ದೇವೆಗೌಡರ ಹೇಳಿಕೆ ನಿರಾಕರಿಸಿದ ಪಿಣರಾಯಿ ವಿಜಯನ್

ತಿರುವನಂತಪುರ : ಕರ್ನಾಟಕದಲ್ಲಿ ಜೆಡಿಎಸ್-ಬಿಜೆಪಿ ಮೈತ್ರಿಯೊಂದಿಗೆ ಮುಂದುವರಿಯಲು ಪಿಣರಾಯಿ ಸಂಪೂರ್ಣ ಒಪ್ಪಿಗೆ ನೀಡಿದ್ದಾರೆ ಎಂಬ ಜೆಡಿಎಸ್ ವರಿಷ್ಠ ಎಚ್.ಡಿ. ದೇವೆಗೌಡ ಅವರ ಹೇಳಿಕೆಯನ್ನು ಕೇರಳದ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ತಿರಸ್ಕರಿಸಿದ್ದಾರೆ.

ಈ ಹೇಳಿಕೆ ಕುರಿತಂತೆ ದೇವೆಗೌಡರ ವಿರುದ್ಧ ತೀವ್ರ ವಾಗ್ದಾಳಿ ನಡೆಸಿರುವ ಪಿಣರಾಯಿ ವಿಜಯನ್, ತಮ್ಮ ಸ್ವಂತ ರಾಜಕೀಯ ನಿಲುವನ್ನು ಸಮರ್ಥಿಸಿಕೊಳ್ಳುವ ದೇವೆಗೌಡರ ಇಂತಹ ಹೇಳಿಕೆ ತಪ್ಪು ಹಾಗೂ ಅಸಂಬದ್ಧ, ದೇವೆಗೌಡ ಹೇಳಿದಂತೆ ನಾನು ಒಪ್ಪಿಕೊಂಡಿಲ್ಲ ಎಂದರು. ತಾನು ಇತ್ತೀಚೆಗೆ ದೇವೆಗೌಡರನ್ನು ಭೇಟಿ ಮಾಡಿಲ್ಲ ಹಾಗೂ ಮಾತುಕತೆ ನಡೆಸಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

ದೇವೆಗೌಡ ಅವರು ಬಿಜೆಪಿಯೊಂದಿಗೆ ಕೈಜೋಡಿಸುತ್ತಿರುವುದು ಇದು ಮೊದಲನೇ ಬಾರಿ ಅಲ್ಲ. ಈ ಹಿಂದೆ 2006ರಲ್ಲಿ ಅವರು ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಂಡಿದ್ದರು. ತನ್ನ ಪುತ್ರನಿಗೆ ಮುಖ್ಯಮಂತ್ರಿ ಹುದ್ದೆಗಾಗಿ ದೇವೆಗೌಡ ಅವರು ಬಿಜೆಪಿಯೊಂದಿಗೆ ಕೈಜೋಡಿಸಲು ಬಯಸಿದ್ದರು. ದೇವೆಗೌಡರ ಅವಕಾಶವಾದಿ ರಾಜಕೀಯ ನಿಲುವನ್ನು ವಿರೋದಿಸಿ ಈ ಹಿಂದೆ ಕೇರಳದ ಜೆಡಿಎಸ್ ನಾಯಕ ಸುರೇಂದ್ರ ಮೋಹನ್ ಪಕ್ಷ ತ್ಯಜಿಸಿದ್ದರು ಎಂದು ಪಿಣರಾಯಿ ವಿಜಯನ್ ನೆನಪಿಸಿದರು.

ಇದನ್ನೂ ಓದಿ“ಕೇಂದ್ರ ಸರಕಾರ” ರಾಜ್ಯಗಳ ಕತ್ತು ಹಿಸುಕುವ ಕೆಸಲ ಮಾಡುತ್ತಿದೆ – ಪಿಣರಾಯಿ ವಿಜಯನ್

ಎನ್‌ಡಿಎ ಮೈತ್ರಿಕೂಟವನ್ನು ಜೆಡಿಎಸ್‌ನ ರಾಜ್ಯ ಘಟಕವು ಒಪ್ಪುವುದಿಲ್ಲ. ಈ ಬಗ್ಗೆ ದೇವೇಗೌಡರಿಗೆ ತಿಳಿಸಲಾಗಿದೆ. ದೇವೇಗೌಡರು ಮತ್ತು ವಿಜಯನ್ ಅವರ ನಡುವೆ ಯಾವುದೇ ಮಾತುಕತೆ ನಡೆದಿಲ್ಲ ರಾಜ್ಯದ ಹಿರಿಯ ಜೆಡಿಎಸ್ ನಾಯಕರಾದ ಕೃಷ್ಣನ್‌ಕುಟ್ಟಿ ಮತ್ತು ಮ್ಯಾಥ್ಯೂ ಟಿ ಥಾಮಸ್ ಸ್ಪಷ್ಟಪಡಿಸಿದ್ದಾರೆ. ದೇವೆಗೌಡರ ಹೇಳಿಕೆ ತಪ್ಪಾಗಿರಬಹುದು ಅಥವಾ ಅವರ ವಯಸ್ಸಿನ ಸಮಸ್ಯೆಗಳ ಕಾರಣದಿಂದಾಗಿರಬಹುದು. ಇಬ್ಬರೂ ಸಂವಹನ ನಡೆಸಿ ವರ್ಷಗಳೇ ಕಳೆದಿವೆ ಎಂದು ಮ್ಯಾಥ್ಯೂ ಟಿ ಥಾಮಸ್ ಹೇಳಿದ್ದಾರೆ.

ದೇವೆಗೌಡ ಹೇಳಿದ್ದೇನು?: ಬೆಂಗಳೂರಿನಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ್ದ ದೇವೇಗೌಡರು, ಎನ್‌ಡಿಎ ಮೈತ್ರಿಕೂಟಕ್ಕೆ ಕೇರಳದ ರಾಜ್ಯ ಘಟಕ ಸಮ್ಮತಿ ನೀಡಿದೆ. ಎಲ್‌ಡಿಎಫ್‌ ಸಚಿವ ಸಂಪುಟದಲ್ಲಿರುವ ಜೆಡಿಎಸ್‌ ಮುಖಂಡ ಕೆ.ಕೃಷ್ಣನ್‌ಕುಟ್ಟಿ ಕೂಡ ಮೈತ್ರಿಗೆ ಒಪ್ಪಿಗೆ ನೀಡಿದ್ದಾರೆ. ಬಿಜೆಪಿ ಹಾಗೂ ಜೆಡಿಎಸ್ ಮೈತ್ರಿಯನ್ನು ಕೇರಳ ಮುಖ್ಯಮಂತ್ರಿ ಒಪ್ಪಿದ್ದಾರೆಂದು  ದೇವೇಗೌಡ ಅವರು ಹೇಳಿದ್ದರು. ಅವರ ಈ ಹೇಳಿಕೆ ಕೇರಳದಲ್ಲಿ ಸಾಕಷ್ಟು ಸಂಚಲ ಸೃಷ್ಟಿಸಿತ್ತು. 

ಈ ವಿಡಿಯೋ ನೋಡಿCPIM ರಾಜ್ಯಮಟ್ಟದ ರಾಜಕೀಯ ಸಮಾವೇಶ – ಪಿಣರಾಯಿ ವಿಜಯನ್

Donate Janashakthi Media

Leave a Reply

Your email address will not be published. Required fields are marked *