ಹರಿಯಾಣ ಹಿಂಸಾಚಾರ: ವಿಎಚ್‌ಪಿ, ಬಜರಂಗದಳದ ರ‍್ಯಾಲಿ ನಿಲ್ಲಿಸುವಂತೆ ಸುಪ್ರೀಂಕೋರ್ಟ್‌ಗೆ ಅರ್ಜಿ

ಹರಿಯಾಣದಲ್ಲಿ ಹಿಂದುತ್ವ ಗುಂಪು ಮಸೀದಿಗೆ ಬೆಂಕಿ ಹಚ್ಚಿ, ಇಮಾಂ ಅನ್ನು ಗುಂಡಿಕ್ಕಿ ಕೊಂದಿದೆ

ನವದೆಹಲಿ: ಹರಿಯಾಣದ ನೂಹ್‌ನಲ್ಲಿ ಭುಗಿಲೆದ್ದ ಕೋಮು ಹಿಂಸಾಚಾರದ ನಂತರ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಬಿಜೆಪಿಯ ಸಹ ಸಂಘಟನೆಗಳಾದ ವಿಎಚ್‌ಪಿ ಮತ್ತು ಬಜರಂಗದಳ ಘೋಷಿಸಿದ ರ‍್ಯಾಲಿಗಳನ್ನು ನಿಲ್ಲಿಸುವಂತೆ ಕೋರಿ ಸುಪ್ರೀಂ ಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಲಾಗಿದೆ. ಹಿರಿಯ ವಕೀಲ ಸಿ.ಯು. ಸಿಂಗ್ ಅವರು ರ‍್ಯಾಲಿಯನ್ನು ನಿಲ್ಲಿಸುವಂತೆ ಸುಪ್ರೀಂ ಕೋರ್ಟ್‌ಗೆ ತುರ್ತು ಅರ್ಜಿ ಸಲ್ಲಿಸಿದ್ದಾರೆ.

ನ್ಯಾಯಮೂರ್ತಿ ಅನಿರುದ್ಧ ಬೋಸ್ ಅವರಿಂದ ಶೀಘ್ರ ವಿಚಾರಣೆಯನ್ನು ಕೋರಿದ್ದೇನೆ, ಆದರೆ ಅವರು ಅವರನ್ನು ಸಿಜೆಐಗೆ ಉಲ್ಲೇಖಿಸಿದ್ದಾರೆ ಎಂದು ವಕೀಲ ಸಿ.ಯು. ಸಿಂಗ್ ಮುಖ್ಯ ನ್ಯಾಯಮೂರ್ತಿಗೆ ತಿಳಿಸಿದರು. ಮುಖ್ಯ ನ್ಯಾಯಮೂರ್ತಿಗಳು, “ನಾವು ಸಂವಿಧಾನ ಪೀಠದ ವಿಚಾರಣೆಗಳನ್ನು ಕೈಗೆತ್ತಿಕೊಂಡಿದ್ದೇವೆ. ತುರ್ತು ಪ್ರಕರಣಗಳ ತ್ವರಿತ ವಿಚಾರಣೆಗೆ ವ್ಯವಸ್ಥೆ ಮಾಡಿದ್ದೇವೆ. ಉಲ್ಲೇಖಿಸುವ ರಿಜಿಸ್ಟ್ರಾರ್ ಬಳಿಗೆ ಹೋಗಿ” ಎಂದು ಹೇಳಿದ್ದಾರೆ. ಹಾಗಾಗಿ ಪ್ರಕರಣವನ್ನು ಸ್ವಲ್ಪ ಕಾಲ ಮುಂದೂಡಲಾಗಿದ್ದು, ಉಲ್ಲೇಖಿಸಿದ ರಿಜಿಸ್ಟ್ರಾರ್ ಅದನ್ನು ತ್ವರಿತ ವಿಚಾರಣೆಗಾಗಿ ಪಟ್ಟಿ ಮಾಡುತ್ತಾರೆ.

ಬಿಜೆಪಿ ಪರ ಬಲಪಂಥೀಯ ಸಂಘಟನೆಯಾದ ವಿಎಚ್‌ಪಿ ಮತ್ತು ಬಜರಂಗದಳ ಇಂದು ರಾಷ್ಟ್ರ ರಾಜಧಾನಿ ದೆಹಲಿಯಾದ್ಯಂತ ಹರಿಯಾಣದ ನೂಹ್‌ನಲ್ಲಿ ನಡೆದ ಘಟನೆಯನ್ನು ವಿರೋಧಿಸಿ ಪ್ರತಿಭಟಿಸಲು ರ‍್ಯಾಲಿಗಳನ್ನು ನಡೆಸಲು ನಿರ್ಧರಿಸಲಾಗಿದೆ.

ಇದನ್ನೂ ಓದಿ: ಹರಿಯಾಣ | ಮಸೀದಿಗೆ ಬೆಂಕಿ ಹಚ್ಚಿ, ಇಮಾಂ ಅನ್ನು ಗುಂಡಿಕ್ಕಿ ಕೊಂದ ಹಿಂದುತ್ವ ಗುಂಪು

ಹರ್ಯಾಣದ ನೂಹ್‌ನಲ್ಲಿ ಇತ್ತೀಚೆಗೆ ನಡೆದ ಹಿಂಸಾತ್ಮಕ ಘರ್ಷಣೆಗಳ ವಿರುದ್ಧ ವಿಎಚ್‌ಪಿ ಪ್ರತಿಭಟನೆಗೆ ಕರೆ ನೀಡಿದ ನಂತರ ಬಜರಂಗದಳದ ಸದಸ್ಯರು ದೆಹಲಿಯ ನಿರ್ಮಾಣ್ ವಿಹಾರ್ ಮೆಟ್ರೋ ನಿಲ್ದಾಣದ ಬಳಿ ಪ್ರತಿಭಟನೆ ನಡೆಸಿದ್ದಾರೆ. ಹಾಗಾಗಿ ರಾಷ್ಟ್ರ ರಾಜಧಾನಿಯಲ್ಲಿ ಭದ್ರತೆಯನ್ನು ಬಿಗಿಗೊಳಿಸಲಾಗಿದೆ.

ಮೇವಾತ್ ಪ್ರದೇಶದಲ್ಲಿ ನಡೆಯುತ್ತಿರುವ ಘರ್ಷಣೆಗಳ ವಿರುದ್ಧ ವಿಎಚ್‌ಪಿ ಇಂದು ಪ್ರತಿಭಟನೆಗೆ ಕರೆ ನೀಡಿದೆ. ವಿಎಚ್‌ಪಿ ಮತ್ತು ಬಜರಂಗದಳ ಬುಧವಾರ ಸಂಜೆ 4 ಗಂಟೆಗೆ ಮನೇಸರ್‌ನ ಭೀಸಂ ದಾಸ್ ಮಂದಿರದಲ್ಲಿ ಮಹಾಪಂಚಾಯತ್‌ಗೆ ಕರೆ ನೀಡಿದೆ. ನೋಯ್ಡಾದಲ್ಲಿ ಪ್ರತಿಭಟನೆಯನ್ನು ನಡೆಸಲಿದೆ. ಸೆಕ್ಟರ್ 21 ಎ ನಲ್ಲಿರುವ ನೋಯ್ಡಾ ಕ್ರೀಡಾಂಗಣದಿಂದ ಸೆಕ್ಟರ್ 16 ರ ರಜನಿಗಂಧ ಚೌಕ್ ಕಡೆಗೆ ಪ್ರತಿಭಟನಾ ಮೆರವಣಿಗೆಯನ್ನು ಪ್ರಾರಂಭಿಸಲಾಗುವುದು, ಅಲ್ಲಿ ಪ್ರತಿಕೃತಿ ದಹಿಸಲಾಗುವುದು ಎಂದು ವಿಎಚ್‌ಪಿಯ ಪ್ರಚಾರ ಮುಖ್ಯಸ್ಥ ರಾಹುಲ್ ದುಬೆ ಹೇಳಿದ್ದಾರೆ.

ಮಂಗಳವಾರ ರಾತ್ರಿ ಗುರುಗ್ರಾಮ್‌ನಲ್ಲಿ ನಡೆದ ಹಿಂಸಾಚಾರವು ದೆಹಲಿಯನ್ನು ಎಚ್ಚರಿಸಿದ್ದು, ಗುರುಗ್ರಾಮ್ ಪೊಲೀಸರು ಸಾಮಾಜಿಕ ಮಾಧ್ಯಮದಲ್ಲಿನ ವರದಿಗಳಿಗೆ ಗಮನ ಕೊಡಬೇಡಿ ಎಂದು ಮನವಿ ಮಾಡಿದ್ದಾರೆ. ಯಾವುದೇ ಸಹಾಯದ ಸಂದರ್ಭದಲ್ಲಿ 112 ಅನ್ನು ಡಯಲ್ ಮಾಡಲು ಜನರಿಗೆ ಮನವಿ ಮಾಡಿದ್ದಾರೆ. ಹರಿಯಾಣದಲ್ಲಿ ಇತ್ತೀಚಿನ ಹಿಂಸಾಚಾರದ ಘಟನೆಗಳ ನಂತರ ಗುರುಗ್ರಾಮ್‌ನ ಬಾದ್‌ಶಾಹ್‌ಪುರದಲ್ಲಿ ಕ್ಷಿಪ್ರ ಕಾರ್ಯಾಚರಣೆ ಪಡೆ ಸಿಬ್ಬಂದಿ ಧ್ವಜ ಮೆರವಣಿಗೆ ನಡೆಸಿದರು.

ವಿಡಿಯೊ ನೋಡಿ: ನ್ಯಾಷನಲ್ ಕೊ – ಆಪರೇಟಿವ್ ಬ್ಯಾಂಕ್ ವಿವಾದ : ದುಡಿದು ಕೂಡಿಟ್ಟ ದುಡ್ಡಿಗಾಗಿ ಪರದಾಡುತ್ತಿರುವ ಠೇವಣಿದಾರರು

Donate Janashakthi Media

Leave a Reply

Your email address will not be published. Required fields are marked *