ತೋರಣಗಲ್ಲು: 4 ವರ್ಷದ ಬಾಲಕಿಯ ಮೇಲೆ ಅತ್ಯಾಚಾರ ನಡೆಸಿದ ವ್ಯಕ್ತಿಯ ಮೇಲೆ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಎಸ್‌ಎಫ್‌ಐನ ಸಂಚಾಲಕರಾದ ಶಿವರೆಡ್ಡಿ ಮತ್ತು ಡಿವೈಎಫ್‌ಐನ ಜಿಲ್ಲಾ ಉಪಾಧ್ಯಕ್ಷರರಾದ ಎಚ್ ಸ್ವಾಮಿ ಒತ್ತಾಯಿಸಿದ್ದಾರೆ.
ತೋರಣಗಲ್ಲು ಗ್ರಾಮದ ಬಾಲಕಿಯ ಮೇಲೆ ಅತ್ಯಾಚಾರ ಎಸಗಿದ ದುಷ್ಕರ್ಮಿಯನ್ನು ಕೂಡಲೇ ಬಂದಿಸಿ ಉಗ್ರ ಶಿಕ್ಷೆ ನೀಡಲು ಓತ್ತಾಯಿಸುತ್ತೇವೆ. ವಡ್ಡು ಗ್ರಾಮದ ಬಾಲಕಿ ರೂಪ ಮೇಲೆ ಅತ್ಯಾಚಾರ ಘಟನೆ ಜನ ಮಾನಸದಿಂದ ಮಾಸುವ ಮುಂಚೆಯೇ ತೋರಣಗಲ್ಲು ಗ್ರಾಮದಲ್ಲಿ ಜನರು ಬೆಚ್ಚಿ ಬೀಳಿಸುವಂತ ಪೈಶಾಚಿಕ ಕೃತ್ಯ ಮತ್ತೊಂದು ನಡೆದಿದೆ.
ಇನ್ನೂ ಏನೂ ಅರಿಯದ 4 ವರ್ಷದ ಮುಗ್ಧ ಬಾಲಕಿ ಮೇಲೆ ದುಷ್ಕರ್ಮಿಯ ನೊಬ್ಬ ಅತ್ಯಾಚಾರ ಎಸಗಿ ಪರಾರಿಯಾಗಿದ್ದಾನೆ. ಈ ಪ್ರಕರಣ ಮತ್ತೊಮ್ಮೆ ತೋರಣಗಲ್ಲ ಗ್ರಾಮದ ಕೈಗಾರಿಕಾ ಪ್ರದೇಶದಲ್ಲಿ ಸುರಕ್ಷತೆ ಬಗ್ಗೆ ಅನುಮಾನ ಮೂಡಿಸುವಂತೆ ಮಾಡಿದ್ದು ಭಾರೀ ಆತಂಕ ಜನರಲ್ಲಿ ವ್ಯಕ್ತವಾಗುತ್ತಿದೆ. ಸಂಡೂರು ತಾಲೂಕಿನ ತೋರಣಗಲ್ಲು ಗ್ರಾಮದ ಜಾರ್ಖಂಡ ಕುಟುಂಬ ಮೂಲದ ಐದು ವರ್ಷದ ಪರಿ ಎಂಬ ಬಾಲಕಿ ಮೇಲೆ ಅತ್ಯಾಚಾರ ಎಸಗಿದ ಘಟನೆ ನಡೆದಿದೆ.
ದಿನಾಂಕ 13.01.2025 ಸೋಮವಾರ ರಂದು ಸಂಜೆ 5.00 ಗಂಟೆ ಸುಮಾರಿಗೆ ತೋರಣಗಲ್ಲು ರೈಲ್ವೆ ನಿಲ್ದಾಣ ರಸ್ತೆಯ ಪದ್ಮನಾಬ್ ಎಂಬವರ ಮನೆ ಪಕ್ಕದ ಮನೆ ಬಳಿ ವಠಾರದಲ್ಲಿ ಮಕ್ಕಳೊಂದಿಗೆ ಆಟವಾಡುತ್ತಿದ್ದ ಮಗುವನ್ನು ಚಾಕಲೇಟ್ ಜ್ಯೂಸ್ ಆಸೆ ತೋರಿಸಿ ಕರೆದುಕೊಂಡು ಹೋಗಿ ವಿಜಯ ಲಕ್ಷ್ಮಿ ಚಿತ್ರ ಮಂದಿರದ ಕಂಪೌಂಡ್ ಪಕ್ಕ ಪಾಳು ಬಿದ್ದಿರುವ ರೂಮಗಳ ಸಾಲಿನ 3 ನೇ ಕಟ್ಟಡದಲ್ಲಿ ಅತ್ಯಾಚಾರವೆಸಗಿ ಬಿಟ್ಟು ಹಾಕಿದ್ದು, ಮಗುವಿನ ಅಳುವನ್ನು ಕೇಳಿ ರಕ್ಷಿಸಲಾಗಿದೆ.
ಇದನ್ನೂ ಓದಿ : ಕೋಮು ಪ್ರಚೋದನಾಕಾರಿ ಭಾಷಣ: ಬಿಜೆಪಿ ಯುವ ಮೋರ್ಚಾ ಪ್ರಧಾನ ಕಾರ್ಯದರ್ಶಿ ಅರುಣ್ ಕುಗ್ವೆ ವಿರುದ್ದ ಪ್ರಕರಣ ದಾಖಲು
ಜಾರ್ಖಂಡ ಮೂಲದ ಸುನಿಲ್ ಚೌದ್ರಿ ಮತ್ತು ಸಂಗೀತ ದೇವಿ ಎಂಬ ದಂಪತಿಗಳ ಮೂರು ಮಕ್ಕಳಲ್ಲಿ ಅತ್ಯಾಚಾರಕ್ಕೆ ಒಳಗಾದ ಬಾಲಕಿ ಕುಮಾರಿ ಪರಿ ಎರಡನೇ ಮಗುವಾಗಿದೆ. ತಂದೆ ಸುನಿಲ್ ಚೌದರಿ 11 ವರ್ಷ ವಾಸದಿಂದ ಜಿಂದಾಲ್ ಕಂಪನಿಯಲ್ಲಿ ಕ್ರೇನ್ ಅಪರೇಟರ್ ರಾಗಿದ್ದು ವಠಾರದಲ್ಲಿ ವಾಸವಾಗಿದ್ದರು.ಪೊಲೀಸರು ಬಾಲಕಿಯನ್ನು ಆಸ್ಪತ್ರೆಗೆ ಕರೆದೊಯ್ದು ವೈದ್ಯಕೀಯ ಪರೀಕ್ಷೆ ನಡೆಸಿದ್ದು, ಭಾರತೀಯ ನ್ಯಾಯ ಸಂಹಿತೆಯ ಸೆಕ್ಷನ್ 65(2)(12 ವರ್ಷದೊಳಗಿನ ಮಹಿಳೆಯ ಅತ್ಯಾಚಾರ) ಮತ್ತು ಲೈಂಗಿಕತೆಯಿಂದ ಮಕ್ಕಳ ರಕ್ಷಣೆ ಕಾಯ್ದೆ(ಪೋಕ್ಸೊ) ಅಡಿಯಲ್ಲಿ ಎಫ್‌ಐಆರ್ ದಾಖಲಿಸಿದ್ದಾರೆ ಎಂದು ತಿಳಿದು ಬಂದಿದೆ.
ಅತ್ಯಚಾರಿ ದುಷ್ಕರ್ಮಿ ಮಂಜು ಎಂಬುವನು ವಿವಾಹಿತನಾಗಿದ್ದು ಕಮಾಲಾಪುರ ಮೂಲದ ನಿವಾಸಿಯಾಗಿದ್ದಾನೆ ಎಂದು ತಿಳಿದು ಬಂದಿದೆ. ತೋರಣಗಲ್ಲು ಕೈಗಾರಿಕಾ ವ್ಯಾಪ್ತಿಗಳಲ್ಲಿ ವ್ಯಾಪಕವಾಗಿ ಅತ್ಯಾಚಾರ, ದೌರ್ಜನ್ಯ , ಕೈಗಾರಿಕೆ ಅಪಘಾತಗಳು, ರಸ್ತೆ ಅಪಘಾತಗಳು, ಸಂಭವಿಸುತ್ತದೆ. ದುಷ್ಕೃತ್ಯ ವ್ಯಸಗಿದ ಅಪರಾಧಿಗಳ ಪರ ನಿಂತು, ಕಾನೂನುಗಳನ್ನು ದಾರಿ ತಪ್ಪಿಸುವ ಸಂಚು ನಡೆಸಿಕೊಂಡು ಬರುವ ಸ್ಥಳೀಯ ದುಷ್ಕರ್ಮಿಗಳು ಇಂತಹ ಘಟನೆಗಳ ದುರ್ಲಾಭವನ್ನು ಪಡೆದುಕೊಳ್ಳುತ್ತಿದ್ದಾರೆ. ಆದ್ದರಿಂದ ಅನೇಕ ಘಟನೆಗಳಿಗೆ ನ್ಯಾಯ ದೊರಕಿರುವುದಿಲ್ಲ. ಕಾನೂನಾತ್ಮಕ ತನಿಖೆ ನಡೆಯದೆ ಶಿಕ್ಷೆಗಳಿಂದ ರಕ್ಷಿಸುವ ಕೆಲಸ ಮಾಡುತ್ತಿದ್ದಾರೆ.
ವಡ್ಡು ಗ್ರಾಮದಲ್ಲಿ ನಡೆದ ಕು. ರೂಪ ಎಂಬ ಬಾಲಕಿಯ ಅತ್ಯಾಚಾರದ ನಂತರ ಮತ್ತೊಂದು ತೋರಣಗಲ್ಲು ಗ್ರಾಮದಲ್ಲಿ ಕು. ಪರಿ ಎಂಬ ಬಾಲಕಿಯ ಮೇಲೆ ಅತ್ಯಾಚಾರ ನಡೆದಿರುವ ಅಮಾನವೀಯ ಘಟನೆಯನ್ನು ತೀವ್ರವಾಗಿ ಖಂಡಿಸುತ್ತೇವೆ. ಅಪರಾಧಿಗಳಿಗೆ ಕಠಿಣ ಶಿಕ್ಷೆ ಯಾಗುವಂತೆ ದೂರನ್ನು ದಾಖಲಿಸಿ ಯಾವುದೇ ರಾಜಕಾರಣಿಗಳ ಪುಡಾರಿಗಳ ಒತ್ತಡಕ್ಕೆ ಮಣಿಯದೆ ತೀವ್ರ ಕ್ರಮ ಕೈಗೊಳ್ಳಲು ಒತ್ತಾಯಿಸುತ್ತೇವೆ. ಇಂತಹ ಅಮಾನವೀಯ ಘಟನೆಗಳ ಅಪರಾಧಿಗಳಿಗೆ ರಕ್ಷಿಸುವ ವ್ಯಕ್ತಿಗಳ ಮೇಲೆ ಕಠಿಣ ಕ್ರಮಗಳನ್ನು ಕೈಗೊಳ್ಳಲು ಕೇಳಿಕೊಳ್ಳುತ್ತೇವೆ ಎಂದು ಎಸ್‌ಎಫ್‌ಐ ಸಂಚಾಲಕರಾದ ಶಿವರೆಡ್ಡಿ ಮತ್ತು ಡಿವೈಎಫ್‌ಐನ ಜಿಲ್ಲಾ ಉಪಾಧ್ಯಕ್ಷರರಾದ ಎಚ್ ಸ್ವಾಮಿ, ಜಿಲ್ಲಾ ಸಮಿತಿ ಸದಸ್ಯರಾದ ಎಸ್ ಕಾಲುಬಾ ಅರ್ಜುನ್ ಒತ್ತಾಯಿಸಿದ್ದಾರೆ.
ಡಿವೈಎಫ್ಐ ಮುಖಂಡರಾದ ಎರ್ರಿಸ್ವಾಮಿ, ಅಮರ್,ನಂದೀಶ್,ಗ್ರಾಮದ ಮುಖಂಡರಾದ ಲೋಕೇಶ್ ಬುಡ್ಡಿಗ,ಎನ್.ಪಂಪಾಪತಿ,ಯಾಕೂಬ್ ಜಯಸೂರ್ಯ, ಎಂ.ಪಿ.ತಿಮ್ಮಪ್ಪ,ವಿಧ್ಯಾರ್ಥಿಗಳಾದ ಪೂಜಾ ಮಲ್ಲೇಶ್ ಗ್ರಾಮದ ನೂರಾರು ವಿಧ್ಯಾರ್ಥಿಗಳು ಭಾಗವಹಿಸಿದ್ದರು.
ಡಿವೈಎಸ್ಪಿ ಪ್ರಸಾದ್ ಗೋಖಲೆ,ಉಪ ತಹಶೀಲ್ದಾರ್ ಸುಬ್ಬಾರಾವ್ ದೇಸಾಯಿ ಅವರಿಗೆ ಮನವಿ ಪತ್ರ ನೀಡಲಾಯಿತು.
ಇದನ್ನೂ ನೋಡಿ : ಬಳ್ಳಾರಿ ವಿಶ್ವವಿದ್ಯಾಲಯ : ಕಿರುಕುಳಕ್ಕೆ ಹಂಗಾಮಿ ನೌಕರ ಆತ್ಮಹತ್ಯೆ – ಎಸ್ಎಫ್ಐ ಆರೋಪ Janashakthi Media