ನವದೆಹಲಿ: ಹನಿಟ್ರ್ಯಾಪ್ ಎಂಬ ಜಾಲಕ್ಕೆ ಕರ್ನಾಟಕದಲ್ಲಿ ರಾಜಕಾರಣಿಗಳು, ನ್ಯಾಯಾಧೀಶರು ಹಾಗೂ ಇತರೆ ರಾಜಕೀಯ ಪ್ರಭಾವಿ ವ್ಯಕ್ತಿಗಳನ್ನು ಸಿಲುಕಿಸಲಾಗುತ್ತಿದೆ. ಇದನ್ನು ಸಿಬಿಐ ತನಿಖೆಗೆ ನೀಡಬೇಕೆಂದು ಸಲ್ಲಿಸಲಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಸುಪ್ರೀಂ ಕೋರ್ಟ್ ವಜಾಗೊಳಿಸಿದೆ.
ಈ ಅರ್ಜಿಯನ್ನು ವಿನಯ್ ಕುಮಾರ್ ಸಿಂಗ್ ಎಂಬ ವಕೀಲರು ಸಲ್ಲಿಸಿದ್ದೂ, ವಿಚಾರಣೆಗೊಳಿಸಿದ ನ್ಯಾಯಾಲಯ, ನೀವು ಜಾರ್ಖಂಡ್ ನವರು. ಇದು ನಡೆದಿರುವುದು ಕರ್ನಾಟಕದಲ್ಲಿ. ಇದಕ್ಕೂ ನಿಮಗೂ ಏನು ಸಂಬಂಧ ಎಂದು ಪ್ರಶ್ನಿಸಿದರು.
ಇದನ್ನೂ ಓದಿ: ಗಂಡ ಸತ್ತ ಮಹಿಳೆಯನ್ನು ವಿವಸ್ತ್ರಗೊಳಿಸಿ ಹಲ್ಲೆ; 1 ತಿಂಗಳ ಕಾಲ ಕೇಸು ದಾಖಲಿಸದೆ ವಿಳಂಬ
ಅಲ್ಲದೇ, ಪೊಲಿಟಿಕಲಿ ನಾನ್ಸೆನ್ಸ್ ಗಳನ್ನು ವಿಚಾರಣೆ ಮಾಡಲು ಸಾಧ್ಯವಿಲ್ಲ. ನ್ಯಾಯಾಧೀಶರನ್ನು ಹನಿಟ್ರ್ಯಾಪ್ ಗೆ ಒಳಪಡಿಸಿದರೆ ಅದು ಅವರ ತಲೆಬಿಸಿ. ಅದನ್ನು ನ್ಯಾಯಾಧೀಶರೇ ನೋಡಿಕೊಳ್ಳುತ್ತಾರೆ ಎಂದು ಜಡ್ಜ್ ಅರ್ಜಿದಾರರ ವಿರುದ್ದ ಹರಿಹಾಯ್ದರು.
ಇದನ್ನೂ ನೋಡಿ: ದುಡಿಯುವ ಜನರಿಗೆ ದುಡ್ಡಿಲ್ಲ! ಆದರೆ ಶಾಸಕರ ವೇತನ ದುಪ್ಪಟ್ಟಾಯ್ತು!! ಅಂಥಾ ಕಷ್ಟ ಅವರಿಗೇನಿತ್ತು? Janashakthi Media