ಬೆಂಗಳೂರು: ರೋಹಿತ್ ಚಕ್ರತೀರ್ಥ ಅವರ ಅಧ್ಯಕ್ಷತೆಯಲ್ಲಿ ನಡೆದ ಪಠ್ಯಪರಿಷ್ಕರಣೆ ವಿವಾದವು ರಾಜ್ಯದಲ್ಲಿ ಭುಗಿಲೆದ್ದಿದ್ದು, ಇಂಟರ್ ನ್ಯಾಷನಲ್ ಬಸವ ಮ್ಯೂಸಿಯಂ ಎಕ್ಸ್ ಪರ್ಟ್ ಸಮಿತಿಯ 7 ಜನ ಲೇಖಕರು ಬುಧವಾರ ರಾಜೀನಾಮೆ ನೀಡಿದ್ದಾರೆ.
ಪರಿಷ್ಕೃತ ಪಠ್ಯದಲ್ಲಿ ಇತಿಹಾಸವನ್ನು ತಿರುಚಲಾಗಿದ್ದು, ಬಸವಣ್ಣವನರ ಬಗ್ಗೆ ಪುಸ್ತಕದಲ್ಲಿ ಅವಹೇಳನಕಾರಿ ಸಂದೇಶ ಇದೆ. ಬಸವ ತತ್ವಕ್ಕೆ ವಿರುದ್ಧವಾಗಿ ರಾಜ್ಯ ಸರಕಾರವು ಅದನ್ನು ಪ್ರಕಟಿಸುತ್ತಿದೆ ಎಂದು ರಾಜೀನಾಮೆ ಸಲ್ಲಿಸಿದ್ದಾರೆ.
ಸಮಿತಿಯಲ್ಲಿದ್ದ ನಿವೃತ್ತ ಐಎಎಸ್ ಅಧಿಕಾರಿ ಎಸ್.ಎಂ. ಜಾಮದಾರ್, ಸಾಹಿತಿ ಡಾ. ಗುರುಪಾದ ಮರೀಗುದ್ದಿ, ಡಾ. ಹನುಮಾಕ್ಷಿ ಗೋಗಿ, ಡಾ, ಬಸವರಾಜ ಸಬರದ, ಡಾ.ರಂಜಾನ್ ದರ್ಗಾ, ಶಂಕರ್ ದೇವನೂರು ಹಾಗೂ ಡಾ.ಟಿ.ಆರ್. ಚಂದ್ರಶೇಖರ್ ರಾಜೀನಾಮೆ ಸಲ್ಲಿಸಿ, ಪಠ್ಯಪರಿಷ್ಕರಣೆ ಸಮಿತಿಯ ಬಗ್ಗೆ ಆಕ್ರೋಶ ಹೊರ ಹಾಕಿದ್ದಾರೆ.