ರೈತ ಹೋರಾಟ 3ನೇ ದಿನಕ್ಕೆ | 3ನೇ ಸುತ್ತಿನ ಮಾತುಕತೆ ನಡೆಸಲಿರುವ ಕೇಂದ್ರ ಸರ್ಕಾರ

ನವದೆಹಲಿ: ಪಂಜಾಬ್-ಹರಿಯಾಣ ಗಡಿಯಲ್ಲಿ ಪ್ರತಿಭಟನಾಕಾರರು ಮತ್ತು ಪೊಲೀಸರ ನಡುವಿನ ಮುಖಾಮುಖಿ ಮೂರನೇ ದಿನಕ್ಕೆ ಕಾಲಿಟ್ಟಿರುವ ಹಿನ್ನೆಲೆಯಲ್ಲಿ ಮೂವರು ಕೇಂದ್ರ ಸಚಿವರು ಚಂಡೀಗಢದಲ್ಲಿ ಗುರುವಾರ ಮತ್ತೊಂದು ಸುತ್ತಿನ ಮಾತುಕತೆಗಾಗಿ ರೈತ ಮುಖಂಡರನ್ನು ಸಂಜೆ 5 ಗಂಟೆಗೆ ಭೇಟಿಯಾಗಲಿದ್ದಾರೆ ಎಂದು ವರದಿಯಾಗಿದೆ.ಹೋರಾಟ

ಮಂಗಳವಾರ ಬೆಳಗ್ಗೆ ಪಂಜಾಬ್ ಮತ್ತು ಹರಿಯಾಣದ ರೈತರು ರಾಷ್ಟ್ರ ರಾಜಧಾನಿ ಕಡೆಗೆ ತಮ್ಮ ‘ದೆಹಲಿ ಚಲೋ’ ಮೆರವಣಿಗೆಯನ್ನು ಪ್ರಾರಂಭಿಸಿದಾಗಿನಿಂದ, ಭದ್ರತಾ ಸಿಬ್ಬಂದಿಯೊಂದಿಗೆ ಪದೇ ಪದೇ ಘರ್ಷಣೆಗಳು ನಡೆಯುತ್ತಿದ್ದು, ಎರಡೂ ಕಡೆಯ ಸದಸ್ಯರು ಗಾಯಗೊಂಡಿದ್ದಾರೆ.ಹೋರಾಟ

ಇದನ್ನೂ ಓದಿ:ನೇಜಾರು ಹತ್ಯಾಕಾಂಡ | ಆರೋಪಿ ವಿರುದ್ಧ 2,250 ಪುಟಗಳ ಚಾರ್ಜ್ ಶೀಟ್ ಸಲ್ಲಿಕೆ

ರೈತರು ತಮ್ಮ ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆ ನೀಡುವಂತೆ ಒತ್ತಾಯಿಸಿ ಪ್ರತಿಭಟನೆ ನಡೆಸುತ್ತಿದ್ದಾರೆ. ಸಂಯುಕ್ತ ಕಿಸಾನ್ ಮೋರ್ಚಾ (ರಾಜಕೀಯೇತರ) ಮತ್ತು ಕಿಸಾನ್ ಮಜ್ದೂರ್ ಮೋರ್ಚಾ ಪ್ರತಿಭಟನಾ ಮೆರವಣಿಗೆಯನ್ನು ಮುನ್ನಡೆಸುತ್ತಿವೆ. ಶಂಭು ಗಡಿಯಲ್ಲಿರುವ ರೈತರು ತಮ್ಮ ಟ್ರಾಕ್ಟರ್-ಟ್ರಾಲಿಗಳನ್ನು ರಸ್ತೆಯುದ್ದಕ್ಕೂ ಹಾಕಿಕೊಂಡು ತಮ್ಮ ಗಮ್ಯಸ್ಥಾನವಾದ ದೆಹಲಿಯಿಂದ ಇನ್ನೂ 200 ಕಿ.ಮೀ. ದೂರದಲ್ಲಿದ್ದಾರೆ.

ಬುಧವಾರ, ಅಂಬಾಲಾ ನಗರದ ಸಮೀಪವಿರುವ ಪಂಜಾಬ್-ಹರಿಯಾಣ ನಡುವಿನ ಶಂಭು ಗಡಿಯಲ್ಲಿ, ರೈತರ ಗುಂಪು ಬ್ಯಾರಿಕೇಡ್‌ಗಳ ಕೋಟೆಯ ಕಡೆಗೆ ಚಲಿಸಿದಾಗ ಭದ್ರತಾ ಸಿಬ್ಬಂದಿ ಹಲವಾರು ಅಶ್ರುವಾಯು ಶೆಲ್‌ಗಳನ್ನು ಹಾಕಲು ಡ್ರೋನ್ ಟಿಯರ್ ಸ್ಮೋಕ್ ಲಾಂಚರ್‌ಗಳನ್ನು ಬಳಸಿದ್ದಾರೆ. ಕೆಲವು ಪ್ರತಿಭಟನಾಕಾರರಿಂದ ಭದ್ರತಾ ಪಡೆಗಳು ಕಲ್ಲು ತೂರಾಟವನ್ನು ಎದುರಿಸಿವೆ. ಹರಿಯಾಣದ ಜಿಂದ್ ಜಿಲ್ಲೆಯ ಡಾಟಾ ಸಿಂಗ್‌ವಾಲಾ-ಖನೌರಿ ಗಡಿಯಲ್ಲಿ ಇದೇ ರೀತಿಯ ಬಿಕ್ಕಟ್ಟು ಮುಂದುವರೆದಿದೆ.

ಇದನ್ನೂ ಓದಿ: ಚುನಾವಣಾ ಬಾಂಡ್‌ಗಳು ರದ್ದು | ಯೋಜನೆ ಅಸಂವಿಧಾನಿಕ ಎಂದ ಸುಪ್ರೀಂಕೋರ್ಟ್ ಮಹತ್ವದ ತೀರ್ಪು

ಮಂಗಳವಾರ, ರೈತರು ತಮ್ಮ ಟ್ರ್ಯಾಕ್ಟರ್‌ಗಳೊಂದಿಗೆ ಶಂಭುವಿನಲ್ಲಿ ಸಿಮೆಂಟ್ ತಡೆಗೋಡೆಗಳನ್ನು ತೆರವುಗೊಳಿಸಲು ಪ್ರಯತ್ನಿಸಿದಾಗ ಭದ್ರತಾ ಸಿಬ್ಬಂದಿ ಅವರ ಮೇಲೆ ರಬ್ಬರ್ ಬುಲೆಟ್‌ಗಳು ಮತ್ತು ಅಶ್ರುವಾಯು ಶೆಲ್‌ಗಳ ಮೂಲಕ ದಾಳಿ ಮಾಡಿದ್ದಾದ್ದು, ಈ ವೇಳೆ ಕನಿಷ್ಠ 100 ಪ್ರತಿಭಟನಾಕಾರರು ಗಾಯಗೊಂಡಿದ್ದಾರೆ. ಪ್ರತಿಭಟನಾಕಾರರ ಕಲ್ಲು ತೂರಾಟದಲ್ಲಿ 24 ಮಂದಿ ಗಾಯಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

2020 ರ ರೈತ ಪ್ರತಿಭಟನೆಯ ವೇಳೆ ದೇಶದಾದ್ಯಂತ ವಿವಿಧ ರಾಜ್ಯಗಳ ರೈತರು, ಅದರಲ್ಲೂ ಮುಖ್ಯವಾಗಿ ಪಂಜಾಬ್, ಹರಿಯಾಣ ಮತ್ತು ಉತ್ತರ ಪ್ರದೇಶದ ರೈತರು ಸಿಂಘು, ಗಾಜಿಪುರ ಮತ್ತು ಟಿಕ್ರಿ ಗಡಿಗಳಲ್ಲಿ ಧರಣಿ ನಡೆಸಿದ್ದರು. ಈ ಐತಿಹಾಸಿಕ ಪ್ರತಿಭಟನೆಯು ಆಗಸ್ಟ್ 2020 ರಿಂದ ಡಿಸೆಂಬರ್ 2021 ರವರೆಗೆ ನಡೆದಿತ್ತು. ಕೊನೆಗೆ ಪ್ರಧಾನಿ ಮೋದಿ ರೈತ ವಿರೋಧಿ ಕಾನೂನನ್ನು ವಾಪಾಸು ಪಡೆದಿದ್ದರು

ವಿಡಿಯೊ ನೋಡಿ:ಯುವಜನತೆಯನ್ನು ಮತಾಂಧತೆಯ ಖೆಡ್ಡಾಗೆ ತಳ್ಳಿದ ಸಂಘ ಪರಿವಾರ… Janashakthi Media

Donate Janashakthi Media

Leave a Reply

Your email address will not be published. Required fields are marked *