ಕ್ರಿಕೆಟ್‌ ಎಂದರೆ ಬರೀ ಆಟವಲ್ಲ; ಭಾರತ-ಪಾಕಿಸ್ತಾನ ನಡುವಿನ ಪಂದ್ಯದ ಭಾರೀ ಲಾಭ ಯಾರಿಗೆ?

ವಿನೋದ ಶ್ರೀರಾಮಪುರ

ಕ್ರಿಕೆಟ್‌ ಎಂಬ ಆಟ, ಈಗ ಬರೀ ಪಂದ್ಯಾವಳಿ ಮಾತ್ರವಲ್ಲ, ಅದರಿಂದ ಕೆಲವರಿಗೆ ಲಾಭವೂ, ಹೌದು ನಷ್ಟವೂ ಹೌದು. ಆದರೂ ಕೆಲವು ಸಂದರ್ಭದಲ್ಲಿ ಹಣ ಮಾಡಿಕೊಳ್ಳಲು ಬೇಕಾದ ಎಲ್ಲಾ ಗುಣಲಕ್ಷಣಗಳು ಈ ಪಂದ್ಯಕ್ಕೆ ಇದೆ.

ಕೆಲವು ದಶಕಗಳ ಹಿಂದೆ ಕ್ರಿಕೆಟ್‌ ಎಂಬ ಪಂದ್ಯ ದೇಶಗಳ ನಡುವಿನೆ ಕಾದಾಟ ಒಂದು ರೋಚಕತೆ ಅನುಭವಿಸುವಂತೆ ಮಾಡುತ್ತಿತ್ತು. ಹೀಗೆ ಕೆಲವು ಕೆಲವು ವರ್ಷಗಳಿಂದ ಕ್ರಿಕೆಟ್‌ ಪಂದ್ಯಾವಳಿಯಲ್ಲಿ ಸಾಕಷ್ಟು ಬದಲಾವಣೆಗಳು ಆಗಿವೆ. ಅದರಲ್ಲೂ ಐಪಿಎಲ್‌ ಎಂಬ ಪಂದ್ಯಾವಳಿ ಆರಂಭವಾದಾಗಿನಿಂದ ಹಣ ಮಾಡಿಕೊಳ್ಳುವುದೇ ಪ್ರಧಾನ ಎಂಬಂತೆ ಬಿಂಬಿತವಾಗುತ್ತಿದೆ. ಪ್ರಮುಖವಾಗಿ ಆಟಗಾರರು ತಮ್ಮನ್ನು ತಾವು ಹರಾಜು ಹಾಕಿಕೊಳ್ಳುವ ಮೂಲಕ ಕ್ರಿಕೆಟ್‌ ಕಾದಾಟಕ್ಕೆ ಇಳಿಯುತ್ತಾರೆ. (ಬೇರೆ ಪಂದ್ಯಾವಳಿಗೂ ಹಣ ಪಡೆಯುತ್ತಾರೆ. ಅದು ಸಂಭಾವನೆ ಅಥವಾ ವೇತನ ಎಂದು ಎನ್ನಲಾಗುತ್ತದೆ.)

ಬೇರೆ ದೇಶಗಳು ಬಿಡಿ, ಭಾರತದಲ್ಲಿ ಕ್ರಿಕೆಟ್‌ ಎಂದರೆ ಕೆಲವರಿಗೆ ಹುಚ್ಚುಹಿಡಿದ ಆಟವಾಗಿದೆ. ಅದರಲ್ಲೂ ಪಂದ್ಯಗಳು ಈಗ ಮೈದಾನದಲ್ಲಿ ಅಲ್ಲ, ದೂರದರ್ಶನದ ಮೂಲಕ ನೋಡುವ ಅವಕಾಶ ಸಿಕ್ಕಾಗಿನಿಂದ ಕ್ರಿಕೆಟ್‌ ಎಂಬ ಆಟ ಹೆಚ್ಚು ಜನರು ವೀಕ್ಷಕರನ್ನು ಗಳಿಸಿಕೊಂಡಿದೆ.

ಇದನ್ನು ಓದಿ: ಟಿ20 ವಿಶ್ವಕಪ್ ಸೂಪರ್‌ 12 ಹಂತ ಆರಂಭ: ಆಸ್ಟ್ರೇಲಿಯಾ-ದಕ್ಷಿಣ ಆಫ್ರಿಕಾ ತಂಡಗಳ ಸೆಣಸಾಟ

ಅದರಲ್ಲೂ ಭಾರತ ಹಾಗೂ ಪಾಕಿಸ್ತಾನ ನಡುವಿನ ಪಂದ್ಯವನ್ನು ಒಂದು ರೀತಿಯಲ್ಲಿ ಎರಡು ದೇಶಗಳ ಯುದ್ಧವೆಂಬಂತೆಯೇ ಬಿಂಬಿಸಿಕೊಳ್ಳುತ್ತದೆ. ಎರಡೂ ದೇಶಗಳಲ್ಲಿ ಕ್ರಿಕೆಟ್‌ ಎಂಬುದನ್ನು ಪಂದ್ಯವಾಗಿ ವೀಕ್ಷಣೆ ಮಾಡದೆ, ಒಂದು ದೊಡ್ಡ ಸಮರದ ಕಾದಾಟ ಎಂಬಂತೆಯೇ ವೀಕ್ಷಕರನ್ನು ಸೆಳೆಯಲಿದೆ.

ಭಾರತ ಹಾಗೂ ಪಾಕಿಸ್ತಾನಗಳ ನಡುವಿನ  ಪಂದ್ಯ ಒಂದು ಪ್ರತಿಷ್ಠೆ ಎಂಬಂತೆ ಬಿಂಬಿಸಲು ಹೊರಟಿದೆ. ಅದರಲ್ಲೂ ಮಾಧ್ಯಮಗಳಿಗೆ ಭಾರತ ಹಾಗೂ ಪಾಕಿಸ್ತಾನಗಳ ನಡುವಿನ ಪಂದ್ಯಗಳ ಸುದ್ದಿಗಳಂತೂ ಹೆಚ್ಚು ಟಿಆರ್‌ಪಿ ಕೊಡುವ ವಿಚಾರ.

ಈ ಬಾರಿಯ ಈಗ ಟಿ20 ವಿಶ್ವಕಪ್‌ ಪಂದ್ಯಾವಳಿಗಳು ನಡೆಯಲಿದ್ದು, ಭಾರತ ಹಾಗೂ ಪಾಕಿಸ್ತಾನ ನಡುವಿನ ರಣರೋಚಕ ಪಂದ್ಯಾಟಕ್ಕೆ ವಿಶ್ವಕಪ್ ವೇದಿಕೆ ಸಜ್ಜಾಗುತ್ತಿದೆ. ಪಂದ್ಯವನ್ನು ವೀಕ್ಷಿಸಲು ಕ್ರಿಕೆಟ್ ಅಭಿಮಾನಿಗಳು ಹಾತೊರೆಯುತ್ತಿದ್ದಾರೆ.

ಪಂದ್ಯವನ್ನು ಮೈದಾನಕ್ಕೆ ತೆರಳಿ ನೋಡಲು ಆಗದೆ ಇದ್ದವರು, ಟಿವಿಯಲ್ಲಿ ಅಂತೂ ನೋಡೇ ನೋಡುತ್ತಾರೆ. ಹಾಗಾಗಿ ಈ ಪಂದ್ಯವನ್ನು ಪ್ರಸಾರ ಮಾಡುವ ಖಾಸಗಿ, ವಾಹಿನಿ ಪಂದ್ಯದ ಸಮಯದಲ್ಲಿ ಪ್ರಸಾರವಾಗುವ ಜಾಹೀರಾತುಗಳ ದರವನ್ನು ಹೆಚ್ಚಿಸಿಕೊಂಡಿದೆ.

ಇದನ್ನು ಓದಿ: ಸಿಡ್ನಿ ಕ್ರಿಕೆಟ್ ಮೈದಾನದಲ್ಲಿ ಉದ್ಯಮಿ ಅದಾನಿ ವಿರುದ್ಧ ಪ್ಲೇಕಾರ್ಡ್ ಪ್ರದರ್ಶಿಸಿ ಆಕ್ರೋಶ

ಭಾರತ ಮತ್ತು ಪಾಕಿಸ್ತಾನ ನಡುವಿನ ಪಂದ್ಯವನ್ನು ಪ್ರತಿ ಬಾರಿ ವೀಕ್ಷಕರು ಹೆಚ್ಚಿನ ಸಂಖ್ಯೆಯಲ್ಲಿ ವೀಕ್ಷಿಸುತ್ತಾರೆ. ಈ ಬಾರಿ ವೀಕ್ಷಕರ ಸಂಖ್ಯೆ ಕೂಡ ಏರಿಕೆಯಾಗುವ ಸಾಧ್ಯತೆ ಇದ್ದು, ಪ್ರಮುಖವಾಗಿ ಟಿವಿ ಅಲ್ಲದೆ, ಆನ್‍ಲೈನ್ ವೇದಿಕೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ನೋಡುವ ಸಾಧ್ಯತೆಯಿದೆ.

ಟಿ20 ವಿಶ್ವಕಪ್‌ ನೇರ ಪ್ರಸಾರ ಮಾಡುತ್ತಿರುವ ಖಾಸಗಿ ವಾಹಿನಿಗೆ ಜಾಹೀರಾತಿಗಳಿಂದಲೇ ಹಣದ ಹೊಳೆ ಹರಿಯಲಿದೆ. ಪಂದ್ಯ ಪ್ರಸಾರದ ಸಮಯದಲ್ಲಿ 10 ಸೆಕೆಂಡ್‍ನ ಜಾಹೀರಾತು ದರ ಬರೋಬ್ಬರಿ 30 ಲಕ್ಷ ರೂ.ಗೆ ಮಾರಾಟವಾಗಿದೆ ಎಂದು ವರದಿಯಾಗಿದೆ.

ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗಲಿರುವ ಪಂದ್ಯದಲ್ಲಿ ಪ್ರತಿ 10 ಸೆಕೆಂಡ್‍ಗೆ 25 ರಿಂದ 30 ಲಕ್ಷ ರೂ.ಗೆ ಮಾರಾಟ ಮಾಡುತ್ತಿದೆ ಎಂದು ಮಾಧ್ಯಮವೊಂದು ವರದಿ ಮಾಡಿದೆ. ಇದು ಭಾರತದ ವಾಹಿನಿಯೊಂದು ಅತಿಹೆಚ್ಚು ಮೊತ್ತಕ್ಕೆ ಜಾಹೀರಾತು ಮಾರಾಟ ಮಾಡಿ ದಾಖಲೆ ಬರೆಯುವ ಸನಿಹದಲ್ಲಿದೆ.

ಖಾಸಗಿ ವಾಹಿನಿ ಪ್ರಮುಖವಾಗಿ ಭಾರತ ಹಾಗೂ ಪಾಕಿಸ್ತಾನ ನಡುವಿನ ಪಂದ್ಯವಲ್ಲದೆ, ಭಾರತ ಆಡಲಿರುವ ಎಲ್ಲಾ ಪಂದ್ಯಗಳ 10 ಸೆಕೆಂಡ್ ಜಾಹೀರಾತಿಗೆ 9 ರಿಂದ 10 ಲಕ್ಷ ರೂ. ನಿಗದಿ ಮಾಡಿದ್ದು, ಈಗಾಗಲೇ ಜಾಹೀರಾತು ಪ್ರಸಾರದ ಸಮಯಗಳು ನಿಗದಿಯಾಗಿವೆ ಎಂದು ಮೂಲಗಳಿಂದ ತಿಳಿದು ಬಂದಿದೆ.

ಜಾಹೀರಾತಿನಿಂದಲೇ 270 ಕೋಟಿಗೂ ರೂ. ಹೆಚ್ಚು ಆದಾಯದ ನಿರೀಕ್ಷೆಯಲ್ಲಿದೆ ವಾಹಿನಿಗಳು. ವಿಶ್ವಕಪ್ ಪಂದ್ಯದ ಇತರ ಪಂದ್ಯಗಳಿಂತ ಭಾರತ ವಿರುದ್ಧ ನಡೆಯಲಿರುವ ಪಂದ್ಯಗಳಿಗೆ ಬೇಡಿಕೆ ಹೆಚ್ಚಿದೆ ಎನ್ನಲಾಗಿದೆ.

Donate Janashakthi Media

Leave a Reply

Your email address will not be published. Required fields are marked *