ಶೋಷಿತರ ಧ್ವನಿಗೆ ಪ್ರತಿಧ್ವನಿಯಾಗಿ ಮೊಳಗಿದ ಸಪ್ದರ್ ಹಾಶ್ಮಿ

ಐಕೆ ಬೊಳುವಾರು
ಇವತ್ತು 2024 ಜನವರಿ 1. ಹೊಸ ವರ್ಷದ ಶುಭಾಶಯಗಳು. ಜೊತೆಯಲ್ಲಿ ಜನ ನಾಟ್ಯ ಮಂಚದ ಸಫ್ದರ್ ಹಾಶ್ಮಿಯನ್ನು ನೆನಪಿಸಿಕೊಳ್ಳಬೇಕಾದ ದಿನ. ಶೋಷಿತರ 

ಪ್ರತಿರೋಧ ರಂಗ ಚಳುವಳಿಯ ಪ್ರಮುಖ ರಂಗಸಂಸ್ಥೆ ಜನ ನಾಟ್ಯ ಮಂಚ ದೆಹಲಿ. ಪ್ರಾರಂಭಗೊಂಡು ಐವತ್ತು ವರ್ಷಗಳು ಕಳೆದಿವೆ. ಜನ ನಾಟ್ಯ ಮಂಚದ ಆರಂಭಕ್ಕೆ ಕಾರಣರಾದ ಸಫ್ಧರ್ ಹಾಶ್ಮಿ ನಾಟಕ ಪ್ರದರ್ಶನ ನಡೆಯುತ್ತಿದ್ದಾಗಲೇ ರಾಜಕೀಯ ಗೂಂಡಾಗಳಿಂದ ಹಲ್ಲೆಗೊಳಗಾಗಿ, 1989ರ ಜನವರಿ 2ರಂದು ಮೃತ್ಯುವಿಗೀಡಾಗುತ್ತಾರೆ. ಆ ದಿನ ದೇಶಾದ್ಯಂತ ರಂಗಭೂಮಿ ಕಾರ್ಯಕರ್ತರು ಪ್ರತಿಭಟನೆಯ ಮೆರವಣಿಗೆಗಳನ್ನು, ನಾಟಕಗಳನ್ನು, ಪತ್ರಿಕಾ ಬರಹಗಳನ್ನು ದಾಖಲಿಸುವುದರ ಮೂಲಕ ಪ್ರತಿಕ್ರಿಯೆ ನೀಡುತ್ತಾರೆ .

ಇದೀಗ ಸಫ್ಧರ್ ಹಾಶ್ಮಿಯವರು ಇಲ್ಲವಾಗಿ 35 ವರ್ಷಗಳು ಕಳೆದರೂ ದೆಹಲಿಯ ಜನ ನಾಟ್ಯ ಮಂಚ ಮತ್ತಷ್ಟು ಸಕ್ರಿಯವಾಗಿ ಬೀದಿ ನಾಟಕಗಳ ಮೂಲಕ ಸಮಾಜದ ಓರೆ-ಕೋರೆಗಳಿಗೆ ತನ್ನ ಪ್ರತಿಕ್ರಿಯೆ ನೀಡುತ್ತಿದೆ.  1981ರ ಏಪ್ರಿಲ್ ತಿಂಗಳ ಸಮುದಾಯ ವಾರ್ತಾ ಪತ್ರ ಸಂಚಿಕೆಯಲ್ಲಿನ ಬರಹ ಒಂದರಲ್ಲಿ ರಂಗ ನಿರ್ದೇಶಕಿ ಎಸ್. ಮಾಲತಿಯವರು ಜನ ನಾಟ್ಯ ಮಂಚದ ಕುರಿತಾಗಿ ಬರಹವೊಂದನ್ನು ದಾಖಲಿಸುತ್ತಾರೆ. ಇದು ಕನ್ನಡದ ಪತ್ರಿಕೆಯೊಂದರಲ್ಲಿ ‘ಜನಮ್ ‘ಕುರಿತು ಬಂದ ಮೊದಲ ಬರಹ. ಅದರ ಆಯ್ದ ಭಾಗಗಳನ್ನು ನಾನು ಇಲ್ಲಿ ಹಂಚಿಕೊಳ್ಳುತ್ತಿದ್ದೇನೆ .

ವಿಶೇಷವೆಂದರೆ ಜನ ನಾಟ್ಯ ಮಂಚದ ಉಗಮಕ್ಕೆಕಾರಣರಾದ ಮತ್ತು ಪ್ರತಿರೋಧ ರಂಗ ಚಳುವಳಿಯ ನೇತಾರ ಸಫ್ದರ್ ಹಾಶ್ಮಿಯವರ ಹೆಸರು ಆ ದಿನಗಳಲ್ಲಿ ಯಾವುದೇ ಬರಹದಲ್ಲಿಯೂ ಉಲ್ಲೇಖವಾಗುತ್ತಿರಲಿಲ್ಲ .ರಂಗ ಚಳುವಳಿ ಎನ್ನುವುದು ಒಬ್ಬ ವ್ಯಕ್ತಿ ಮತ್ತು ಆತನ ಹೆಸರಿನದ್ದಲ್ಲ ,ಅದು ತಂಡದ ಪ್ರತಿಯೊಬ್ಬರ ಜವಾಬ್ದಾರಿ ಮತ್ತು ಬದ್ಧತೆ ಎಂಬುದಾಗಿ ಎಲ್ಲರ ನಿಲುವಾಗಿತ್ತು.

ಜನರ ಬಳಿಗೆ ಜನ ನಾಟ್ಯ ಮಂಚ ದೆಹಲಿಯ ಹೊರವಲಯದಲ್ಲಿ ವಾಸಿಸುವ ಬಟ್ಟೆ ಗಿರಣಿಯ ಲಾಲುರಾಮ ಇಪ್ಪತ್ತು ವರ್ಷಗಳ ಅವಧಿಯಲ್ಲಿ ಯಾವುದೇ ನಾಟಕವನ್ನು ನೋಡಿಲ್ಲ. ಅವನಿಗೆ ಪಶ್ಚಿಮ ಉತ್ತರ ಪ್ರದೇಶದ ತನ್ನ ಹಳ್ಳಿಯಲ್ಲಿ ಚಿಕ್ಕವನಿದ್ದಾಗ ಹಾಗೂ ಯುವಕನಾಗಿದ್ದಾಗ ಕೇಕೆ ಹಾಕಿಕೊಂಡು ನಗುವಂತಹ ತಮಾಷೆಯ ಭಾವನಾತ್ಮಕವಾದ ಮತ್ತು ವೈಭವದ ‘ನೌಟಂಕಿ ನೋಡಿದುದು (Nautanki) ಜ್ಞಾಪಕದಲ್ಲಿದೆ. ಶೋಷಿತರ 

ಇದನ್ನೂ ಓದಿ : ಶೋಷಿತರ ‘ಹಲ್ಲಾ ಬೋಲ್’ ಓದು : ರಂಗಕರ್ಮಿ ಶ್ರೀಪಾದ ಭಟ್, ಐ.ಕೆ ಬೊಳುವಾರು ಅವರ ಪ್ರತಿಕ್ರಿಯೆ  

ಇದಲ್ಲದೆ ಅವನು ತನ್ನ ಹಳ್ಳಿಯ ಉತ್ಸವ ಹಾಗೂ ಹಬ್ಬಗಳಲ್ಲಿ ನಡೆಯುವಂತಹ ಹಾಡು ಮತ್ತು ನೃತ್ಯಗಳ ಭಾಗವಹಿಸುತ್ತಿದ್ದುದೂ ಅವನಿಗೆ ನೆನಪಿನಲ್ಲಿದೆ. ಆದರೆ ಎರಡು ದಶಕಗಳ ಹಿಂದೆಯೇ ಸಂಬಳಕ್ಕಾಗಿ ಬಟ್ಟೆ ಗಿರಣಿಯಂತಹ ಬಹು ದೊಡ್ಡ ಬಂದೀ ಖಾನೆಯಲ್ಲಿ ಅವನು ಪ್ರವೇಶಿಸಿದಂದಿನಿಂದ ಈ ಆಸಕ್ತಿಯೆಲ್ಲವೂ ಅವನ ಜೀವನದಿಂದ ದೂರವಾಗಿ ಹೋಗಿತ್ತು. ಈಗ ಅವನು ಕೆಲವೊಮ್ಮೆ ತನ್ನ ಕೊಳಚೆ ಪ್ರದೇಶದ ಮನೆ ಬಳಿ ಇರುವ ಹರುಕು ಮುರುಕು ಸಿನಿಮಾ ಮಂದಿರದಲ್ಲಿ ಕಡಿಮೆ ದರ್ಜೆಯ ಸಿನಿಮಾಗಳನ್ನು ನೋಡುತ್ತಾ ಒಂದೇ ತೆರನಾದ ತನ್ನ ಜೀವನಕ್ಕೆ ಮರಳುತ್ತಾನೆ.

ಅವರು ವಾಸಿಸುವ ಸ್ಥಳದಿಂದ ಎಂಟು ಕಿಲೋಮೀಟರುಗಳ ದೂರದಲ್ಲಿ ರಂಗಮಂದಿರ ವೊಂದು ಉದಯವಾಯಿತು. ಹಲವಾರು ನಟನಟಿಯರು, ನಿರ್ದೇಶಕರು, ನಾಟಕಕಾರರು, ಕವಿಗಳು ,ಸಂಗೀತಗಾರರು, ತಂತ್ರಜ್ಞರು, ವಿಮರ್ಶಕರು ರಂಗಮಂದಿರದಲ್ಲಿ ನಿರಂತರವಾಗಿ ದುಡಿಯ ತೊಡಗಿದರು. ಅವರು ಜನಪದ ಮತ್ತು ರೂಪಕಗಳಿಂದ ಜನಪದ ಮತ್ತು ಸಂಗೀತ ರೂಪಕಗಳಿಂದ ಹಿಡಿದು ವಾಸ್ತವಿಕ ಮತ್ತು ಅಸಂಗತ ನಾಟಕಗಳ ವರೆಗೆ ಧಾರ್ಮಿಕತೆಯಿಂದ ಹಿಡಿದು ಸಾಮಾಜಿಕ ಅಥವಾ ಕ್ರಾಂತಿಕಾರಕ ನಾಟಕಗಳ ವರೆಗೆ, ಕಾಳಿದಾಸ ಮತ್ತು ಷೇಕ್ಸ್ಫಿಯರ್‌ ನಿಂದ ಹಿಡಿದು ಒಯನೆಸ್ಕೊ ಮತ್ತು ಬ್ರೆಕ್ಟ್ ವರೆಗೆ ನಾಟಕಗಳನ್ನು ಪ್ರದರ್ಶಿಸಿದರು. ಇಂತಹ ನಾಟಕಗಳನ್ನು ದೆಹಲಿಯ ಒಳ ಮತ್ತು ಹೊರಗಿನ ತ್ರಿವೇಣಿ, ಕಮನಿ, ಎಲ್ ಟಿ ಜಿ, ಏ ಎಫ್ ಎ.ಸಿ ಎಸ್.,ಶ್ರೀರಾಮ ಕೇಂದ್ರ. ಮತ್ತು ಪ್ಯಾರೇಲಾಲ್‌ ಭವನ ಮುಂತಾದ ಕಡೆ ಜನ ಕಿಕ್ಕಿರಿದು ನೋಡಿದರು.

ಲಾಲೂರಾಮನಿಗೆ ಈ ಜನರ ಬಗ್ಗೆ ಹಾಗೂ ಈ ಸ್ಥಳಗಳ ಬಗ್ಗೆ ಏನೇನೂ ಗೊತ್ತಿರಲಿಲ್ಲ ಈ ಜನಗಳಿಗೂ ಸಹ ಲಾಲುರಾಮ ಗೊತ್ತಿರಲಿಲ್ಲ. ಲಾಲುರಾಮನಿಗೋಸ್ಕರ ಯಾವುದೇ ರಂಗಭೂಮಿ ಇರಲಿಲ್ಲ. ಯಾವುದೇ ರಂಗಭೂಮಿಯಲ್ಲಿಯೂ ಲಾಲುರಾಮ ಇರಲಿಲ್ಲ ಅಥವಾ 1973 ರಲ್ಲಿ”ಜನ ನಾಟ್ಯ ಮಂಚ” ಲಾಲೂರಾಮ ವಾಸಿಸತಕ್ಕಂತಹ ಸ್ಥಳದಲ್ಲಿ ನಾಟಕಗಳನ್ನು ಪ್ರದರ್ಶಿಸುವ ವರೆಗೂ ಈ ಸ್ಥಿತಿ ಹೀಗೇ ಇತ್ತು. ಈಗ ಲಾಲೂರಾಮ ಜನ ನಾಟ್ಯ ಮಂಚದ ಒಂದು ಭಾಗವನೋ ಎಂಬಷ್ಟರ ಮಟ್ಟಿಗೆ ಅದನ್ನು ಕುರಿತು ಮಾತನಾಡುತ್ತಾನೆ. ಶೋಷಿತರ 

ಅವು ಪ್ರದರ್ಶಿಸುವ ಮುಂದಿನ ನಾಟಕದ ಬಗ್ಗೆತುಂಬ ಆಸಕ್ತಿ, ಹೊಸ ನಾಟಕವನ್ನು ಪ್ರದರ್ಶಿಸುವ ಸುದ್ದಿಯನ್ನು ಕೇಳಿದೊಡನೆ ಅದರ ಬಗ್ಗೆ ಅವನು ಪ್ರಚಾರಮಾಡುವನು. ನಾಟಕವನ್ನು ಪ್ರದರ್ಶಿಸುವ ದಿನ ಪದೇಪದೇ ಅವನು “ಹೊಸನಾಟಕವನ್ನು ನೋಡಿಸುವಿರಾ? ಆ ನಾಟಕವನ್ನು ಮತ್ತೊಮ್ಮೆ ಪ್ರದರ್ಶಿಸುವುದಿಲ್ಲವಾ”? ಎಂದೆಲ್ಲ ಕೇಳುವನು…. ಬೀದಿ ನಾಟಕ ಚಳುವಳಿ ಕರ್ನಾಟಕದಲ್ಲಿ ಹುಟ್ಟಿದೆ. ಚಿತ್ರಾ ಬೀದಿ ನಾಟಕ ತಂಡ ಅನೇಕ ಕಡೆ ನಾಟಕಗಳನ್ನಾಡಿದೆ ; ಯಶಸ್ವಿ ನಾಟಕೋತ್ಸವಗಳನ್ನು ಮಾಡಿದೆ. ‘ಸಮುದಾಯ’ದ ಜಾಥಾ ಬೀದಿ ನಾಟಕ ಪ್ರದರ್ಶನದ ಕಾರ್ಯಕ್ರಮವೇ ಆಗಿದೆ.

ದೆಹಲಿಯಲ್ಲಿ ಮತ್ತು ದೆಹಲಿಯ ಸುತ್ತ ಮುತ್ತ ಎರಡು ದಿನಕ್ಕೊಂದಾದರೂ ಬೀದಿ ನಾಟಕವನ್ನು ನೀಡುತ್ತಿರುವ ನಾಟಕ ತಂಡ ‘ಜನನಾಟ್ಯಮಂಚ’, ಯಾವುದೇ ಫ್ಯಾಕ್ಟರಿಯ ಕೆಲಸಗಾರರು ಧರಣಿ ಹೂಡಲಿ, ಮೆರವಣಿಗೆ ಹೊರಡಲಿ, ಯಾವುದೇ ಹಬ್ಬ ಆಚರಿಸಲಿ, ಯಾವುದೇ ಮಹಿಳಾ ಸಂಘಟನೆ ಕಾರ್ಯಕ್ರಮ ಮಾಡಲಿ, ಪ್ರಗತಿಪರ, ರೈತ ಸಂಘಟನೆ, ಯುವ ಸಂಘಟನೆ, ವಿದ್ಯಾರ್ಥಿ ಸಂಘಟನೆಗಳು ಏನೇ ಕಾರ್ಯಕ್ರಮ ಮಾಡಲಿ ಅಲ್ಲಿ ‘ಜನ ನಾಟ್ಯಮಂಚ’ದ ನಾಟಕಗಳ ಪ್ರದರ್ಶನ ಇದ್ದೇ ಇರುತ್ತದೆ. ಇತ್ತೀಚೆಗೆ ಇವರು ಪತ್ರಕರ್ತರ ಮುಷ್ಕರದ ಸಂದರ್ಭದಲ್ಲಿ, ರಿಸರ್ವ್ ಬ್ಯಾಂಕ್ ನೌಕರರು Computarisation ವಿರುದ್ದ ಹೂಡಿದ ಧರಣಿಯಲ್ಲಿ, ವರದಕ್ಷಿಣೆಯ ವಿರುದ್ಧ ನಡೆದ ಮಹಿಳಾ ಸಂಘಟನೆಗಳ ಮೆರವಣಿಗೆಯ ಕೊನೆಯಲ್ಲಿ ಸಾಂದರ್ಭಿಕವಾದ ನಾಟಕಗಳನ್ನಾಡಿದರು.

‘ಜನನಾಟ್ಯಮಂಚ’ ತಿಂಗಳಿಗೆ 20 ಪ್ರದರ್ಶನಗಳನ್ನು ನೀಡುತ್ತದೆ. ಇದರ ಸದಸ್ಯ ರೆಲ್ಲರೂ ಬೇರೆ ಬೇರೆ ಕಛೇರಿಗಳಲ್ಲಿ ಉದ್ಯೋಗಿಗಳು, ಪತ್ರಕರ್ತರು, ಪ್ರೆಸ್ ಕೆಲಸಗಾರರು, ಬ್ಯಾಂಕ್ ನೌಕರರು, ಸರ್ಕಾರಿ ಕಛೇರಿಗಳ ಕೆಲಸಗಾರರು-ಹೀಗೆ ಎಲ್ಲ ತರಹದವರೂ ‘ಜನ ನಾಟ್ಯಮಂಚ’ ದಲ್ಲಿದ್ದಾರೆ. ಮೊದಲು ದೆಹಲಿ ವಿಶ್ವವಿದ್ಯಾನಿಲಯದಲ್ಲಿ ಹಿಂದಿಪ್ರಾಧ್ಯಾಪಕ ರಾಗಿದ್ದು, ಈಗ ಕೆಲಸ ಬಿಟ್ಟು ಸಣ್ಣ ಪ್ರೆಸ್ ಒಂದನ್ನು ಇಟ್ಟಿರುವ ಮನೀಷ್ ‘ಜನನಾಟ್ಯ ಮಂಚ’ದ ಸಂಚಾಲಕರು.

ಈ ವಿಡಿಯೋ ನೋಡಿರಂಗಭೂಮಿ, ಬೀದಿ ಪ್ರಜ್ಞೆ ಮತ್ತು ಸಫ್ದರ್‌ ಹಶ್ಮಿ – ಶ್ರೀಪಾಧ್‌ ಭಟ್  ಶೋಷಿತರ

 

 

 

Donate Janashakthi Media

Leave a Reply

Your email address will not be published. Required fields are marked *