ದೇಶಾದ್ಯಂತ ತೈಲ ಬೆಲೆಯಲ್ಲಿ ಮತ್ತೆ ಏರಿಕೆ : ಮುಂಬೈನಲ್ಲಿ ಶತಕ, ಬೆಂಗಳೂರಿನಲ್ಲಿ ಶತಕ ಸನಿಹ

 

ನವದೆಹಲಿ: ಐದು ರಾಜ್ಯಗಳ ವಿಧಾನಸಭೆ ಚುನಾವಣೆ ಮುಗಿದ ಬಳಿಕ ಪೆಟ್ರೋಲ್ ಮತ್ತು ಡೀಸೆಲ್ ದರದಲ್ಲಿ ದಿನದಿಂದ ದಿನಕ್ಕೆ ಮತ್ತೆ ಏರಿಕೆಯಾಗುತ್ತಿದೆ. ಶನಿವಾರ ಎಲ್ಲ ನಾಲ್ಕು ಮೆಟ್ರೋ ನಗರಗಳಲ್ಲಿ ತೈಲ ದರ ಏರಿಕೆಯಾಗಿದೆ. ವಾಣಿಜ್ಯ ನಗರ ಮುಂಬಯಿಯಲ್ಲಿ ಲೀಟರ್‌ಗೆ 100ರ ಗಡಿ ದಾಟಿದೆ.

ಮೆಟ್ರೋ ನಗರಗಳಲ್ಲಿ ಪೆಟ್ರೋಲ್ ದರ ಲೀಟರ್‌ಗೆ 26 ಪೈಸೆಯಷ್ಟು ಮತ್ತು ಡೀಸೆಲ್ ಸುಮಾರು 30 ಪೈಸೆಯಷ್ಟು ಏರಿಕೆಯಾಗಿದೆ ಎಂದು ಭಾರತೀಯ ತೈಲ ನಿಗಮದ (ಐಒಸಿ) ವರದಿ ತಿಳಿಸಿದೆ. ಮುಂಬಯಿಯಲ್ಲಿ ಇದೇ ಮೊದಲ ಬಾರಿಗೆ ದಾಖಲೆಯ 100 ರೂಪಾಯಿ ಗಡಿ ದಾಟಿದ್ದು, ಲೀಟರ್ ಪೆಟ್ರೋಲ್ ಬೆಲೆ 100.19ಕ್ಕೆ ಹೆಚ್ಚಳ ಕಂಡಿದೆ. ಡೀಸೆಲ್ ದರ ಲೀಟರ್‌ಗೆ 92.17 ರೂಪಾಯಿ ಇದೆ. ರಾಜಧಾನಿ ದಿಲ್ಲಿಯಲ್ಲಿ ಪೆಟ್ರೋಲ್ ದರ 93.68 ರೂಪಾಯಿಯಿಂದ 93.94 ರೂಪಾಯಿಗೆ ಹೆಚ್ಚಳ ಕಂಡಿದೆ. ಡೀಸೆಲ್ ದರವು ಲೀಟರ್‌ಗೆ 84.61 ರೂ.ದಿಂದ 84.89 ರೂ.ಗೆ ಹೆಚ್ಚಳ ಕಂಡಿದೆ.

ಚೆನ್ನೈನಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ದರ ಕ್ರಮವಾಗಿ 95.51 ರೂ ಮತ್ತು 89.65 ರೂ ಇದೆ. ಕೋಲ್ಕತಾದಲ್ಲಿ ಪೆಟ್ರೋಲ್‌ಗೆ 93.97 ರೂ ಮತ್ತು ಡೀಸೆಲ್‌ಗೆ 87.74 ರೂ. ಇದೆ.

ಬೆಂಗಳೂರಿನಲ್ಲಿ ತೈಲ ಬೆಲೆ : ಮೇ 4ರ ಬಳಿಕ ಇದು 15ನೇ ದರ ಏರಿಕೆಯಾಗಿದೆ. ರಾಜಸ್ಥಾನ, ಮಹಾರಾಷ್ಟ್ರ ಮತ್ತು ಮಧ್ಯಪ್ರದೇಶದ ಕೆಲವು ನಗರಗಳಲ್ಲಿ ಈಗಾಗಲೇ ಪೆಟ್ರೋಲ್ ದರ ಲೀಟರ್‌ಗೆ 100 ರೂಪಾಯಿ ದಾಟಿದೆ. ಬೆಂಗಳೂರಿನಲ್ಲಿ ಪೆಟ್ರೋಲ್ ದರ ಲೀಟರ್‌ಗೆ 27 ಪೈಸೆ ಏರಿಕೆ ಕಂಡಿದ್ದು, 97.07 ರೂಪಾಯಿ ದರವಿದೆ. ಡೀಸಲ್ ಬೆಲೆ 29 ಪೈಸೆ ತುಟ್ಟಿಯಾಗಿದ್ದು, ಲೀಟರ್‌ಗೆ 89.99 ರೂಪಾಯಿಗೆ ಮಾರಾಟವಾಗುತ್ತಿದೆ.

Donate Janashakthi Media

Leave a Reply

Your email address will not be published. Required fields are marked *