ಥೈಲ್ಯಾಂಡ್ : ಥೈಲ್ಯಾಂಡ್ ನಲ್ಲಿ ಸಣ್ಣ ವಿಮಾನವೊಂದು ಪತನಗೊಂಡಿದ್ದು, 9 ಮಂದಿ ಸಾವನ್ನಪ್ಪಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ. ಥೈಲ್ಯಾಂಡ್
ರಾಜಧಾನಿ ಬ್ಯಾಂಕಾಂಕ್ನಿಂದ ಟೇಕ್ ಆಫ್ ಆಗಿ ಸ್ವಲ್ಪ ಸಮಯದ ಬಳಿಕ ಪತನಗೊಂಡಿದೆ. ಥಾಯ್ ಸ್ಥಳೀಯ ಮಾಧ್ಯಮಗಳ ವರದಿ ಪ್ರಕಾರ, ವಿಮಾನ ನಿಲ್ದಾಣದಿಂದ ಸುಮಾರು 40 ಕಿ.ಮೀ ದೂರದಲ್ಲಿರುವ ಮ್ಯಾಂಗ್ರೋವ್ ಜೌಗು ಪ್ರದೇಶದಲ್ಲಿ ವಿಮಾನದ ಅವಶೇಷಗಳು ಕಂಡುಬಂದಿವೆ.
ಇದನ್ನು ಓದಿ : ವೈದ್ಯೆ ಹತ್ಯೆ ಪ್ರಕರಣದಲ್ಲಿ ರಾಜಕೀಯ ಮಾಡಬೇಡಿ: ಕೇಂದ್ರ, ಬಂಗಾಳಕ್ಕೆ ಸುಪ್ರೀಂ ತಪರಾಕಿ
ಥೈಲೆಂಡ್ನಲ್ಲಿ ಪ್ರಯಾಣಿಕರ ಸಣ್ಣ ವಿಮಾನವೊಂದು ಪತನಗೊಂಡಿದ್ದು, 9 ಮಂದಿ ಸಾವನ್ನಪ್ಪಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ. ರಾಜಧಾನಿ ಬ್ಯಾಂಕಾಂಕ್ನಿಂದ ಟೇಕ್ ಆಫ್ ಆಗಿ ಸ್ವಲ್ಪ ಸಮಯದ ಬಳಿಕ ಪತನಗೊಂಡಿದೆ. ಥಾಯ್ ಸ್ಥಳೀಯ ಮಾಧ್ಯಮಗಳ ವರದಿ ಪ್ರಕಾರ, ವಿಮಾನ ನಿಲ್ದಾಣದಿಂದ ಸುಮಾರು 40 ಕಿ.ಮೀ ದೂರದಲ್ಲಿರುವ ಮ್ಯಾಂಗ್ರೋವ್ ಜೌಗು ಪ್ರದೇಶದಲ್ಲಿ ವಿಮಾನದ ಅವಶೇಷಗಳು ಕಂಡುಬಂದಿವೆ.
ಟೇಕ್ ಆಫ್ ಆದ 11 ನಿಮಿಷಗಳ ಬಳಿಕ ಏರ್ ಟ್ರಾಫಿಕ್ ಕಂಟ್ರೋಲ್ ಸಂಪರ್ಕವನ್ನು ಕಳೆದುಕೊಂಡರು. ಆ ಸಮಯದಲ್ಲಿ ವಿಮಾನವು ನಿಲ್ದಾಣದಿಂದ 35 ಕಿಲೋಮೀಟರ್ ದೂರದಲ್ಲಿತ್ತು.ಅದು ಆಗ್ನೇಯಕ್ಕೆ 275 ಕಿಲೋಮೀಟರ್ ದೂರದಲ್ಲಿರುವ ಟ್ರೀಟ್ನ ಕರಾವಳಿ ಪ್ರಾಂತ್ಯದ ಕಡೆಗೆ ಹೋಗುತ್ತಿತ್ತು. ಥೈಲ್ಯಾಂಡ್
300ಕ್ಕೂ ಹೆಚ್ಚು ಸೇನಾ ಸಿಬ್ಬಂದಿ ಮತ್ತು ಸ್ವಯಂಸೇವಕರನ್ನು ಶೋಧ ಕಾರ್ಯದಲ್ಲಿ ನಿಯೋಜಿಸಲಾಗಿದ್ದು, ಅಪಘಾತದ ಕಾರಣವನ್ನು ಗುರುತಿಸಲು ಅಧಿಕಾರಿಗಳು ತನಿಖೆ ಆರಂಭಿಸಿದ್ದಾರೆ.
ಇದನ್ನು ನೋಡಿ : “ಸಂಜೆ ಹೆಣ್ಣುಮಕ್ಕಳು ನೆಮ್ಮದಿಯಾಗಿ ಓಡಾಡಬೇಕಾದರೆ ಗಂಡಸು ಮನೆಯೊಳಗಿರಬೇಕು” ವಿಕಿಪೀಡಿಯಾ ಜಾಗೃತಿ