‘ಸರ್ಕಾರ ಬದಲಾವಣೆ ಜನರ ಬಯಕೆ, ಈಗ ಹೊರಡುವ ಸಮಯ’: ರಾಜನಾಥ್ ಸಿಂಗ್‌ಗೆ ಕಪಿಲ್ ಸಿಬಲ್ ತಿರುಗೇಟು

ಎಸ್‌ಐಆರ್‌ ವಿರುದ್ಧದ ಪ್ರತಿಭಟನೆಗಳನ್ನು ‘ಬಾಂಗ್ಲಾದೇಶ ಮಾದರಿಯ ಆಡಳಿತ ಬದಲಾವಣೆ’ ಎಂದು ಟೀಕಿಸಿದ್ದ ರಕ್ಷಣಾ ಸಚಿವ; ಮತದಾರರ ಪಟ್ಟಿ ತಿರುಚುವಿಕೆ, ಭ್ರಷ್ಟಾಚಾರ ಮತ್ತು ಸಾಂವಿಧಾನಿಕ ಸಂಸ್ಥೆಗಳ ದುರ್ಬಳಕೆ ಕುರಿತು ಸಿಬಲ್ ಆರೋಪ
ನವದೆಹಲಿ: ಕಾಂಗ್ರೆಸ್‌ ಮತ್ತು ಅದರ ಮಿತ್ರಪಕ್ಷಗಳು ಬಾಂಗ್ಲಾದೇಶದ ಮಾದರಿಯಲ್ಲಿ ಸರ್ಕಾರ ಬದಲಾವಣೆಗೆ ಪ್ರಯತ್ನಿಸುತ್ತಿವೆ ಎಂಬ ಕೇಂದ್ರ ರಕ್ಷಣಾ ಸಚಿವ ರಾಜನಾಥ್‌ ಸಿಂಗ್‌ ಅವರ ಆರೋಪಕ್ಕೆ ರಾಜ್ಯಸಭಾ ಸದಸ್ಯ ಕಪಿಲ್‌ ಸಿಬಲ್‌ ತಿರುಗೇಟು ನೀಡಿದ್ದಾರೆ. “ಸರ್ಕಾರ ಬದಲಾವಣೆ ಜನರ ಬಯಕೆ. ಈಗ ಈ ಸರ್ಕಾರ ಹೊರಡುವ ಸಮಯ” ಎಂದು ಅವರು ಹೇಳಿದ್ದಾರೆ. ‘ಸರ್ಕಾರ 

ದೆಹಲಿಯಲ್ಲಿ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್‌) ಪ್ರಕ್ರಿಯೆಯಲ್ಲಿನ ಅಕ್ರಮಗಳ ವಿರುದ್ಧ ನಡೆಯುತ್ತಿರುವ ಪ್ರತಿಭಟನೆಗಳ ಕುರಿತು ರಾಜನಾಥ್‌ ಸಿಂಗ್‌ ನೀಡಿದ್ದ ಹೇಳಿಕೆಗೆ ಪ್ರತಿಕ್ರಿಯಿಸಿರುವ ಸಿಬಲ್‌, ಸಾಮಾಜಿಕ ಜಾಲತಾಣ ‘ಎಕ್ಸ್‌’ನಲ್ಲಿ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ.

“ಕಾಂಗ್ರೆಸ್‌ ಬಾಂಗ್ಲಾದೇಶದ ಮಾರ್ಗದಲ್ಲಿ ಸರ್ಕಾರ ಬದಲಾವಣೆಗೆ ಬಯಸುತ್ತಿದೆ ಎಂದು ನೀವು ಆರೋಪಿಸುತ್ತೀರಿ. ಇಲ್ಲ, ಜನರು ಸರ್ಕಾರ ಬದಲಾವಣೆಯನ್ನು ಬಯಸುತ್ತಿದ್ದಾರೆ” ಎಂದು ಸಿಬಲ್‌ ಹೇಳಿದ್ದಾರೆ.

ಇದನ್ನೂ ಓದಿ : ತ್ರಿವರ್ಣ ಧ್ವಜ ಸಮಾವೇಶಕ್ಕೂ ಮುನ್ನ ಸಿಜೆಪಿ ಮುಖಂಡ ಅಭಿಜೀತ್ ದೀಪ್ಕೆ ವಶಕ್ಕೆ

‘ಭ್ರಷ್ಟಾಚಾರ ವಿರೋಧಿ ಚಳವಳಿಯಿಂದ ಅಧಿಕಾರಕ್ಕೆ ಬಂದಿರಿ’

2014ರಲ್ಲಿ ‘ಭಾರತ ಭ್ರಷ್ಟಾಚಾರದ ವಿರುದ್ಧ’ ಎಂಬ ಘೋಷಣೆಯಡಿ ನಡೆದ ಪ್ರತಿಭಟನೆಗಳು ಮತ್ತು ಚಳವಳಿಗಳು ಈಗಿನ ಆಡಳಿತಕ್ಕೆ ಅಧಿಕಾರ ತಂದುಕೊಟ್ಟಿದ್ದವು ಎಂಬುದನ್ನು ಸ್ಮರಿಸಿದ ಸಿಬಲ್‌, ಬಳಿಕ ಸರ್ಕಾರ ಭ್ರಷ್ಟಾಚಾರವನ್ನು ಅಪ್ಪಿಕೊಂಡಿದೆ, ಸಾಂವಿಧಾನಿಕ ಸಂಸ್ಥೆಗಳನ್ನು ತನ್ನ ಹಿಡಿತಕ್ಕೆ ತೆಗೆದುಕೊಂಡಿದೆ ಮತ್ತು ಮತದಾರರ ಪಟ್ಟಿಯನ್ನು ತಿರುಚಿದೆ ಎಂದು ಆರೋಪಿಸಿದ್ದಾರೆ.

“ಭ್ರಷ್ಟಾಚಾರ ವಿರೋಧಿ ಘೋಷಣೆಯೊಂದಿಗೆ ನಡೆದ ಪ್ರತಿಭಟನೆಗಳು ನಿಮಗೆ ಅಧಿಕಾರ ತಂದುಕೊಟ್ಟವು. ನಂತರ ನೀವು ಭ್ರಷ್ಟಾಚಾರವನ್ನು ಅಪ್ಪಿಕೊಂಡಿರಿ; ಸಂಸ್ಥೆಗಳನ್ನು ವಶಪಡಿಸಿಕೊಂಡಿರಿ; ಮತದಾರರ ಪಟ್ಟಿಯನ್ನು ತಿರುಚಿದಿರಿ. ಈಗ ಹೊರಡುವ ಸಮಯ” ಎಂದು ಅವರು ತಮ್ಮ ಪೋಸ್ಟ್‌ನಲ್ಲಿ ಟೀಕಿಸಿದ್ದಾರೆ.

ಎಸ್‌ಐಆರ್‌ ಪ್ರಕ್ರಿಯೆಯಲ್ಲಿನ ಅಕ್ರಮಗಳ ಆರೋಪ, ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್‌ ಕುಮಾರ್‌ ರಾಜೀನಾಮೆಗೆ ಆಗ್ರಹ ಮತ್ತು ಸರ್ಕಾರದ ವಿರುದ್ಧದ ಪ್ರತಿಭಟನೆಗಳು ಇದೀಗ ಆಡಳಿತಾರೂಢ ಬಿಜೆಪಿ ಹಾಗೂ ಪ್ರತಿಪಕ್ಷಗಳ ನಡುವೆ ರಾಜಕೀಯ ವಾಕ್ಸಮರಕ್ಕೆ ಕಾರಣವಾಗಿವೆ. ‘ಸರ್ಕಾರ 

ಇದನ್ನೂ ನೋಡಿ : ಎಸ್ಐಆರ್ ರದ್ದಿಗಾಗಿ, ಜ್ಞಾನೇಶ್ ಕುಮಾರ್ ವಜಾಕ್ಕೆ ಆಗ್ರಹಿಸಿ ತಿರಂಗಾ ರ‌್ಯಾಲಿ Janashakthi Media

Donate Janashakthi Media

Leave a Reply

Your email address will not be published. Required fields are marked *