ಪೀಪಲ್ಸ್ ಬ್ರಿಗೇಡ್ ಗೆ ವ್ಯಾಪಕ ಬೆಂಬಲ : ಚುನಾವಣಾ ಪ್ರಚಾರದ ಅಖಾಡಕ್ಕಿಳಿದ ಎಡಪಕ್ಷಗಳು ಮತ್ತು ಕಾಂಗ್ರೆಸ್

ಕೋಲ್ಕತಾ: ಬ್ರಿಗೇಡ್ ಪರೇಡ್ ಮೈದಾನದಲ್ಲಿ ಮೆಗಾ ರ್‍ಯಾಲಿ ನಡೆಸುವ ಮೂಲಕ ಎಡಪಕ್ಷ-ಕಾಂಗ್ರೆಸ್-ಐಎಸ್ ಎಫ್ ಮುಂಬರುವ ವಿಧಾನಸಭಾ ಚುನಾವಣೆಗೆ ತನ್ನ ಪ್ರಚಾರ ಅಭಿಯಾನವನ್ನು ಆರಂಭಿಸಿದೆ.

ಎಡ ಪಕ್ಷವು ಕಾಂಗ್ರೆಸ್ ಹಾಗೂ ಹೊಸತಾಗಿ ರಚನೆಯಾಗಿರುವ ಇಂಡಿಯನ್ ಸೆಕ್ಯುಲರ್ ಫ್ರಂಟ್( ಐಎಸ್‌ಎಫ್)ನೊಂದಿಗೆ ರವಿವಾರ ಬೃಹತ್ ರ್‍ಯಾಲಿ ನಡೆಸುವ ಮೂಲಕ ಶಕ್ತಿ ಪ್ರದರ್ಶನ ಮಾಡಿದೆ.

ಸಿಪಿಐಎಂ ಪ್ರಧಾನ ಕಾರ್ಯದರ್ಶಿ ಸೀತಾರಾಂ ಯೆಚೂರಿ ಬಹಿರಂಗ ಸಭೆಯನ್ನು ಉದ್ದೇಶಿಸಿ ಮಾತನಾಡುತ್ತಾ, ಪಶ್ಚಿಮ‌ ಬಂಗಾಳದ ಜನ
ಆಡಳಿತಾರೂಢ ತೃಣಮೂಲ ಕಾಂಗ್ರೆಸ್ ದುರಾಡಳಿತಕ್ಕೆ, ಗೂಂಡಾಗಿರಿ ಆಡಳಿತಕ್ಕೆ ಬೇಸತ್ತಿದ್ದಾರೆ.ಇಲ್ಲಿ ಸೇರಿರುವ ಜನಸ್ತೋಮವೇ ಇದಕ್ಕೆ ಸಾಕ್ಷಿಯಾಗಿದೆ. ಇನ್ನೂ ಬಿಜೆಪಿ ಹಿಂದುತ್ವದ ಹೆಸರಲ್ಲಿ ಕೋಮ ಗಲಭೆ ಸೃಷ್ಠಿಸಿ ಅಧಿಕಾರ ಪಡೆಯಲು ದುರ್ಮಾರ್ಗಗಳನ್ನು ಹುಡುಕುತ್ತಿದೆ. ಪಶ್ಚಿಮ ಬಂಗಾಳದ ಜನ ಈ ಬಾರಿಯ ಚುನಾವಣೆಯಲ್ಲಿ ಬಿಜೆಪಿಯನ್ನು ತಿರಸ್ಕರಿಸಲಿದ್ದಾರೆ, ತೃಣಮೂಲ ಕಾಂಗ್ರೆಸ್ ನ್ನು ಸೋಲಿಸಲಿದ್ದಾರೆ ಎಂದರು. ರ್‍ಯಾಲಿಯಲ್ಲಿ ಮಾತನಾಡಿದ ಇತರ ಮುಖಂಡರು ತೃಣಮೂಲ ಹಾಗೂ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ್ದು, ರಾಜ್ಯದಲ್ಲಿ ಜನಹಿತ ಸರಕಾರಕ್ಕಾಗಿ ಮೂರನೇ ಪರ್ಯಾಯ ಶಕ್ತಿಯ ಅಗತ್ಯವಿದೆ ಎಂದು ಒತ್ತಿ ಹೇಳಿದರು.

ಜನಶಕ್ತಿ ಮೀಡಿಯಾ ವಾಟ್ಸಪ್ ಸೇರಿಕೊಳ್ಳಲು ಈ ಲಿಂಕ್ ಕ್ಲಿಕ್ ಮಾಡಿ

ಬಹಿರಂಗ ಸಭೆಯಲ್ಲಿ ಸಿಪಿಐನ ಡಿ.ರಾಜಾ, ರಾಜ್ಯ ಕಾಂಗ್ರೆಸ್ ಅಧ್ಯಕ್ಷ ಅಧೀರ್ ರಂಜನ್ ಚೌಧರಿ, ಸಿಪಿಐಎಂ ರಾಜ್ಯ ಕಾರ್ಯದರ್ಶಿ ಸೂರ್ಯಕಾಂತ ಮಿಶ್ರಾ, ಭಿಮನ್ ಬಸೂ, ಛತ್ತೀಸ್ಗಢ ಸಿಎಂ ಭೂಪೇಶ್ ಬಾಗೆಲ್ ಸೇರಿದಂತೆ ಎಡಪಕ್ಷಗಳ, ಕಾಂಗ್ರೆಸ್, ಐಎಸ್ಎಫ್ ನ ರಾಜ್ಯ ಮುಖಂಡರು ಹಾಜರಿದ್ದರು.

ಪೀಪಲ್ಸ್ ಬ್ರಿಗೇಡ್ ಗೆ ವ್ಯಾಪಕ ಬೆಂಬಲ : ಪೀಪಲ್ಸ್ ಬ್ರಿಗೇಡ್ ಗೆ ವ್ಯಾಪಕ ಜನಸಾಗರ ಹರಿದು ಬಂದಿದ್ದು 15 ಲಕ್ಷಕ್ಕೂ ಹೆಚ್ಚು ಮಂದಿ ಮೆರವಣಿಗೆಯಲ್ಲಿ ಭಾಗವಹಿಸಿದ್ದಾಗಿ ವರದಿಯಾಗಿದೆ. ಮೋದಿ ಮತ್ತು ದೀದಿ ವಿರುದ್ಧ ಘೋಷಣೆಗಳನ್ನು ಮೊಳಗಿಸುತ್ತಿದ್ದರು. ಬ್ರಿಗೇಡ್ ಮೈದಾನ ಭರ್ತಿಗೊಂಡ ಕಾರಣ ಹಲವರು ಮರು ಏರಿ ಕಾರ್ಯಕ್ರಮವನ್ನು ವೀಕ್ಷಿಸುತ್ತಿದ್ದರು. ಲಕ್ಷಾಂತರ ಜನ ಮೆರವಣಿಗೆಯಲ್ಲಿ ಭಾಗವಹಿಸುವ ಮೂಲಕ ಎಡ ಪಕ್ಷ ಮತ್ತು ಕಾಂಗ್ರೆಸ್ ಹಾಗೂ ಐಎಸ್ಎಫ್ ಭರ್ಜರಿಯಾಗಿಯೇ ಚುನಾವಣೆ ಆರಂಭಿಸಿವೆ. ಈ ಬಾರಿ ಪಶ್ಚಿಮ‌ ಬಂಗಾಳದಲ್ಲಿ ಎಡಪಕ್ಷಕ್ಕೆ ವ್ಯಾಪಕ‌ ಬೆಂಬಲ ವ್ಯಕ್ತವಾಗುತ್ತಿದೆ. ಎಡಪಕ್ಷ ಹಾಗೂ ಕಾಂಗ್ರೆಸ್ ಮೈತ್ರಿಕೂಟವನ್ನು ಅಷ್ಟು ಸುಲಭವಾಗಿ ಸೋಲಿಸಲು ಈ ಬಾರಿ ಸಾಧ್ಯವಿಲ್ಲ. ಹಾಗಾಗಿ ಟಿಎಂಸಿ ಗೆಲವು ಹಾಗೂ ಆಡಳಿತ ಹಿಡಿಯಲು ದುರ್ಮಾರ್ಗ ಬಳಸುತ್ತಿರುವ ಬಿಜೆಪಿಯ ಕನಸ್ಸಿಗೆ ಅಡ್ಡಿ ಆಗುವುದು ಗ್ಯಾರಂಟಿ ಎಂಬುದು ರಾಜಕೀಯ ವಿಶ್ಲೇಷಕರ ಅಭಿಪ್ರಾಯವಾಗಿದೆ.

ಇದನ್ನು ಓದಿ : ಪಂಚರಾಜ್ಯಗಳ ವಿಧಾನಸಭಾ ಚುನಾವಣಾ ದಿನಾಂಕ ಪ್ರಕಟ

Donate Janashakthi Media

Leave a Reply

Your email address will not be published. Required fields are marked *