ಬೆಂಗಳೂರು : ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹಂಪಿಯಲ್ಲಿನ ಕನ್ನಡ ವಿಶ್ವವಿದ್ಯಾಲಯಕ್ಕೆ ಭೇಟಿ ನೀಡಿದ್ದ ಸಂದರ್ಭದಲ್ಲಿ ಸಂಶೋಧನಾ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ಬಾರದ ಬಗ್ಗೆ ಬಸವರಾಜ ಅವರ ಪಿ.ಎಚ್.ಡಿ ಅಧ್ಯಯನದ ಖಾಯಂ ನೋಂದಣಿ ರದ್ದುಗೊಳಿಸಲು ನೀಡಲಾಗಿರುವ ನೋಟಿಸ್ಸನ್ನು ವಾಪಸು ತೆಗೆದುಕೊಳ್ಳಬೇಕು ಎಂದು ಎಸ್ಎಫ್ಐ ಆಗ್ರಹಿಸಿದೆ.
ಭಾರತ ವಿದ್ಯಾರ್ಥಿ ಫೆಡರೇಷನ್(ಎಸ್‌ಎಫ್‌ಐ) ಸಂಘಟನೆಯ ರಾಜ್ಯ ಅಧ್ಯಕ್ಷ ಅಮರೇಶ ಕಡಗದ ಹೇಳಿಕೆಯನ್ನು ಬಿಡುಗಡೆ ಮಾಡಿದ್ದು, ವಿಶ್ವವಿದ್ಯಾಲಯದಲ್ಲಿ ದೇಶಕ್ಕೆ ಹಾಗು ರಾಜ್ಯಕ್ಕೆ ಪೂರ್ವಕವಾಗಿ ಉತ್ತಮ ವಾತಾವರಣ ನಿರ್ಮಾಣ ಮಾಡುವ ಕೇಂದ್ರಗಳು. ಅಂತಹ ಸಂಶೋಧನಾ, ಸಂಸ್ಕೃತ, ಮತ್ತು ಚರ್ಚೆ ಮಾಡವು ಹಲವಾರ ದಲಿತ ಸಮುದಾಯದ ವಿದ್ಯಾರ್ಥಿಗಳಿಗೆ ಸುಮಾರು 40 ತಿಂಗಳನಿಂದ ವಿದ್ಯಾರ್ಥಿ ವೇತನ ಬಾರದ ಕಾರಣ ವಿದ್ಯಾರ್ಥಿಗಳು ಸಂಕಷ್ಟಕ್ಕೆ ಈಡಾಗಿದ್ದಾರೆ ಎಂದಿದ್ದಾರೆ.
ಇದನ್ನು ಓದಿ: “ನಮ್ಮ ಕಷ್ಟ ಆಲಿಸಿ” ಎಂದಿದ್ದಕ್ಕೆ ದಲಿತ ವಿದ್ಯಾರ್ಥಿಯ ಪಿಎಚ್‌ಡಿ ನೋಂದಣಿ ರದ್ದಿಗೆ ಸೂಚನೆ
ಈಗಾಗಲೇ ವಿದ್ಯಾರ್ಥಿಗಳು ಸಾಲದ ಸುಳಿಯಲ್ಲಿ ಸಿಲುಕಿದ್ದಾರೆ. ಕೆಲ ಸಾಲ ಸಿಗದ ಕಾರಣ ಸಂಶೋಧನೆ ಮಾಡುವುದನ್ನು ಅರ್ಧಕ್ಕೆ ಬಿಡುವ ಪರಿಸ್ಥಿತಿ ನಿರ್ಮಾಣವಾಗಿದೆ. ರಾಜ್ಯದ ಎಲ್ಲಾ ವಿಶ್ವವಿದ್ಯಾಲಯಗಳಿಗೆ ಆದಾಯ ಮೂಲವಾಗಿ ವಿವಿಧ ಕಾಲೇಜುಗಳು ಇವೆ. ಆದರೆ ಕನ್ನಡ ವಿಶ್ವವಿದ್ಯಾಲಯ ಹಂಪಿವು ರಾಜ್ಯ ಸರಕಾರ ಬಿಡುಗಡೆ ಮಾಡುವ ಅನುದಾನದಿಂದಲೇ ನಡೆಯಬೇಕು. ಇಂತಹ ಸಂದರ್ಭದಲ್ಲಿ ವಿಶ್ವವಿದ್ಯಾಲಯದ ಅಭಿವೃದ್ಧಿಗಾಗಿ ಮತ್ತು ವಿದ್ಯಾರ್ಥಿಗಳ ವಿದ್ಯಾರ್ಥಿ ವೇತನಕ್ಕಾಗಿ ಮನವಿ ಕೊಟ್ಟರೆ ಅದು ಮುಖ್ಯಮಂತ್ರಿಗಳ ಭಾಷಣಕ್ಕೆ ಹೇಗೆ ಅಡ್ಡಿಯಾಗುತ್ತದೆ? ಎಂದು ಪ್ರಶ್ನಿಸಿದರು.
ಸಂಶೋಧನಾ ವಿದ್ಯಾರ್ಥಿ ಹಾಗೂ ಎಸ್‌ಎಫ್‌ಐ ಸಂಘಟನೆಯ ಜಿಲ್ಲಾ ಸಂಚಾಲಕರಾದ ಬಸವರಾಜುರವರು ವಿದ್ಯಾರ್ಥಿಗಳ ಪರವಾಗಿ ವಿದ್ಯಾರ್ಥಿ ವೇತನವನ್ನು ಬಿಡುಗಡೆ ಮಾಡಬೇಕೆಂದು ಬೇಡಿಕೆ ಇಟ್ಟಿದ್ದು ನ್ಯಾಯಸಮ್ಮತವಾಗಿದೆ.
ಕನ್ನಡ ವಿಶ್ವವಿದ್ಯಾಲಯ, ಹಂಪಿಯ ಅಭಿವೃದ್ಧಿ ಅಧ್ಯಯನ ವಿಭಾಗದಲ್ಲಿ ಪಿ.ಎಚ್.ಡಿ ಅಧ್ಯಯನ ಮಾಡುತ್ತಿರುವ ಎ.ಕೆ. ದೊಡ್ಡ ಬಸ್ಸಪ್ಪ ಖಾಯಂ ನೊಂದಣಿಯ ರದ್ದುಗೊಳಿಸಿ ಕುರಿತು ನೀಡಲಾಗಿರುವ ನೋಟಿಸ್ ವಾಪಸ್ಸು ಪಡೆಯಬೇಕೆಂದು ಎಸ್‌ಎಫ್‌ಐ ಸಂಘಟನೆಯು ವಿಶ್ವವಿದ್ಯಾನಿಲಯದ ಉಪಕುಲಪತಿಗಳು ಹಾಗು ಕುಲಸಚಿವರಲ್ಲಿ ಆಗ್ರಹಿಸಿದೆ.