರಿಯಿಂದ ಕೆಲವೇ ಮೀಟರ್ ಅಂತರದಲ್ಲಿರುವ ಸರ್ಕಾರಿ ಉರ್ದು ಹಿರಿಯ ಪ್ರಾಥಮಿಕ ಶಾಲೆಯ ಆರಣದಲ್ಲಿ ನೀರು ತುಂಬಿದ್ದು, ಕೆರೆಯಂತಾಗಿದೆ” ಎಂದು ಆಕ್ರೋಶ ವ್ಯಕ್ತಪಡಿಸಿದರು.ಮಳೆಯಿಂದಾಗಿ 

“ಐದನಾಳ ಸರ್ಕಾರಿ ಶಾಲೆಯೂ ಕೂಡ ಇದೇ ರೀತಿ ಇದೆ. ಆದರೆ ಶಾಸಕ ಮಾನಪ್ಪ ವಜ್ಜಲ್ ಅವರು ಸರ್ಕಾರಿ ಶಾಲೆ-ಕಾಲೇಜುಗಳ ಕಟ್ಟಡ ಮತ್ತು ಅವುಗಳ ಮೂಲ ಸೌಕರ್ಯಗಳ ಬಗ್ಗೆ ಇರುವ ದಿವ್ಯ ನಿರ್ಲಕ್ಷ್ಯ ತೋರಿಸಿದ್ದಾರೆ. ಇದನ್ನು ಎಸ್ಎಫ್ಐ ಜಿಲ್ಲಾ ಸಮಿತಿ ತೀವ್ರವಾಗಿ ಖಂಡಿಸುತ್ತದೆ” ಎಂದರು.ಮಳೆಯಿಂದಾಗಿ 

ಇದನ್ನೂ ಓದಿ:ಖಾಯಂ ಶಿಕ್ಷಕರೇ ಇಲ್ಲದ ಉತ್ತರ ಕನ್ನಡದ 120 ಸರ್ಕಾರಿ ಶಾಲೆಗಳು

“ಕೇವಲ ಶಾಲೆಯ ಆವರಣದಲ್ಲಿ ನೀರು ತುಂಬುವುದಲ್ಲದೆ, ಕೊಠಡಿ ಒಳಗಿನ ಮೇಲ್ಛಾವಣಿಗಳೂ ಹಾನಿಯಾಗಿವೆ. ಅಂತಹ ದುಃಸ್ಥಿತಿಯಲ್ಲಿರುವ ಕೊಠಡಿಗಳಲ್ಲಿಯೇ ಮಕ್ಕಳಿಗೆ ಪಾಠ ಪ್ರವಚನಗಳು ನಡೆಯುತ್ತಿವೆ” ಎಂದು ಆರೋಪಿಸಿದರು.

ಎಸ್‌ಎಫ್‌ಐ ತಾಲೂಕು ಮುಖಂಡ ವಿಶ್ವ ಅಂಗಡಿ ಅವರು ಕೂಡ  ಮಾತನಾಡಿ, “ಶಾಸಕರ ಮನೆಯ ಪಕ್ಕದಲ್ಲಿಯೇ ಇರುವ ಸರ್ಕಾರಿ ಉರ್ದು ಹಿರಿಯ ಪ್ರಾಥಮಿಕ ಶಾಲೆಯ ಆವರಣ ಸಂಪೂರ್ಣ ಸ್ವಿಮ್ಮಿಂಗ್ ಪೂಲ್‌ನಂತಾಗಿದೆ. ಪರಿಣಾಮ ಶಾಲೆಯ ಮಕ್ಕಳು ಇದರಲ್ಲಿ ಈಜಿಕೊಂಡು ತರಗತಿಗಳಿಗೆ ತೆರಳಬೇಕಾದ ಪರಿಸ್ಥಿತಿ ಉಂಟಾಗಿದೆ” ಎಂದು ತಿಳಿಸಿದರು. ಶಾಸಕರ ಶಾಲೆಯ(ಕನ್ನಡ ಮಾಧ್ಯಮ) “ಶಾಲೆಯ ಆವರಣ ಸಂಪೂರ್ಣ ಜಲಾವೃತವಾಗಿದೆ. ಶಾಲೆಯ ಕಟ್ಟಡದ ಬಳಿ ಸರ್ಕಾರಿ ಉರ್ದು ಶಾಲೆಯ ಹೊಸ ಕಟ್ಟಡ ನಿರ್ಮಾಣವಾಗಿದೆ. ಸುತ್ತಲೂ ಕಟ್ಟಡಗಳಿರುವುದರಿಂದ ನೀರು ಹರಿಯಲು ಸ್ಥಳವಿಲ್ಲದಂತಾಗಿದೆ”

ಶಾಸಕರು ಮತ್ತು ಜಿಲ್ಲಾಡಳಿತ ಕೂಡಲೇ ಸರ್ಕಾರಿ ಶಾಲೆಗಳತ್ತ ಗಮನ ಹರಿಸಿ ಅವುಗಳ ಅಭಿವೃದ್ಧಿಗೆ ಮುಂದಾಗಬೇಕು. ಹೀಗೆಯೇ ಅಸಡ್ಡೆ ತೋರಿದರೆ ಸದ್ಯದಲ್ಲಿಯೇ ಶಾಸಕರ ಕಚೇರಿಗೆ ಮುತ್ತಿಗೆ ಹಾಕಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.ಮಳೆಯಿಂದಾಗಿ 

ವಿಡಿಯೋ ನೋಡಿ:‘ಸಿಎಂ ಅಂಕಲ್’, ಬಸ್ ವ್ಯವಸ್ಥೆ ಮಾಡದಿದ್ದರೆ ಶಾಲೆಗೆ ಹೋಗಲ್ಲ’ ಎಂದು ಪಟ್ಟು ಹಿಡಿದು ಬಸ್ ಬರುವಂತೆ ಮಾಡಿದ ಚಿಣ್ಣರು

Donate Janashakthi Media

Leave a Reply

Your email address will not be published. Required fields are marked *