ಐಪಿಎಲ್‌ಗಿಂತ ದೇಶದ ಆಟಕ್ಕೆ ಆದ್ಯತೆ ನೀಡಿ: ಮಾಜಿ ನಾಯಕ ಕಪಿಲ್ ದೇವ್

ನವದೆಹಲಿ: ಕ್ರಿಕೆಟ್‌ ಆಟದ ಟಿ20 ವಿಶ್ವಕಪ್ ಟೂರ್ನಿಯಿಂದ ಹೊರಬಿದ್ದ ಭಾರತ ತಂಡದ ಕುರಿತು ಮಾಜಿ ನಾಯಕ ಕಪಿಲ್ ದೇವ್ ಅವರು ಹೇಳಿಕೆ ನೀಡಿದ್ದು, ದೇಶಕ್ಕಿಂತ ಐಪಿಎಲ್ ಹೆಚ್ಚಾದಾಗ ಹೀಗಾಗುತ್ತದೆ ಎಂದು ಹೇಳಿದ್ದಾರೆ.

ಆಟಗಾರರು ದೇಶಕ್ಕಿಂತ ಐಪಿಎಲ್‌ಗೆ ಆದ್ಯತೆ ನೀಡುತ್ತಾರೆ. ಇದನ್ನು ತಪ್ಪಿಸಲು ಭಾರತೀಯ ಕ್ರಿಕೆಟ್‌ನ ವೇಳಾಪಟ್ಟಿಯನ್ನು ಉತ್ತಮವಾಗಿ ಯೋಜಿಸುವಂತೆ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿಯನ್ನು (ಬಿಸಿಸಿಐ) ಒತ್ತಾಯಿಸಿದ 1983 ರಲ್ಲಿ ಭಾರತದ ವಿಶ್ವಕಪ್ ಗೆಲುವಿಗೆ ಕಾರಣವಾದ ಕಪಿಲ್ ದೇವ್ ಕೆಲವು ಆಟಗಾರರು ರಾಷ್ಟ್ರೀಯ ತಂಡದಲ್ಲಿ ಆಡುವುದಕ್ಕಿಂತ ಇಂಡಿಯನ್ ಪ್ರೀಮಿಯರ್ ಲೀಗ್ ಗೆ ಹೆಚ್ಚಿನ ಆದ್ಯತೆ ನೀಡುತ್ತಾರೆ ಎಂದರು.

ಇದನ್ನು ಓದಿ: ಕ್ರಿಕೆಟ್‌ ಎಂದರೆ ಬರೀ ಆಟವಲ್ಲ; ಭಾರತ-ಪಾಕಿಸ್ತಾನ ನಡುವಿನ ಪಂದ್ಯದ ಭಾರೀ ಲಾಭ ಯಾರಿಗೆ?

ದೇಶಕ್ಕಾಗಿ ಆಡುವುದಕ್ಕಾಗಿ ಆಟಗಾರರು ಹೆಮ್ಮೆಪಟ್ಟುಕೊಳ್ಳಬೇಕು. ಅವರ ಆರ್ಥಿಕ ಸ್ಥಿತಿ ಬಗ್ಗೆ ನನಗೆ ತಿಳಿದಿಲ್ಲ, ಆದ್ದರಿಂದ ಹೆಚ್ಚು ಹೇಳಲಾರೆ. ‘ದೇಶಕ್ಕೆ ಮೊದಲ ಆದ್ಯತೆ ನೀಡಬೇಕು. ಬಳಿಕವಷ್ಟೇ ಫ್ರಾಂಚೈಸಿ ತಂಡ ಎಂದು ನಾನು ಭಾವಿಸುತ್ತೇನೆ’ ಎಂದು ‘ಎಬಿಪಿ’ ನ್ಯೂಸ್‌ಗೆ ತಿಳಿಸಿದ್ದಾರೆ.

ನನ್ನ ಮಟ್ಟಿಗೆ ರಾಷ್ಟ್ರೀಯ ತಂಡವೇ ಮೊದಲ ಆದ್ಯತೆಯಾಗಿರಬೇಕು ಎಂದು ನಾನು ನಂಬುತ್ತೇನೆ. ಈ ಪಂದ್ಯಾವಳಿಯಲ್ಲಿ ಮಾಡಿದ ತಪ್ಪುಗಳನ್ನು ಪುನರಾವರ್ತಿಸದಿರಲು ನಾವು ಬದ್ಧತೆ ಪ್ರದರ್ಶಿಸಬೇಕಿದೆ ಈಗ ಭವಿಷ್ಯದತ್ತ ದೃಷ್ಟಿ ಹಾಯಿಸಬೇಕಿದೆ. ಈಗಿನಿಂದಲೇ ಯೋಜನೆ ಸಿದ್ಧಗೊಳಿಸಬೇಕು. ವಿಶ್ವಕಪ್‌ನೊಂದಿಗೆ ಭಾರತದ ಇಡೀ ಕ್ರಿಕೆಟ್ ಮುಗಿದಿದೆ ಎಂಬುದಲ್ಲ. ಹೋಗಿ ಯೋಜನೆ ರೂಪಿಸಿಕೊಳ್ಳಿ! ಐಪಿಎಲ್ ಹಾಗೂ ವಿಶ್ವಕಪ್ ನಡುವೆ ಅಂತರ ಇರಬೇಕು ಎಂಬುದು ನನ್ನ ಅನಿಸಿಕೆಯಾಗಿದೆ. ಎಲ್ಲರೂ ಸೋಲಿನ ಹೊಣೆ ಹೊತ್ತುಕೊಳ್ಳಬೇಕು’ ಎಂದು ಕಪಿಲ್ ಹೇಳಿದರು.

Donate Janashakthi Media

Leave a Reply

Your email address will not be published. Required fields are marked *