ಹಾವೇರಿ ಫೆ 14 : ತಾಲೂಕಿನ ಕೆರಿಮತ್ತಿಹಳ್ಳಿ ಸ್ನಾತಕೋತ್ತರ ಕೇಂದ್ರಕ್ಕೆ ಮೂಲಭೂತ ಸೌಲಭ್ಯ ಒದಗಿಸಬೇಕೆಂದು ಒತ್ತಾಯಿಸಿ ಭಾರತ ವಿದ್ಯಾರ್ಥಿ ಫೆಡರೇಷನ್ (ಎಸ್ಎಫ್ಐ) ಹಾವೇರಿ ಜಿಲ್ಲಾ ಸಮಿತಿ ನೇತೃದಲ್ಲಿ ಕೆರಿಮತ್ತಿಹಳ್ಳಿ ಸ್ನಾತಕೋತ್ತರ ಕೇಂದ್ರದ ಮುಂದೆ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದರು.
ಎಸ್ಎಫ್ಐ ಜಿಲ್ಲಾ ಸಹಕಾರ್ಯದರ್ಶಿ ಬಸವರಾಜ ಭೋವಿ ಮಾತನಾಡಿ, ಹಾವೇರಿ ನಗರದ ಹೊರವಲಯದ ಕೆರಿಮತ್ತಿಹಳ್ಳಿಯಲ್ಲಿರುವ ಸ್ನಾತಕೋತ್ತರ ಅಧ್ಯಯನ ಕೇಂದ್ರವು ಮೂಲಭೂತ ಸೌಲಭ್ಯದ ಕೊರತೆಯಿಂದ ಹಲವಾರು ವರ್ಷಗಳಿಂದ ನರಳುವ ಸ್ಥಿತಿ ನಿರ್ಮಾಣವಾಗಿದೆ. ಉನ್ನತ ಶಿಕ್ಷಣಕ್ಕೆ ಬರುವ ವಿದ್ಯಾರ್ಥಿಗಳಿಗೆ ವ್ಯಾಸಂಗಕ್ಕೆ ಅನುಕೂಲವಾಗಿರುವ ವಾತವಾರಣ ಸೃಷ್ಟಿಮಾಡಬೇಕಿರುವ ಸರಕಾರ ಹಾಗೂ ವಿಶ್ವವಿದ್ಯಾಲಯವು ಇವೇಲ್ಲವನ್ನು ನೋಡಿ ಕಣ್ಣುಮುಚ್ಚಿ ಕುಳಿತಿದೆ ಎಂದು ಆರೋಪಿಸಿದರು.
ಪ್ರತಿ ವರ್ಷ ಸ್ನಾತಕೋತ್ತರ ಕೇಂದ್ರದ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಬೇಕಾದ ಸ್ಥಿತಿ ನಿರ್ಮಾಣವಾಗಿದೆ. ಹಾವೇರಿ ನಗರದಿಂದ ಸುಮಾರ 10 ಕಿ.ಮೀ. ದೂರದಲ್ಲಿರುವ ಕಾರಣ ಸರಿಯಾದ ರೀತಿಯ ಬಸ್ ಸೌಲಭ್ಯವಿಲ್ಲದೆ ಹಾವೇರಿ ನಗರ ಹಾಗೂ ಬೇರೆ ಬೇರೆ ಭಾಗಗಳಿಂದ ಬರುವ ವಿದ್ಯಾರ್ಥಿಗಳಿಗೆ ಬಹಳ ಅನಾನುಕೂಲ ಸೃಷ್ಟಿಯಾಗಿದೆ. ಸ್ನಾತಕೋತ್ತರ ಕೇಂದ್ರದ ಕ್ಯಾಂಪಸ್ ನಲ್ಲಿ ಸಮಾಜ ಕಲ್ಯಾಣ ಇಲಾಖೆಯ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ವಸತಿ ನಿಲಯಗಳು ಇಲ್ಲದಿರುವುದರಿಂದ ನಗರದಲ್ಲಿರುವ ವಸತಿ ನಿಲಯಗಳಿಂದ ವಿದ್ಯಾರ್ಥಿಗಳು ಬರಲು ಅನಾನುಕೂಲವಾಗುತ್ತಿದೆ. ಸ್ನಾತಕೋತ್ತರ ಕೇಂದ್ರದಲ್ಲಿ ಅಧ್ಯಯನ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಸರಿಯಾದ ಉಪನ್ಯಾಸಕರಿಲ್ಲದೆ ಉನ್ನತ ಶಿಕ್ಷಣದ ವ್ಯಾಸಂಗ ಕುಂಠಿತಗೊಳ್ಳುತ್ತದೆ.
ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದ ಮೂರು ಸ್ನಾತಕೋತ್ತರ ಅಧ್ಯಯನ ಕೇಂದ್ರಗಳಲ್ಲಿ ಕೆರಿಮತ್ತಿಹಳ್ಳಿಯ ಪಿ.ಜಿ.ಸೆಂಟರ್ ಕೂಡ ಪ್ರಮುಖವಾದುದು. ಆದರೆ ಮೂಲಭೂತ ಸೌಲಭ್ಯಗಳ ಕೊರತೆಯ ಕಾರಣದಿಂದಾಗಿ ವರ್ಷದಿಂದ ವರ್ಷಕ್ಕೆ ವಿದ್ಯಾರ್ಥಿಗಳ ಪ್ರವೇಶಾತಿ ಕುಂಠಿತಗೊಳ್ಳುತ್ತಿರುವುದು ತೀವ್ರ ಆತಂಕವಾಗಿದೆ. ಈಗಾಗಲೇ 6 ವಿಭಾಗಗಳಲ್ಲಿ ಆರಂಭವಾಗಿ ತರಗತಿಗಳು ನಡೆಯುತ್ತಿದ್ದು ಸ್ನಾತಕೋತ್ತರ ಅಧ್ಯಯನ ಕೇಂದ್ರದಲ್ಲಿ ಕಾಯಂ ಉಪನ್ಯಾಸಕರ ಕೊರತೆಯಿಂದ ಬೋಧನಾ ಗುಣಮಟ್ಟ ತಿವ್ರ ಕುಸುಯುತ್ತಿದೆ. ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಜಿಲ್ಲಾಧಿಕಾರಿಗಳು ವಿದ್ಯಾರ್ಥಿಗಳ ಹಿತವನ್ನು ಗಮನಸಿ ಸ್ನಾತಕೋತ್ತರ ಕೇಂದ್ರಕ್ಕೆ ಹೆಚ್ಚಿನ ಅನುದಾನ ನೀಡಿ ಕರ್ನಾಟಕ ಪಿಜಿ ಕೇಂದ್ರವನ್ನು ಬಲಪಡಿಸಬೇಕು ಎಂದು ಬಸವರಾಜ್ ಆಗ್ರಹಿಸಿದರು.
ಕರ್ನಾಟಕ ವಿಶ್ವವಿದ್ಯಾಲಯ ಸ್ನಾತಕೋತ್ತರ ಕೇಂದ್ರದ ಪ್ರಭಾರಿ ಅಧಿಕಾರಿಗಳಾದ ಎಚ್.ವೈ.ಪ್ರಶಾಂತ್ ಅವರ ಮೂಲಕ ಕರ್ನಾಟಕ ವಿಶ್ವವಿದ್ಯಾಲಯದ ಕುಲಪತಿಗಳಿಗೆ, ಜಿಲ್ಲಾ ಉಸ್ತುವರಿ ಸಚಿವರಿಗೆ ಮತ್ತು ಜಿಲ್ಲಾಧಿಕಾರಿಗಳಿಗೆ ಹಾಗೂ ಸಬಂದಪಟ್ಟ ಆಯ ಇಲಾಖೆಯ ಜಿಲ್ಲಾಧಿಕಾರಿಗಳಿಗೂ ಮನವಿ ಸಲ್ಲಿಸಲಾಯಿತು.
ಮನವಿ ಪತ್ರವನ್ನು ಸ್ವೀಕರಿಸಿ ಮಾತನಾಡಿದ ಎಚ್.ವೈ.ಪ್ರಶಾಂತ್ ಪ್ರಸ್ತುತ ವಿಶ್ವವಿದ್ಯಾಲಯದಲ್ಲಿ ಇಬ್ಬರು ಖಾಯಂ ಉಪನ್ಯಾಸಕರಿದ್ದು, ಐದು ಜನ ಅಥಿತಿ ಉಪನ್ಯಾಷಕರಿದ್ದಾರೆ ಈ ನಿಟ್ಟಿನಲ್ಲಿ ಕರ್ನಾಟಕ ವಿಶ್ವವಿದ್ಯಾಲಯವು ಖಾಯಂ ಉಪನ್ಯಾಸಕರ ನೇಮಕ ಪ್ರಕ್ರಿಯೆ ನಡೆಸುತ್ತಿದೆ. ಎರಡು ಮೆಸ್ ಟೆಂಡರ್ ಕರೆದು ವಿದ್ಯಾರ್ಥಿಗಳು ಹಾಜರಾತಿ ಪ್ರಮಾಣದ ಆದಾರದ ಮೇಲೆ ಹಾಸ್ಟೆಲ್ ಆರಂಭಿಸಲಾಗಿದೆ. ವಿದ್ಯಾರ್ಥಿಗಳು ಹಾಸ್ಟೆಲ್ ಸಂಖ್ಯೆ ಹೆಚ್ಚದಾರೆ ಪುನಃ ಪ್ರಾರಂಭಿಸುಲಾಗುವುದು. ಮೂಲಸೌರ್ಕಯಗಳಾದ ಕುಡಿಯುವ ನೀರಿನ ವ್ಯವಸ್ಥೆ, ಶೌಚಲಯ , ಗ್ರಂಥಾಲಯ ಸೇರಿದಂತೆ ಎಲ್ಲವನ್ನು ಸರಿಮಾಡಲಾಗುತ್ತಿದೆ. ಶೀಘ್ರವಾಗಿ ವಿದ್ಯಾರ್ಥಿನಿಯರ ಹಾಸ್ಟೆಲ್ ಪ್ರಾರಂಭಿಸಲಾಗುವುದು ತಿಳಿಸಿದರು.
ಪ್ರತಿಭಟನೆಯಲ್ಲಿ ಎಸ್ಎಫ್ಐ ಮುಖಂಡರಾದ ಮಹಾಂತೇಶ್ ಪುರದ, ಗೀರಿಶ್ ಗೊರವರ, ಮಹೇಶ್ ಬಾಲಣ್ಣನವರ, ಮಂಜುನಾಥ ಹೊಸಹಳ್ಳಿ, ರವಿ ಎಸ್ ಎಸ್, ಸಂತೋಷ ಲಮಾಣಿ, ಹಾಗೂ ವಿದ್ಯಾರ್ಥಿಗಳಾದ ಅಶೋಕ ಆರ್ ದ್ಯಾಮಣ್ಣನವರ, ಮಹೇಶ್ ಅಕಾರಿ, ಮಂಜುನಾಥ ಓಲೇಕಾರ, ಅಪ್ಪಾಜಿ ಗೌಡ, ಮಂಜುನಾಥ ಜೆ ಕೆ, ಅಶ್ವಿನಿ ಸಂಗೀತಾ ಬಿ, ನಾಗರತ್ನ ಎನ್, ವಿದ್ಯಾ ನೆಸರಗಿ, ಶ್ವೇತಾ ಬಡಿಗೇರ್, ಸೇರಿದಂತೆ ನೂರಾರು ವಿದ್ಯಾರ್ಥಿಗಳು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.