ಪಠ್ಯಪುಸ್ತಕಗಳ ಕೇಸರಿಕರಣ ವಿರೋಧಿಸಿ ಮೇ 31 ರಂದು ರಾಜ್ಯ ಮಟ್ಟದ ಪ್ರತಿಭಟನೆ

  • ಪಠ್ಯಪುಸ್ತಕಗಳ ಕೇಸರಿಕರಣ ವಿರೋಧಿಸಿ ಮೇ 31ರಂದು ಪ್ರತಿಭಟನೆ ನಿರ್ಧಾರ
  • ಎಡ ಮತ್ತು ಪ್ರಗತಿಪರ ವಿದ್ಯಾರ್ಥಿ ಸಂಘಟನೆಗಳ ನೇತೃತ್ವದಲ್ಲಿ ಪ್ರತಿಭಟನೆಗೆ ನಿರ್ಧಾರ

ಬೆಂಗಳೂರು: ರಾಜ್ಯದಲ್ಲಿ ತೀವ್ರ ಚರ್ಚೆಗೆ ಒಳಪಟ್ಟಿರುವ ಪಠ್ಯಪುಸ್ತಕ ಕೇಸರಿಕರಣ ವಿವಾದ ಹಾಗು ಈ ಶೈಕ್ಷಣಿಕ ವರ್ಷದಿಂದ ಹತ್ತನೇ ತರಗತಿಯ ಕನ್ನಡ ಮತ್ತು ಸಮಾಜ ವಿಜ್ಞಾನ ಪಠ್ಯ ಪುಸ್ತಕದಿಂದ ಹಲವು ಪಠ್ಯಗಳನ್ನು ಕೈಬಿಟ್ಟಿರುವುದನ್ನು ಖಂಡಿಸಿ ಮೇ 31ರಂದು ರಾಜ್ಯ ಮಟ್ಟದಲ್ಲಿ ಪ್ರತಿಭಟನೆ ನಡೆಸಲು ಕರೆ ನೀಡಲಾಗಿದೆ.

ಭಾರತ ವಿದ್ಯಾರ್ಥಿ ಫೆಡರೇಷನ್ (ಎಸ್‌ಎಫ್‌ಐ) ನೇತೃತ್ವದಲ್ಲಿ ಬೆಂಗಳೂರಿನ ಕೆ.ಆರ್. ಸರ್ಕಲ್‌ ಹತ್ತಿರ ಅಲುಮ್ಮಿನಿಯಂ ಹಾಲ್ ನಲ್ಲಿ ವಿವಿಧ ವಿದ್ಯಾರ್ಥಿ ಸಂಘಟನೆಗಳಾದ ಎನ್‌ಎಸ್‌ಯುಐ, ಎಐಎಸ್‌ಎಫ್‌, ಕೆವಿಎಸ್‌, ಐಸ್, ಮಾನವ ಬಂಧುತ್ವ ವೇದಿಕೆ, ಜನವಾದಿ ಮಹಿಳಾ ಸಂಘಟನೆ, ವಕೀಲರ ಸಂಘ, ದಲಿತ ಸಂಘಟನೆಗಳು  ಶಿಕ್ಷಣ ತಜ್ಞರು ಹಾಗೂ ಹಿರಿಯ ಸಾಹಿತಿಗಳು ಎಲ್ಲಾರು ಸೇರಿ ಪರಿಷ್ಕರಣೆಯ ವಿವಿಧ ವಿಧಗಳನ್ನು ವಿಮರ್ಶೆ ಮಾಡಿ ಚರ್ಚಿಸಿದರು.

ಪಠ್ಯ ಪುಸ್ತಕದಲ್ಲಿ ಸ್ವಾತಂತ್ರ ಹೋರಾಟಗಾರ ದೇಶದಲ್ಲಿ ಅತಿ ಚಿಕ್ಕ ವಯಸ್ಸಿನಲ್ಲಿ ದೇಶಕ್ಕಾಗಿ ಪ್ರಾಣತ್ಯಾಗ ಮಾಡಿದ ಭಗತ್ ಸಿಂಗ್, ಸಮಾಜ ಸುಧಾರಕರಾದ ನಾರಾಯಣ ಗುರು, ಪೆರಿಯಾರ್ ಇವರುಗಳನ್ನು ಪಠ್ಯದಿಂದ ಕೈಬಿಟ್ಟು ಇದನ್ನುದನ್ನು ಒಕ್ಕೊರಲಿನಿಂದ ಖಂಡಿಸಿದರು.

ಅದೇ ರೀತಿ, ಹೆಡ್ಗೆವಾರ್ ಮತ್ತು ಮಹಿಳೆಯರಿಗೆ ಅವಮಾನ-ಅಪಮಾನ ಮಾಡುವ ರೀತಿಯಲ್ಲಿರುವ ಬನ್ನಂಜೆ ಗೋವಿಂದಾಚಾರ್ಯ ಅವರ ಪಾಠವನ್ನು ಕೈಬಿಡಲು ಆಗ್ರಹಿಸಲಾಯಿತು.

ಪಠ್ಯಪುಸ್ತಕ ಪರಿಷ್ಕರಣಯಲ್ಲಿ ಕೆಲವು ಪಾಠಗಳನ್ನು ಕೈ ಬಿಟ್ಟಿರವುದನ್ನು ಖಂಡಿಸಿದರು ಮತ್ತು  ರೋಹಿತ್ ಚಕ್ರತೀರ್ಥ ಅಧ್ಯಕ್ಷತೆಯ ಮರು ಪರಿಷ್ಕರಣಾ ಸಮಿತಿ ರದ್ದು ಮಾಡಲು ಆಗ್ರಹಿಸಿದರು. ಮೇ 31ರಂದು ಬೆಂಗಳೂರಿನ ಸ್ವಾತಂತ್ರ್ಯ ಉದ್ಯಾನವನದಲ್ಲಿಯೂ ಪ್ರತಿಭಟನೆ ಮಾಡಲು ತೀರ್ಮಾನ ಮಾಡಲಾಯಿತು.

ರಾಜ್ಯ ಮಟ್ಟದ ಸಮಾಲೋಚನಾ ಸಭೆಯ ನಿರ್ಣಯಗಳು

  • ಪಠ್ಯ ಪುಸ್ತಕ ಪುನರ್ ಪರಿಷ್ಕರಣ ಸಮಿತಿ ಅಧ್ಯಕ್ಷ  ರೋಹಿತ್ ಚಕ್ರತಿರ್ಥ ಸಮಿತಿ ರಚಿಸಿರುವ ಪಠ್ಯ ಪುಸ್ತಕಗಳನ್ನು ಹಂಚದೆ ಸರ್ಕಾರ ತಡೆ ಹಿಡಿಯಬೇಕು ಹಾಗೂ ಈ ಮೊದಲಿದ್ದ ಪಠ್ಯ ಪುಸ್ತಕಗಳನ್ನೇ ಈ ಶೈಕ್ಷಣಿಕ ವರ್ಷಕ್ಕೆ ಮುಂದುವರಿಸಬೇಕು.
  • ರಾಷ್ಟ್ರಕವಿ ಕುವೆಂಪುರನ್ನು ಅವಮಾನಿಸಿರುವ ರೋಹಿತ್ ಚಕ್ರತೀರ್ಥ ಅಧ್ಯಕ್ಷತೆಯ ಪಠ್ಯ ಪುಸ್ತಕ ಪುನರ್ ಪರಿಷ್ಕರಣ ಸಮಿತಿಯನ್ನು ಸರ್ಕಾರ ಕೂಡಲೇ ವಿಸರ್ಜನೆ ಮಾಡಬೇಕು.
  • ಶಿಕ್ಷಣ ಇಲಾಖೆಯನ್ನು ಕೋಮುವಾದೀಕರಣಗೊಳಿಸಿ ವಿವಾದ ಸೃಷ್ಟಿಸುತ್ತಿರುವ ಸಚಿವ ಬಿ.ಸಿ.ನಾಗೇಶ್ ರಾಜೀನಾಮೆ ನೀಡಬೇಕು.
  • ಶಿಕ್ಷಣದ ಕೋಮುವಾದೀಕರಣ ನೀತಿಗಳನ್ನು ಸರ್ಕಾರ ನಿಲ್ಲಿಸಬೇಕೆಂದು ಆಗ್ರಹಿಸಿ ಮೇ 31 ರಂದು ಬೆಂಗಳೂರಿನಲ್ಲಿ ಬೃಹತ್ ಪ್ರತಿಭಟನೆ ನಡೆಸಲು ತೀರ್ಮಾನ.
  • ಮೇ 25ರಂದು ನಾಡಿನ ಸಾಹಿತಿಗಳು, ಚಿಂತಕರು ಎಲ್ಲರನ್ನೂ ಒಳಗೊಂಡ ದುಂಡು ಮೇಜಿನ ಸಭೆ ಗಾಂಧಿಭವನದಲ್ಲಿ ನಡೆಸಲು ತೀರ್ಮಾನ.
  • ಮೇ 31ರ ಬೃಹತ್ ಹೋರಾಟದಲ್ಲಿ ಅಣಿನೆರೆಸಲು ತೀರ್ಮಾನ.
  • ಶಿಕ್ಷಣದ ಕೇಸರೀಕರಣ ವಿರೋಧಿಸಿ ಹಲವು ವಿಚಾರವಾದಿಗಳ ಲೇಖನಗಳನ್ನು ಒಳಗೊಂಡ ಒಂದು ಲಕ್ಷ ಕಿರುಹೊತ್ತಿಗೆ ಪುಸ್ತಕ ಪ್ರಕಟಿಸಿ ರಾಜ್ಯಾದ್ಯಂತ ವಿಧ್ಯಾರ್ಥಿ ಯುವಜನರ ನಡುವೆ ಜಾಗೃತಿ ಮೂಡಿಸಲು ಪ್ರಚಾರಾಂದೋಲನ.

ಈ ಸಂದರ್ಭದಲ್ಲಿ ಕಾರ್ಯಕ್ರಮದಲ್ಲಿ ಶಿಕ್ಷಣ ತಜ್ಞರು ಹಾಗೂ ಸಾಹಿತಿಗಳು ಸೇರಿದಂತೆ ಹಲವರು ಭಾಗವಹಿಸಿದ್ದರು. ಸಾಹಿತಿಗಳಾದ ಎಸ್‌.ಜಿ. ಸಿದ್ದರಾಮಯ್ಯ, ಡಾ. ಕೆ. ಷರಿಫಾ, ಡಿಎಸ್‌ಎಸ್‌ ಅಂಬೇಡ್ಕರ್‌ವಾದ ಸಂಘಟನೆಯ ಮಾವಳ್ಳಿ ಶಂಕರ್, ದಲಿತ ಹಕ್ಕುಗಳ ಸಮಿತಿಯ  ಬಿ. ರಾಜಶೇಖರ ಮೂರ್ತಿ, ಶಿಕ್ಷಣ ತಜ್ಞ ಶ್ರೀಪಾದ ಭಟ್, ಎಸ್‌ಎಫ್‌ಐ ರಾಜ್ಯ ಅಧ್ಯಕ್ಷ ಅಮರೇಶ ಕಡಗದ, ರಾಜ್ಯ ಕಾರ್ಯದರ್ಶಿ ವಾಸುದೇವ ರೆಡ್ಡಿ, ಎನ್‌ಎಸ್‌ಯುಐನ ಲಕ್ಷಯ, ಐಸ್ಸಾದ ಕಿಸಾನ್, ಕೆವಿಎಸ್‌ ನ ಸರೋವರ ಬೆಂಕಿಕರೆ, ಮಾನವ ಬಂಧುತ್ವ ವೇದಿಕೆಯ ತೊಳಿ ಭರಮಣ್ಣ, ಜನವಾದಿ ಮಹಿಳಾ ಸಂಘಟನೆಯ ಗೌರಮ್ಮ ಹಾಗೂ  ವಿದ್ಯಾರ್ಥಿ ಮುಖಂಡರಾದ ದಿಲೀಪ್ ಶೆಟ್ಟಿ, ಗಾಯತ್ರಿ, ವಿಜಯಕುಮಾರಿ, ಸಾಗರ, ಅಭಿ, ಎಸ್‌ಡಿಎಂಸಿ ಸಮಿತಿಯ ರಾಜ್ಯ ಮುಖಂಡರು ಮತ್ತು ವಿದ್ಯಾರ್ಥಿ ಪೋಷಕ ಸಂಘಟನೆಯ ರಾಜ್ಯ ಮುಖಂಡರು ಇತರರು ಇದ್ದರು.

Donate Janashakthi Media

Leave a Reply

Your email address will not be published. Required fields are marked *