ಬೆಂಗಳೂರು: ನಿನ್ನೆ ಸಂಜೆ 4:15ಕ್ಕೆ ಬಿಎಂಟಿಸಿ ಕಂಡಕ್ಟರ್, ಡ್ರೈವರ್ ಗೆ ಸ್ಕ್ರೂಡ್ರೈವರ್ ತೋರಿಸಿ ಪ್ರಯಾಣಿಕ ಬೆದರಿಕೆ ಹಾಕಿದ ಘಟನೆ ಅತ್ತಿಬೆಲೆ ಟು ಮೆಜಸ್ಟಿಕ್ ಹೋಗುತ್ತಿದ್ದ ವೋಲ್ವೋ ಬಸ್ ನಲ್ಲಿ ನಡೆದಿದೆ. ಬಿಎಂಟಿಸಿ ಬಸ್ ಕಂಡಕ್ಟರ್ ಮೇಲೆ ಚಾಕುವಿನಿಂದ ಹಲ್ಲೆ ನಡೆಸಿದ ಪ್ರಕರಣ ಮಾಸುವ ಮುನ್ನವೇ ಮತ್ತೊಂದು ಘಟನೆ ವರದಿಯಾಗಿದೆ.
ಹೊಸ ರೋಡ್ ಬಸ್ ಸ್ಟಾಪ್ ಬಳಿ ಇಳಿದು ಬ್ಯಾಗ್ ನಿಂದ ಸ್ಕ್ರೂಡ್ರೈವರ್ ತೋರಿಸಿ ಬೆದರಿಕೆ ಹಾಕಿರುವ ಘಟನೆ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.
ಹೊಸ ರೋಡ್ ಬಸ್ ಸ್ಟ್ಯಾಂಡ್ ನಲ್ಲಿ ಇಳಿದು ತನ್ನ ಬ್ಯಾಗ್ ನಲ್ಲಿದ್ದ ಸ್ಕ್ರೂಡ್ರೈವರ್ ತೋರಿಸಿದ ಪ್ರಯಾಣಿಕ, ಚುಚ್ಚಿ ಬಿಡ್ತಿನಿ ಎಂದು ಬೆದರಿಕೆ ಹಾಕಿದ್ದಾನೆ. ಕೊನಪ್ಪನ ಅಗ್ರಹಾರದಲ್ಲಿ ರೂಟ್ ನಂಬರ್ 360/5 KA-57 F 9002 ಬಸ್ ಹತ್ತಿದ್ದ ಪ್ರಯಾಣಿಕ ಬೆದರಿಕೆ ಹಾಕಿದ್ದಾನೆ.
ಇದನ್ನೂ ಓದಿ: ಗೋಕಾಕ್ ಚಳವಳಿಯ 42ರ ಸಂಸ್ಮರಣಾ ಕಾಯಕ್ರಮ – ಡಾ. ಪುರುಷೋತ್ತಮ ಬಿಳಿಮಲೆ
ಕಂಡಕ್ಟರ್ ಬಸ್ ನಲ್ಲಿದ್ದ ಎಲ್ಲಾ ಪ್ರಯಾಣಿಕರಿಗೆ ಹಿಂದಿನ ಸ್ಟಾಪ್ ನಲ್ಲಿ ಟಿಕೆಟ್ ನೀಡಬೇಕಿದ್ದ ಕಾರಣ ಬಸ್ ನಿಲ್ಲಿಸಿ ಎಲ್ಲಾ ಪ್ರಯಾಣಿಕರಿಗೆ ಟಿಕೆಟ್ ನೀಡಲು ಕಂಡಕ್ಟರ್ ಮುಂದಾಗಿದ್ದನಂತೆ. ಇದರಿಂದ ಆಕ್ರೋಶಗೊಂಡ ಪ್ರಯಾಣಿಕ ಸ್ಕ್ರೂಡ್ರೈವರ್ ತೋರಿಸಿ ನಿಮ್ಮಬ್ಬರಿಗೂ ಚುಚ್ಚಿತ್ತಿನಿ ಎಂದು ಅವಾಜ್ ಹಾಕಿದ್ದ ಎನ್ನಲಾಗಿದೆ.
ಗನ್ ಲೈಸನ್ಸ್ಗೆ ಅನುಮತಿ ಕೊಡುವಂತೆ ಪತ್ರ
ಇನ್ನು ಬಿಎಂಟಿಸಿ ಸಿಬ್ಬಂದಿ ಮೇಲೆ ನಡೆಯುತ್ತಿರುವ ಹಲ್ಲೆಗಳಿಂದ ಆತಂಕಕ್ಕೆ ಒಳಗಾಗಿರುವ ಸಿಬ್ಬಂದಿ, ಗನ್ ಲೈಸೆನ್ಸ್ ಗೆ ಅನುಮತಿ ನೀಡುವಂತೆ ಬಿಎಂಟಿಸಿ ಎಂಡಿಗೆ ಪತ್ರ ಬರೆದಿದ್ದಾರೆ. ಜೀವದ ಹಂಗು ತೊರೆದು ಕೆಲಸ ಮಾಡುವ ಚಾಲಕ ನಿರ್ವಾಹಕರಿಗೆ ರಕ್ಷಣೆ ಬೇಕಿದೆ, ಹೀಗಾಗಿ ಗನ್ ಲೈಸೆನ್ಸ್ ಪಡೆಯಲು ಅನುಮತಿ ನೀಡಿ ಎಂದು ಎಂಡಿಗೆ ಬಿಎಂಟಿಸಿ ಸಿಬ್ಬಂದಿ ಪತ್ರ ಬರೆದಿದ್ದಾರೆ.
ಪ್ರತಿ ದಿನ 24 ಗಂಟೆ ತಮ್ಮ ಜೀವದ ಹಂಗು ತೊರೆದು ಕೆಲಸ ಮಾಡ್ತಿದ್ದೇವೆ, ನಗರದ ಭಾರೀ ವಾಹನ ದಟ್ಟಣೆ ಹಾಗೂ ಕಲುಷಿತ ಮಾಲಿನ್ಯದ ನಡುವೆ ಕರ್ತವ್ಯ ಮಾಡ್ತಿದ್ದೇವೆ. ಹೀಗಾಗಿ ಮಾನಸಿಕವಾಗಿ ಚಾಲಕ ಮತ್ತು ನಿರ್ವಾಹಕರು ಕುಗ್ಗಿ ಹೋಗ್ತಿದ್ದಾರೆ. ಈ ನಡುವೆ ಪ್ರಯಾಣಿಕರು ಹಾಗೂ ಡ್ರೈವರ್ ಕಂಡಕ್ಟರ್ ಗಳ ಮಧ್ಯೆ ಜಗಳ ಹೆಚ್ಚಾಗ್ತಿದೆ. ಸಂಸ್ಥೆಯ ಕನ್ನಡಿಗರ ನೌಕರರ ಮೇಲೆ ಅನ್ಯ ರಾಜ್ಯದ ಪ್ರಯಾಣಿಕರಿಂದ ಮಾರಣಾಂತಿಕ ಹಲ್ಲೆಯಾಗ್ತಿದೆ. ಹೀಗಾಗಿ ಜೀವ ರಕ್ಷಣೆಗಾಗಿ ಗನ್ ಲೈಸನ್ಸ್ ಪಡೆಯಲು ಅನುಮತಿ ಕೊಡುವಂತೆ ಬಿಎಂಟಿಸಿ ಎಂಡಿ ರಾಮಚಂದ್ರಗೆ ಸಂಸ್ಥೆ ಸಿಬ್ಬಂದಿ ಪತ್ರ ಬರೆದಿದ್ದಾರೆ.
ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಹೇಳಿಕೆ!
ಕಂಡಕ್ಟರ್ ಗೆ ಚಾಕು ಇರಿತ, ಲೈಸೆನ್ಸ್ ಗನ್ ಗಾಗಿ ಬಿಎಂಟಿಸಿ ಸಿಬ್ಬಂದಿಯಿಂದ ಪತ್ರದ ವಿಚಾರವಾಗಿ ಪ್ರತಿಕ್ರಿಯೆ ನೀಡಿರುವ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ, ಲೈಸೆನ್ಸ್ ಗನ್ ಕೊಡೋ ಅಗತ್ಯವಿಲ್ಲವೆಂದು ಪರೋಕ್ಷವಾಗಿ ಹೇಳಿದ್ದಾರೆ. ಬಿಎಂಟಿಸಿಯಲ್ಲಿ ಪ್ರತಿ ದಿನ ಸುಮಾರು 60 ಸಾವಿರ ಟ್ರಿಪ್ ಇರುತ್ತೆ, ಬಿಎಂಟಿಸಿ ಸಂಸ್ಥೆಗೆ 30 ವರ್ಷ ಆಗಿದೆ. 30 ವರ್ಷದ ಇತಿಹಾಸದಲ್ಲಿಯೇ ಈ ರೀತಿಯ ಪ್ರಕರಣ ನಡೆದಿಲ್ಲ. ಮ್ಯಾನೇಜರ್ ಮೇಲೆ ಹಲ್ಲೆ ಮಾಡೋಕೋದವನು ಕಂಡಕ್ಟರ್ ಗೆ ಚಾಕು ಹಾಕಿದ್ದಾನೆ, ಆರೋಪಿ ಜೈಲಿಗೆ ಹೋಗಿದ್ದಾನೆ. ನ್ಯಾಯಾಲಯ ಆತನಿಗೆ ಶಿಕ್ಷೆ ಕೊಡುತ್ತೆ, ಕಂಡಕ್ಟರ್ ನ ಎಲ್ಲಾ ಖರ್ಚು-ವೆಚ್ಚಗಳನ್ನ ಬಿಎಂಟಿಸಿ ನೋಡಿಕೊಳ್ಳುತ್ತೆ ಎಂದು ಹೇಳಿದ್ದಾರೆ.
ಇದನ್ನೂ ನೋಡಿ: ಸೌಹಾರ್ದ ಕರ್ನಾಟಕ | ಶ್ರೇಣಿಕೃತ ಸಮಾಜದ ಆಯಾಮಗಳು – ಜಿ.ಎನ್. ನಾಗರಾಜJanashakthi Media