ಪಶು ವೈದ್ಯಕೀಯ ಮಹಾವಿದ್ಯಾಲಯದಲ್ಲಿ ಸಚಿವರಿಗೆ ವಿದ್ಯಾರ್ಥಿಗಳು ಮತ್ತು ಶಿಕ್ಷಕರು ಮನವಿ 

ಗದಗ : ನ 20 : ಮಹಾವಿದ್ಯಾಲಯದಲ್ಲಿ ಶಿಕ್ಷಕರ ಮತ್ತು ಲ್ಯಾಬ್ ಗಳ ಕೊರತೆಯಿದ್ದು ಶೈಕ್ಷಣಿಕ ಏಳ್ಗೆಯಿಂದ ಹಿನ್ನಡೆಯಾಗುತ್ತಿದೆ ಆದಷ್ಟು ಬೇಗ ಗದಗ ಪಶು ವೈದ್ಯಕೀಯ ಮಹಾವಿದ್ಯಾಲಯಕ್ಕೆ ಕೆಲವು ಮೂಲ ಸೌಕರ್ಯವನ್ನು ಒದಗಿಸಲು ಪಶುಸಂಗೋಪನೆ, ವಕ್ಫ್ ಹಾಗೂ ಹಜ್ ಸಚಿವರಾದ ಪ್ರಭು ಚವ್ಹಾಣ ಅವರಿಗೆ ಮಹಾವಿದ್ಯಾಲಯದ ಡೀನ್ ಡಾ. ಆರ್. ನಾಗರಾಜ್ ಮನವಿ ಮಾಡಿಕೊಂಡರು.

ಸರ್ಕಾರದ ಮಟ್ಟದಲ್ಲಿ ಇಲಾಖೆಯ ಮಟ್ಟದಲ್ಲಿ ಬೇಕಾದ ಎಲ್ಲ ಸೌಲಭ್ಯಗಳನ್ನು ಕಲ್ಪಿಸಿಕೊಳ್ಳುವುದಾಗಿ  ಸಚಿವರು ಭರವಸೆ ನೀಡಿದರು. ಪಶು ವೈಧ್ಯಕೀಯ ಮಹಾವಿದ್ಯಾಲಯವು ಉತ್ತಮ ಶಿಕ್ಷಣ ನೀಡುವುದರೊಂದಿಗೆ ಮಹಾವಿದ್ಯಾಲಯದಲ್ಲಿ ತರಬೇತಿ ಪಡೆದ ಎಲ್ಲರೂ ಉತ್ತಮ ಸಮಾಜ ಕಾರ್ಯ ಮಾಡುವಂತಾಗಲಿ ಈ ನಿಟ್ಟಿನಲ್ಲಿ ಮಹಾವಿದ್ಯಾಲಯ ಕರ್ತವ್ಯ ನಿರ್ವಹಿಸಬೇಕು ಎಂದು ತಿಳಿಸಿದರು.

ಪಶು ವೈದ್ಯಕೀಯ ಮಹಾವಿದ್ಯಾಲಯದ ಕಟ್ಟಡ ನಿರ್ಮಾಣದ ಗುಣಮಟ್ಟ ಕಂಡು ಬೇಸರ ವ್ಯಕ್ತಪಡಿಸಿದ ಸಚಿವ ಪ್ರಭು ಚವ್ಹಾಣ್, ಉತ್ತಮ ರೀತಿಯಲ್ಲಿ ಕಟ್ಟಡ ನಿರ್ವಹಣೆ ಅಗತ್ಯವಾಗಿದೆ. ಮಹಾವಿದ್ಯಾಲಯದ ಆಡಳಿತ ಉತ್ತಮ ನಿರ್ವಹಣೆ ಮಾಡುವಲ್ಲಿ ಗಮನ ಹರಿಸುವಂತೆ ತಿಳಿಸಿದರು.

ಅಂದಾಜು 150 ಏಕರೆ ಪ್ರದೇಶದಲ್ಲಿ ವ್ಯಾಪಿಸಿರುವ ಮಹಾವಿದ್ಯಾಲಯ ಸುವ್ಯವಸ್ಥಿತವಾದ ಪಶು ಚಿಕಿತ್ಸಾ ಸಂಕೀರ್ಣವನ್ನು ಹೊಂದಿದೆ ಎಂದು ತಿಳಿಸಿ ಮಹಾವಿದ್ಯಾಲಯದ ಕೆಲವು ವಿಭಾಗಗಳಿಗೆ ಬೇಟಿ ನೀಡಿ, ಆವರಣದಲ್ಲಿ ಗಿಡ ನೆಡುವ ಮೂಲಕ ಮಹಾವಿದ್ಯಾಲಯದ ಕಾರ್ಯಗಳಿಗೆ ಶುಭ ಹಾರೈಸಿದರು.

ಇದಕ್ಕು ಮುನ್ನ ಸಚಿವರು ಗದಗನಲ್ಲಿನ ಪಶುಸಂಗೋಪನೆ ಉಪನಿರ್ದೇಶಕರ ಕಚೇರಿಗೆ ಹಾಗೂ ಪಾಲಿಕ್ಲಿನಿಕ್‌ಗೆ ಭೇಟಿ ನೀಡಿ ಹಾಜರಾತಿ, ಔಷಧಗಳ ಸ್ಟಾಕ್ ಹಾಗೂ ಇತರೆ ದಾಖಲಾತಿಗಳ ಪರಿಶೀಲನೆ ನಡೆಸಿದರು ಎಂದು ಮಹಾವಿದ್ಯಾಲಯದ ಡೀನ್ ಡಾ. ಆರ್. ನಾಗರಾಜ್ ತಿಳಿಸಿದರು.

Donate Janashakthi Media

Leave a Reply

Your email address will not be published. Required fields are marked *