ಬೆಂಗಳೂರು : ಕಳೆದ ವಾರದಿಂದ ಸುರಿಯುತ್ತಿರುವ ಮಳೆಯ ಅಂವಾತರದಿಂದಾಗಿ ಬೆಂಗಳೂರಿನ ಪ್ರತಿಷ್ಠಿತ ಆರ್ಆರ್ನಗರದಲ್ಲಿ ನದಿಯಂತೆ ನೀರು ಹರಿಯುತ್ತಿದ್ದು, ಜನರು ಬಲೆ ಹಾಕಿ ಮೀನು ಹಿಡಿಯುತ್ತಿದ್ದಾರೆ. ಮಳೆ ವ್ಯಾಪಕವಾಗಿ ಬಿದ್ದ ಕಾರಣ ರಸ್ತೆಯಲ್ಲಿ ದೊಡ್ಡಮಟ್ಟದ ನೀರು ಸಂಗ್ರಹಣೆ ಆಗಿದೆ. ಮೀನುಗಳು ತೇಲಿಬಂದಿದ್ದು , ಜನರು ಮೀನುಗಳನ್ನ ಹಿಡಿದು ಖುಷಿ ಪಟ್ಟಿದ್ದಾರೆ.
ಮತ್ತೊಂದೆಡೆ ಭಾರಿ ಮಳೆಯಿಂದಾಗಿ ಜಯನಗರದ 32 ಇ ಕ್ರಾಸ್ ನಲ್ಲಿ ಮರಬಿದ್ದಿದ್ದು, ಅರವಿಂದ ಜಂಕ್ಷನ್ ಕನೆಕ್ಟಿಂಗ್ ರಸ್ತೆ ಕಂಪ್ಲೀಟ್ ಕ್ಲೋಸ್ ಆಗಿದೆ. ವಸಂತ್ ನಗರ , ಮಿಲ್ಲರ್ ರಸ್ತೆ , ಮಡಿವಾಳ , ಗಂಗಾನಗರ , ರಾಮಕೃಷ್ಣನಗರ ಸೇರಿದಂತೆ ಬೆಂಗಳೂರಿನ ವಿವಿಧೆಡೆ ರಸ್ತೆಗಳು ಜಲಾವೃತವಾಗಿದೆ. ಟ್ರಾಫಿಕ್ ನಲ್ಲಿ ವಾಹನ ಸವಾರರು ಹೈರಾಣಾಗಿದ್ದಾರೆ.
ಇನ್ನು, ಕೆಂಗೇರಿ ಬಳಿ ಕಾಲುವೆ ಉಕ್ಕಿ ಹರಿದಿದೆ. ರಸ್ತೆಯಲ್ಲಿ ನೀರು ಹರಿಯುತ್ತಿದ್ದು , ವಾಹನ ಚಾಲನೆ ದೊಡ್ಡ ಸವಾಲಾಗಿದೆ. ಕೆಂಗೇರಿ ರೈಲು ನಿಲ್ದಾಣ ಸಂಪೂರ್ಣ ಜಲಮಯವಾಗಿದ್ದು, ಮಂಡಿಯುದ್ದ ನೀರು ನಿಂತಿದೆ.
ಇದನ್ನು ಓದಿ : ವರುಣನ ಆರ್ಭಟಕ್ಕೆ ಕೊಳೆತ ಈರುಳ್ಳಿ: ಕಂಗಾಲಾದ ಹಗರಿಬೊಮ್ಮನಹಳ್ಳಿ ರೈತರು
ಬೆಂಗಳೂರು ಮಾತ್ರವಲ್ಲದೆ , ಪ್ರಸಿದ್ಧ ಧಾರ್ಮಿಕ ಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯ ದಲ್ಲೂ ಭರ್ಜರಿ ಮಳೆಯಾಗಿದ್ದು, ಆದಿ ಸುಬ್ರಹ್ಮಣ್ಯ ದೇಗುಲದ ಸುತ್ತ ನೀರು ಆವರಿಸಿದೆ. ಭಕ್ತಾದಿಗಳಿಗೆ ತೀವ್ರ ಸಂಕಷ್ಟ ಎದುರಾಗಿದೆ. ಸುತ್ತಮುತ್ತಲಿನ ಪ್ರದೇಶದಲ್ಲಿ ನಿರಂತರವಾಗಿ ಮಳೆ ಸುರಿಯುತ್ತಿದ್ದು, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಜಲ ಕಂಟಕ ಎದುರಾಗಿದೆ.
ಗವಿ ಗಂಗಾಧರೇಶ್ವರ ದೇಗುಲದ ಬಳಿ ಪಾರ್ಕ್ ಗೋಡೆ ಕುಸಿದು ಟೆಂಪೋ ಟ್ರಾವೆಲರ್ ವಾಹನವೊಂದು ಸಿಲುಕಿದ್ದು ಅದನ್ನು ಹೊರತೆರೆಯಲು ಜನರು ಹರಸಾಹಸ ಪಡುತ್ತಿದ್ದಾರೆ.
ಮಿಕ್ಕಂತೆ, ಸರ್ಜಾಪುರ, ಸಿಲ್ಕ್ ಬೋರ್ಡ್, ಮಹದೇವಪುರ, ಜಕ್ಕೂರು, ಯಲಹಂಕ, ಬಿಟಿಎಂ ಲೇಔಟ್ ಮುಂತಾದ ಕಡೆಗಳಲ್ಲಿ ರಸ್ತೆಗಳಲ್ಲಿ ನೀರು ನಿಂತು ವಾಹನ ದಟ್ಟಣೆ ಹೆಚ್ಚಾಗಿದೆ.
ಬೆಂಗಳೂರು ರೊಡಲ್ಲಿ ಜನ ಮೀನ್ ಹಿಡಿತಾ ಇದಾರೆ🤣🤣 pic.twitter.com/nTUQOXTc34
— Pradeepa (@kunthurukumar) October 20, 2024
ಇದನ್ನು ನೋಡಿ : ಬೆಂಗಳೂರು ಮಳೆ: ಮಾನ್ಯತಾ ಟೆಕ್ ಪಾರ್ಕ್ ರಸ್ತೆ ಜಲಾವೃತ Janashakthi Media