ಪೆಟ್ರೋಲ್, ಡೀಸೆಲ್, ಗ್ಯಾಸ್‍ ಬೆಲೆ ಏರಿಕೆ ವಿರೋಧಿಸಿ ಪ್ರತಿಭಟಿಸಲು ಸಿಪಿಐ(ಎಂ) ಕರೆ

ಬೆಂಗಳೂರು: ಕಳೆದ ಒಂದೂವರೇ ವರ್ಷದಿಂದ ದೇಶದ ಜನತೆ ತೀವ್ರ ರೀತಿಯ ಕೋವಿಡ್ ಸಂಕಷ್ಠ ಎದುರಿಸುತ್ತಿರುವಾಗಲೇ ಅವರ ಸಂಕಟ ನಿವಾರಣೆಗೆ ಕ್ರಮವಹಿಸುವ ಬದಲು ಅವರ ಮೇಲೆ ಭಾರೀ ಬೆಲೆ ಏರಿಕೆಯ ಹೊರೆ ಹೇರುವ ಕ್ರೌರ್ಯವನ್ನು ಸರಕಾರಗಳು ಮುಂದುವರೆಸುತ್ತಿದೆ ಎಂದು ಭಾರತ ಕಮ್ಯೂನಿಸ್ಟ್‌ ಪಕ್ಷ (ಮಾರ್ಕ್ಸ್‌ವಾದಿ)-ಸಿಪಿಐ(ಎಂ) ಪಕ್ಷದ ರಾಜ್ಯ ಕಾರ್ಯದರ್ಶಿ ಯು. ಬಸವರಾಜ ಅವರು ಹೇಳಿದ್ದಾರೆ.

ಇದನ್ನು ಓದಿ: ಸಮಾಜವಾದ ಮಾತ್ರವೇ ಮೋದಿಯನ್ನು ಸೋಲಿಸಬಲ್ಲದು

ಕಳೆದ ಒಂದು ವರ್ಷದ ಅವಧಿಯಲ್ಲಿ ಪೆಟ್ರೋಲ್ ಬೆಲೆಯು 25 ರೂ.ಗಳಷ್ಟು ಹೆಚ್ಚಳಗೊಂಡಿದೆ. ಕಳೆದ ಒಂದು ತಿಂಗಳಲ್ಲಿ 16 ‌ಬಾರಿ ಬೆಲೆ ಏರಿಸಲಾಗಿದೆ. ಈಗದು 100 ರೂ.ಗಳನ್ನು ದಾಟಿದೆ. ಡೀಸೆಲ್ ಬೆಲೆಯು 100 ರೂ.ಗಳಿಗೆ ಹತ್ತಿರವಾಗಿದೆ. ಅಡುಗೆ ಅನಿಲವೂ ಭಾರಿ ಏರಿಕೆ ಕಂಡಿದೆ. ಇದು ಅತ್ಯಂತ ಅಸಹನೀಯವಾಗಿದೆ ಎಂದು ಸಿಪಿಐ(ಎಂ) ಹೇಳಿದೆ.

ಕೇಂದ್ರ ಸರಕಾರದ ಈ ಜನವಿರೋಧಿ ಹಾಗೂ ಲೂಟಿಕೋರ ನೀತಿಯನ್ನು ಬಲವಾಗಿ ಖಂಡಿಸುತ್ತದೆ ಮತ್ತು ಇದು ಸಹಜವಾಗಿಯೇ ಎಲ್ಲ ಅಗತ್ಯ ವಸ್ತುಗಳ ಬೆಲೆಗಳ ಏರಿಕೆಗೆ ಕಾರಣವಾಗಿದೆ. ಜಾಗತಿಕವಾಗಿ ಕಚ್ಛಾ ತೈಲದಲ್ಲಿ ಯಾವುದೇ ಬೆಲೆ ಏರಿಕೆ ಆಗದಿದ್ದರೂ ದೇಶದಲ್ಲಿ ಈ ಪ್ರಮಾಣದಲ್ಲಿ ಇವುಗಳ ಬೆಲೆಗಳು ಏರಿಕೆಯಾಗಲೂ  ಕೇಂದ್ರ ಸರಕಾರವೇ ನೇರ ಹೊಣೆಗಾರನಾಗಿದೆ. ಇದು ಜನತೆಯನ್ನು ದೊಡ್ಡ ಪ್ರಮಾಣದಲ್ಲಿ ಲೂಟಿಗೊಳಪಡಿಸುವ ವಿಚಾರವಾಗಿದ್ದು ಇದನ್ನು ರಾಜ್ಯದಾದ್ಯಂತ ಪ್ರತಿರೋಧಿಸಿ ಹೋರಾಟವನ್ನು ಹಮ್ಮಿಕೊಳ್ಳಬೇಕೆಂದು ಜನತೆಗೆ ಸಿಪಿಐ(ಎಂ) ಕರೆ ನೀಡಿದೆ.

Donate Janashakthi Media

Leave a Reply

Your email address will not be published. Required fields are marked *