ಏರುತ್ತಲೇ ಇದೆ ಪೆಟ್ರೋಲ್, ಡೀಸೆಲ್ ಬೆಲೆ

ನವದೆಹಲಿ : ದಿನದಿಂದ ದಿನಕ್ಕೆ ಪೈಸೆಗಳ ಲೆಕ್ಕದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳು ಗರಿಷ್ಠ ಮಟ್ಟ ತಲುಪಿವೆ. ಈಗಾಗಲೇ ದಿನನಿತ್ಯ ಬಳಕೆ ವಸ್ತುಗಳ ಬೆಲೆ ಏರಿಕೆಯಿಂದ ಕಂಗೆಟ್ಟಿರುವ ಜನರಿಗೆ ಗಾಯದ ಮೇಲೆ ಬರೆ ಎಳೆದಂತಾಗಿದೆ. ಇದರಿಂದಾಗಿ ರಾಜ್ಯ ಹಾಗೂ ಕೇಂದ್ರ ಸರ್ಕಾರಗಳ ವಿರುದ್ಧ ಜನಾಕ್ರೋಶ ವ್ಯಕ್ತವಾಗುತ್ತಿದೆ.

ಇಂದು ಪೆಟ್ರೋಲ್ ಬೆಲೆ 35 ಪೈಸೆ ಹೆಚ್ಚಳವಾಗಿದ್ದು, ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಪೆಟ್ರೋಲ್ ಬೆಲೆ 107.94 ರೂಪಾಯಿಗೆ ಏರಿಕೆಯಾಗಿದೆ. ಲೀಟರ್ ಡೀಸೆಲ್ ದರ 96.67 ರೂ.ಗೆ ಮಾರಾಟವಾಗಿದೆ. ಮುಂಬೈನಲ್ಲಿ ಲೀಟರ್ ಪೆಟ್ರೋಲ್ ದರ 113.80 ರೂ ಇದ್ರೆ, ಲೀಟರ್ ಡೀಸೆಲ್ ದರ 104.75 ರೂ.ಗೆ ಏರಿಕೆಯಾಗಿದೆ. ಕೋಲ್ಕತ್ತಾದಲ್ಲಿ ಲೀಟರ್ ಪೆಟ್ರೋಲ್ ದರ 108.46 ರೂ.ಗೆ ಏರಿಕೆಯಾದ್ರೆ, ಲೀಟರ್ ಡೀಸೆಲ್ ದರ 99.78 ರೂಪಾಯಿಗೆ ಮಾರಾಟವಾಗುತ್ತಿದೆ. ಚೆನ್ನೈನಲ್ಲಿ ಲೀಟರ್ ಪೆಟ್ರೋಲ್ ದರ 104.83 ರೂಪಾಯಿಗೆ ಏರಿಕೆಯಾಗಿದ್ದು, ಲೀಟರ್ ಡೀಸೆಲ್ ದರ 100.92 ರೂ.ಗೆ ಮಾರಾಟವಾಗಿದೆ.

ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗೆ ಅಬಕಾರಿ ಸುಂಕಗಳನ್ನು ಸೇರಿಸಿದ ನಂತರ, ಅದರ ಬೆಲೆ ದ್ವಿಗುಣಗೊಳ್ಳುತ್ತದೆ. ಈ ಮಾನದಂಡಗಳ ಆಧಾರದ ಮೇಲೆ, ತೈಲ ಕಂಪನಿಗಳು ಪ್ರತಿದಿನ ಪೆಟ್ರೋಲ್ ಮತ್ತು ಡೀಸೆಲ್ ದರವನ್ನು ನಿಗದಿಪಡಿಸುತ್ತವೆ. ಪ್ರತಿನಿತ್ಯ ಹೊಸ ದರಗಳು ಬೆಳಿಗ್ಗೆ 6 ಗಂಟೆಗೆ ನಿಗದಿಯಾಗುತ್ತವೆ.

ಕರ್ನಾಟಕದ ವಿವಿಧ ಜಿಲ್ಲೆಗಳಲ್ಲಿ ಇಂದಿನ ಪೆಟ್ರೋಲ್ ದರ ವಿವರ;

ಬಾಗಲಕೋಟೆ – 111.99 ರೂ. (16 ಪೈಸೆ ಏರಿಕೆ )
ಬೆಂಗಳೂರು – 111.70 ರೂ. (36 ಪೈಸೆ ಏರಿಕೆ )
ಬೆಂಗಳೂರು ಗ್ರಾಮಾಂತರ -111.78 ರೂ. (81 ಪೈಸೆ ಏರಿಕೆ)
ಬೆಳಗಾವಿ – 112.20 ರೂ. (31 ಪೈಸೆ ಏರಿಕೆ)
ಬಳ್ಳಾರಿ – 113.42 ರೂ. (11 ಪೈಸೆ ಇಳಿಕೆ )
ಬೀದರ್ – 112.50 ರೂ. (74 ಪೈಸೆ ಏರಿಕೆ)
ಬಿಜಾಪುರ – 111.83 ರೂ. (13 ಪೈಸೆ ಏರಿಕೆ)
ಚಾಮರಾಜನಗರ – 112.12 ರೂ. (70 ಪೈಸೆ ಇಳಿಕೆ )
ಚಿಕ್ಕಬಳ್ಳಾಪುರ – 111.70 ರೂ. (30 ಪೈಸೆ ಏರಿಕೆ)
ಚಿಕ್ಕಮಗಳೂರು – 112.19 ರೂ. (9 ಪೈಸೆ ಇಳಿಕೆ)
ಚಿತ್ರದುರ್ಗ – 113.23 ರೂ. (73 ಪೈಸೆ ಇಳಿಕೆ)
ದಕ್ಷಿಣ ಕನ್ನಡ – 111.89 ರೂ. (1.40 ಪೈಸೆ ಏರಿಕೆ )
ದಾವಣಗೆರೆ – 113.33 ರೂ. (18 ಪೈಸೆ ಏರಿಕೆ)
ಧಾರವಾಡ – 111.45 ರೂ. (24 ಪೈಸೆ ಏರಿಕೆ)
ಗದಗ – 112.57 ರೂ. (99 ಪೈಸೆ ಏರಿಕೆ)
ಗುಲಬರ್ಗ – 111.53 ರೂ. (4 ಪೈಸೆ ಏರಿಕೆ)
ಹಾಸನ – 111.48 ರೂ. (7 ಪೈಸೆ ಏರಿಕೆ)
ಹಾವೇರಿ – 112.17 ರೂ. (18 ಪೈಸೆ ಏರಿಕೆ )
ಕೊಡಗು – 112.63 ರೂ. (4 ಪೈಸೆ ಇಳಿಕೆ)
ಕೋಲಾರ – 111.64 ರೂ. (61 ಪೈಸೆ ಏರಿಕೆ)
ಕೊಪ್ಪಳ- 112.92 ರೂ. (64 ಪೈಸೆ ಏರಿಕೆ)
ಮಂಡ್ಯ – 111.31 ರೂ. (9 ಪೈಸೆ ಏರಿಕೆ)
ಮೈಸೂರು – 111.46 ರೂ. (14 ಪೈಸೆ ಏರಿಕೆ )
ರಾಯಚೂರು – 111.53 ರೂ. (25 ಪೈಸೆ ಇಳಿಕೆ)
ರಾಮನಗರ – 112.06 ರೂ. (40 ಪೈಸೆ ಏರಿಕೆ)
ಶಿವಮೊಗ್ಗ – 113.18 ರೂ. (35 ಪೈಸೆ ಏರಿಕೆ)
ತುಮಕೂರು – 112.56 ರೂ. (14 ಪೈಸೆ ಏರಿಕೆ)
ಉಡುಪಿ – 111.24 ರೂ. (18 ಪೈಸೆ ಇಳಿಕೆ)
ಉತ್ತರಕನ್ನಡ – 113.69 ರೂ (1.78 ಪೈಸೆ ಏರಿಕೆ)
ಯಾದಗಿರಿ – 112.15 ರೂ. (3 ಪೈಸೆ ಇಳಿಕೆ )

ಕರ್ನಾಟಕದ ವಿವಿಧ ಜಿಲ್ಲೆಗಳಲ್ಲಿ ಇಂದಿನ ಡೀಸೆಲ್ ಬೆಲೆ

ಬಾಗಲಕೋಟೆ – 102.89
ಬೆಂಗಳೂರು – 102.60
ಬೆಂಗಳೂರು ಗ್ರಾಮಾಂತರ – 102.67
ಬೆಳಗಾವಿ – 103.08
ಬಳ್ಳಾರಿ – 104.19
ಬೀದರ್ -103.36
ಬಿಜಾಪುರ – 102.74
ಚಾಮರಾಜನಗರ – 102.98
ಚಿಕ್ಕಬಳ್ಳಾಪುರ – 102.60
ಚಿಕ್ಕಮಗಳೂರು – 102.95
ಚಿತ್ರದುರ್ಗ – 103.88
ದಕ್ಷಿಣ ಕನ್ನಡ – 102.73
ದಾವಣಗೆರೆ -103.97
ಧಾರವಾಡ – 102.39
ಗದಗ – 103.42
ಗುಲಬರ್ಗ – 102.47
ಹಾಸನ – 102.29
ಹಾವೇರಿ – 103.05
ಕೊಡಗು – 103.33
ಕೋಲಾರ – 102.55
ಕೊಪ್ಪಳ- 103.74
ಮಂಡ್ಯ – 102.25
ಮೈಸೂರು -102.38
ರಾಯಚೂರು – 102.48
ರಾಮನಗರ – 102.93
ಶಿವಮೊಗ್ಗ – 103.87
ತುಮಕೂರು -103.39
ಉಡುಪಿ – 102.14
ಉತ್ತರಕನ್ನಡ – 104.38
ಯಾದಗಿರಿ – 103

 

Donate Janashakthi Media

Leave a Reply

Your email address will not be published. Required fields are marked *