ಬೆಂಗಳೂರು: ಟ್ಯಾಪಿಂಗ್ ಪ್ರಕರಣವೂ ಚುರುಕುಕೊಂಡಿದ್ದು ಪೊಲೀಸರು ತನಿಖೆಯನ್ನು ಆರಂಭಿಸಿದ್ದಾರೆ. ಈ ಘಟನೆ ಸಂಬಂಧ ಶಾಸಕ ಅರವಿಂದ್ ಸ್ವೀಕರ್ ಮತ್ತು ಗೃಹ ಸಚಿವರಿಗೆ ದೂರು ನೀಡಿದ್ದರು. ದೂರು ಪಡೆದು ತನಿಖೆ ನಡೆಸುವಂತೆ ಪೊಲೀಸ್ ಆಯಕ್ತರಿಗೆ ಸೂಚನೆ ನೀಡಿದ್ದು, ದೂರಿನ ಆಧಾರದ ಮೇಲೆ ಅರವಿಂದ್ ಬೆಲ್ಲದ್ ಹೇಳಿಕೆಯನ್ನು ಪೊಲೀಸರು ಪಡೆದಿದ್ದಾರೆ. ಶಾಸಕರ ಸಂಪೂರ್ಣ ಹೇಳಿಕೆ ದಾಖಲು ಮಾಡಿಕೊಂಡಿರುವ ಪೊಲೀಸರು ತನಿಖೆಯನ್ನು ಚುರುಕುಗೊಳಿಸಿದ್ದಾರೆ.
ಸದ್ಯ ರಾಜ್ಯದಲ್ಲಿ ನಡೆಯುತ್ತಿರುವ ನಾಯಕತ್ವ ಬದಲಾವಣೆ ಚರ್ಚೆಯಲ್ಲಿ ಪ್ರಮುಖವಾಗಿ ಕೇಳಿಬರುತ್ತಿರುವ ಹೆಸರು ಅರವಿಂದ ಬೆಲ್ಲದ ಅವರದ್ದು. ಹುಬ್ಬಳ್ಳಿ- ಧಾರವಾಡ ಪಶ್ಚಿಮ ಕ್ಷೇತ್ರದ ಶಾಸಕರಾಗಿರುವ ಅರವಿಂದ ಬೆಲ್ಲದ ಅವರನ್ನು ಕೆಲವರು ಮುಂದಿನ ಮುಖ್ಯಮಂತ್ರಿ ಎಂದೂ ಬಿಂಬಿಸುತ್ತಿದ್ದಾರೆ. ದೆಹಲಿ ಭೇಟಿ- ಆರ್ ಎಸ್‌ಎಸ್ ನಾಯಕ ಭೇಟಿ ಎಂದು ಸದ್ಯ ಕೆಲವು ದಿನಗಳಿಂದ ಪ್ರಚಾರದಲ್ಲಿರುವ ಬೆಲ್ಲದ ಅವರಿಗೆ ವಂಚಕ ಜೈಲಿನಲ್ಲಿರುವ ವಂಚಕ ಯುವರಾಜ್ ಸ್ವಾಮಿಯಿಂದ ಕರೆಗಳು ಬರುತ್ತಿದೆಯಂತೆ!
ಈ ಬಗ್ಗೆ ಸ್ವತಃ ಶಾಸಕ ಅರವಿಂದ ಬೆಲ್ಲದ ಅವರು ವಿಧಾನಸಭೆ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಅವರಿಗೆ ಪತ್ರ ಬರೆದು ದೂರು ನೀಡಿ “ನನಗೆ ಇತ್ತೀಚೆಗೆ ಒಂದು ದೂರವಾಣಿ ಸಂಖ್ಯೆಯಿಂದ ಪದೇ ಪದೇ ಕರೆ ಬರುತ್ತಿದ್ದು, ಯಾರೆಂದು ಕೇಳಿದರೆ, ‘ನಾನು ಸ್ವಾಮಿ ಅಂತಾ ಮಾತನಾಡುವುದು, ಯಾವ ಸ್ವಾಮಿ ಎಂದು ಕೇಳಿದರೆ ‘ಯುವರಾಜ್ ಸ್ವಾಮಿ’ ಎಂದು ಹೆಸರು ಹೇಳುತ್ತಿದ್ದಾನೆ.
ಆದರೆ ಆತ ಜೈಲಿನಲ್ಲಿದ್ದಾನೆ. ನನಗೆ ಮಾತ್ರವಲ್ಲದೆ ನನ್ನ ಆಪ್ತ ಸಹಾಯಕರ ದೂರವಾಣಿಗೂ ಪದೇ ಪದೇ ಕರೆಗಳು ಬರುತ್ತಿದೆ” ಎಂದು ಬೆಲ್ಲದ ಅವರು ಪತ್ರದಲ್ಲಿ ಬರೆದಿದ್ದರು.
ಈ ಕರೆಗಳ ಹಿಂದೆ ಯಾವುದೋ ಕಾಣದ ಕೈಗಳ ಕೈವಾಡವಿದ್ದು, ನಮ್ಮ ಮೇಲೆ ಇಲ್ಲ ಸಲ್ಲದ ಪಿತೂರಿ ನಡೆಸುತ್ತಿದ್ದು, ನಮ್ಮ ಮೊಬೈಲ್ ಟ್ಯಾಪ್ ಆಗಿ ಕದ್ದಾಲಿಕೆಯಾಗುತ್ತಿರುವ ಬಗ್ಗೆ ಶಂಕೆ ವ್ಯಕ್ತವಾಗಿದೆ ಎಂದದು ಅರವಿಂದ ಬೆಲ್ಲದ ಪತ್ರದಲ್ಲಿ ಬರೆದಿದ್ದಾರೆ. ಮಾತ್ರವಲ್ಲದೆ ಸೂಕ್ತ ತನಿಖೆಗೆ ಆಗ್ರಹಿಸಿದ್ದರು. ಇವರ ದೂರಿನ ಅನ್ವಯ ಪೊಲೀಸರು ತನಿಖೆ ಆರಂಭಿಸಿದ್ದಷ್ಟು ಮಹತ್ವದ ಮಾಹಿತಿಗಳು ಲಭ್ಯವಾಗಿವೆ.
ಇದನ್ನೂ ಓದಿ : ಮತ್ತೆ ಸಿಎಂ ಖುರ್ಚಿ ಅಲುಗಾಡುತ್ತಿದೆ : ಮುಂದನ ನಾಯಕ “ಬೆಲ್ಲ”ದ?
ಯಾರು ಈ ಯುವರಾಜ್ ಸ್ವಾಮಿ: ಹಲವು ಪ್ರಭಾವಿ ರಾಜಕಾರಣಿಗಳ ಪರಿಚಯವಿದೆ ಎಂದು ಹೇಳಿಕೊಂಡು ರಾಜ್ಯಸಭೆ ಸೀಟು, ರಾಜಕೀಯ ಹುದ್ದೆ, ಉನ್ನತ ಸರ್ಕಾರಿ ಕೆಲಸ ಕೊಡಿಸುವುದಾಗಿ ಹಲವರನ್ನು ನಂಬಿಸಿ ಹಣ ಪಡೆದು ವಂಚಿಸುತ್ತಿದ್ದ ಈತ ಸದ್ಯ ಕಂಬಿ ಎಣಿಸುತ್ತಿದ್ದಾನೆ. ಹಲವರಿಂದ ಕೋಟಿಗಟ್ಟಲೆ ಹಣ ಪಡೆದು ವಂಚನೆ ಮಾಡಿರುವ ಆರೋಪ ಎದುರಿಸುತ್ತಿರುವ ಯುವರಾಜ್ ಅಲಿಯಾಸ್ ಸೇವಾಲಾಲ್ ಸ್ವಾಮಿ ಸದ್ಯ ಪರಪ್ಪನ ಅಗ್ರಹಾರದ ಜೈಲಿನಲ್ಲಿದ್ದಾನೆ.
ಸಂಭಾಷಣೆಯಲ್ಲಿ ಏನಿದೆ? : ಸ್ವಾಮಿ ಹಲವಾರು ಬಾರಿ ಕರೆ ಮಾಡಿದಾಗಲೂ ಬೆಲ್ಲದರವರ ಪಿಎ ಕರೆಯನ್ನು ಸ್ವಕರಿಸಿರುತ್ತಾರೆ. ಯಾರೋ ಸ್ವಾಮಿ ಎನ್ನುವವರು ನಿಮ್ಮ ಜೊತೆ ಮಾತನಾಡಬೇಕಂತೆ ಎಂದು ಅರವಿಂದ್ ಬೆಲ್ಲದ ರವರಿಗೆ ಪಿಎ ಗಟನೆಯನ್ನು ವಿವರಿಸುತ್ತಾರೆ, ಆಗ ಶಾಸಕ ಬೆಲ್ಲದ್ ಮತ್ತೆ ಕರೆ ಮಾಡಿ ಮಾತನಾಡಿದಾಗ ಸ್ವಾಮಿ ಎಂದಾಗ ನೀವು ಯಾವ ಸ್ವಾಮಿಯೆಂದು ಸ್ಪಷ್ಟವಾಗಿ ಕೇಳಿದರು ಆಗ ನಾನು ಯುವರಾಜ್ ಸ್ವಾಮಿ ಅಂತ ತನ್ನ ಪರಿಚಯ ಮಾಡಿಕೊಂಡು ನಿಮ್ಮ ತಂದೆಯವರು ನನಗೆ ತುಂಬಾ ಚೆನ್ನಾಗಿ ಗೊತ್ತು ಸರ್ ನೀವು ನನಗೆ ಸಹಾಯ ಮಾಡಬೇಕು, ನನ್ನ ಮೇಲೆ ಸುಳ್ಳು ಕೇಸ್ ದಾಖಲು ಮಾಡಿ ಜೈಲಿಗೆ ಕಳಿಸಿದ್ದು, ಕಳೆದ ಏಳೆಂಟು ತಿಂಗಳಿಂದ ನಾನು ಜೈಲು ವಾಸ ಅನುಭವಿಸುತ್ತಿದ್ದೇನೆ.
ದಯವಿಟ್ಟು ನನಗೆ ನೀವು ಸಹಾಯ ಮಾಡಬೇಕು ಎಂದು ಬೆಲ್ಲದ್ ಗೆ ಸ್ವಾಮಿ ಮನವಿಯನ್ನು ಮಾಡಿದ್ದರು. ಆಗ ಶಾಕರು ನೀವು ಎಲ್ಲಿಂದ ಕರೆ ಮಾಡುತ್ತಿದ್ದೀರಾ ಎಂದು ಪ್ರಶ್ನಿಸಿದಾಗ ನಾನು ಜೈಲಿನಿಂದ ಆಸ್ಪತ್ರೆಗೆ ಬಂದಿದ್ದೇನೆ, ಆಸ್ಪತ್ರೆಯಿಂದ ಮಾತನಾಡುತ್ತಿರುವುದಾಗಿ ಹೇಳಿದ್ದಾರೆ. ಇದನ್ನು ಕೇಳಿದ ಶಾಸಕ ಕೋಪಕೊಂಡು ನೀವು ಯಾವ ಸ್ವಾಮಿ ನನಗೆ ಗೊತ್ತಿಲ್ಲ ಎಂದು ಪೋನ್ ಕಟ್ ಮಾಡಿದ್ದಾರೆ. ನಂತರ ನನ್ನ ಫೋನ್ ಟ್ಯಾಪಿಂಗ್ ಮಾಡಲಾಗಿದೆ ಎಂದು ಅರವಿಂದ್ ಬೆಲ್ಲದರವರು ದೂರು ನೀಡುತ್ತಾರೆ.
ನಿರಂತರ ಸುದ್ದಿಗಳಿಗಾಗಿ : ನಮ್ಮ ವಾಟ್ಸಪ್ ಗುಂಪಿಗೆ ಸೇರಿ ಕೊಳ್ಳಿ
ಈ ಎಲ್ಲಾ ಬೆಳವಣಿಗೆಗಳ ಆಧಾರದ ಮೇಲೆ ಎಸಿಪಿ ನೇತೃತ್ವದ ತಂಡ ಎಲ್ಲ ರೀತಿಯ ತನಿಖೆ ಮುಂದುವರಿಸಿದೆ. ಅದೇ ಕಾರಣಕ್ಕೆ ಕಾರಾಗೃಹಕ್ಕೆ ತೆರಳಿದ್ದ ತಂಡ, ವಿಶೇಷ ಕೊಠಡಿಯಲ್ಲಿ ಯುವರಾಜ್‌ನನ್ನು ವಿಚಾರಣೆ ನಡೆಸಿತು. ಇದೇ ಸಂದರ್ಭದಲ್ಲಿ ಕಾರಾಗೃಹದ ಅಧಿಕಾರಿಗಳು ಹಾಗೂ ಸಿಬ್ಬಂದಿಯನ್ನು ಕೊಠಡಿಯಿಂದ ಹೊರಗೆ ಕಳುಹಿಸಲಾಗಿತ್ತು. ‘ಎಸಿಪಿ ನೇತೃತ್ವದ ತಂಡವು ಯುವರಾಜ್‌ನನ್ನು ಒಂದೂವರೆ ಗಂಟೆಗಳವರೆಗೆ ವಿಚಾರಣೆ ನಡೆಸಿ ಹೇಳಿಕೆ ಪಡೆಯಿತು. ಪ್ರಕರಣಕ್ಕೆ ಸಂಬಂಧಪಟ್ಟ ಮಾಹಿತಿಗಳನ್ನು ಕಲೆ ಹಾಕಿತು’ ಎಂದು ಮೂಲಗಳು ಹೇಳಿವೆ. ಆರೋಪಿಗೆ ಕೇಂದ್ರ ಕಾರಾಗೃಹದ ಸಿಬ್ಬಂದಿಯೂ ಮೊಬೈಲ್ ಕೊಟ್ಟಿರುವ ಅನುಮಾನವಿದೆ. ಆದರೆ, ಈ ಆರೋಪವನ್ನು ಜೈಲಿನ ಅಧಿಕಾರಿಗಳು ತಳ್ಳಿಹಾಕಿದ್ದಾರೆ. ಜೈಲಿನಲ್ಲಿ ಜಾಮರ್ ಅಳವಡಿಸಲಾಗಿದ್ದು, ಪ್ರಿಸನ್ ಕಾಲ್ ಬಿಟ್ಟರೆ ಯಾವುದೇ ಮೊಬೈಲ್ ಬಳಸಲು ಆಗುವುದಿಲ್ಲವೆಂದು ಉತ್ತರಿಸಿದ್ದಾರೆ’ ಎಂಬುದಾಗಿಯೂ ಮೂಲಗಳು ಹೇಳಿವೆ. ಇದರ ಜೊತೆ ಶಾಸಕರ ಸಂಪೂರ್ಣ ಹೇಳಿಕೆ ದಾಖಲು ಮಾಡಿಕೊಂಡಿರುವ ಪೊಲೀಸರು ತನಿಖೆಯನ್ನು ಚುರುಕುಗೊಳಿಸಿದ್ದಾರೆ.