ದೆಹಲಿ : ರೈತರ ಆಂದೋಲನಕ್ಕೆ ಸಂಬಂಧಿಸಿದ ಟೂಲ್ ಕಿಟ್ ಪ್ರಕರಣದ ತನಿಖೆಗಾಗಿ ಮಂಗಳವಾರ ದೆಹಲಿ ಪೊಲೀಸ್ ಸೈಬರ್ ಸೆಲ್ ಕಚೇರಿಗೆ ಕರೆದೊಯ್ಯಲಾಗಿದ್ದ ಪರಿಸರ ಕಾರ್ಯಕರ್ತೆ ದಿಶಾ ರವಿಗೆ ದೆಹಲಿ ನ್ಯಾಯಾಲಯ ಜಾಮೀನು ಮಂಜೂರು ಮಾಡಿದೆ.
ಕೃಷಿ ಕಾಯ್ದೆ ವಿರೋಧೀಸಿ ರೈತರ ನಡೆಸುತ್ತಿರುವ ಪ್ರತಿಭಟನೆಗೆ ಸಂಬಂಧಿಸಿದ ಟೂಲ್‌ಕಿಟ್ ನ್ನು ಸಿದ್ದಪಡಿಸಿ ಪ್ರತಿಭಟನೆಗೆ ಯಾವ ರೀತಿ ಬೆಂಬಲ ನೀಡಬೇಕು ಎಂಬ ವಿವರಿಸುವ ಟೂಲ್ ಕಿಟ್ ನ್ನು ಅಂತರಾಷ್ಟ್ರೀಯ ಪರಿಸರ ಹೋರಾಟಗಾರ್ತಿ ಗ್ರೇಟಾ ಥನ್ಬರ್ಗ್ ಅವರಿಗೆ ಕಳುಹಿಸಿದ ಆರೋಪದಡಿ ದಿಶಾ ಅವರನ್ನು ಬಂಧಿಸಲಾಗಿತ್ತು.
ಇದನ್ನು ಓದಿ : ಗ್ರೇಟಾ ‘ಟೂಲ್ ಕಿಟ್’ವಿವಾದ: ದೆಹಲಿ ಪೋಲೀಸರಿಂದ ಬೆಂಗಳೂರಿನ ಯುವತಿಯ ಬಂಧನ
ರೈತರ ಪ್ರತಿಭಟನೆಗೆ ಸಂಬಂಧಿಸಿದ ಟೂಲ್‌ಕಿಟ್‌ಗೆ ಪ್ರಕರಣಕ್ಕೆ ಸಂಬಂಧಿಸಿದಂತೆ ದೇಶದ್ರೋಹ ಮತ್ತು ಇತರ ಆರೋಪಗಳಿಗೆ ಸಂಬಂಧಿಸಿದಂತೆ ಪ್ರಕರಣ ದಾಖಲಾಗಿರುವ ಮೂವರು ಆರೋಪಿಗಳ ಪೈಕಿ ಹವಾಮಾನ ಕಾರ್ಯಕರ್ತೆ ದಿಶಾ ರವಿ ಅವರಿಗೆ ದೆಹಲಿಯ ಸೆಷನ್ಸ್ ನ್ಯಾಯಾಲಯ ಮಂಗಳವಾರ ಷರತ್ತು ಬದ್ಧ ಜಾಮೀನು ಮಂಜೂರು ಮಾಡಿದ್ದು, 1 ಲಕ್ಷ ರೂ. ಬಾಂಡ್ ಹಾಗೂ ಇಬ್ಬರ ಷ್ಯೂರಿಟಿ ನೀಡುವಂತೆ ಸೂಚಿಸಿ, ಜಾಮೀನು ನೀಡಿದೆ.
ಇದನ್ನು ಓದಿ : ಗ್ರೇಟಾ ಹಂಚಿಕೊಂಡಿದ್ದ ಟೂಲ್ ಕಿಟ್ ನಲ್ಲಿ ಏನಿದೆ?
ದಿಶಾ ರವಿ ಬಂಧನ ಖಂಡಿಸಿ ಬೆಂಗಳೂರಿನ ಸೇರಿದಂತೆ ದೇಶವ್ಯಾಪಿ ಪ್ರತಿಭಟನೆ ನಡೆಸಲಾಗಿತ್ತು, ವಿಪಕ್ಷಗಳು ಕೇಂದ್ರ ಸರಕಾರದ ಕ್ರಮವನ್ನು ವಿರೋಧಿಸಿದ್ದವು, ಅಬಿವ್ಯಕ್ತಿ ಸ್ವಾತಂತ್ರ್ಯದ ಮೇಲಿನ ಹರಣ ಎಂದು ಆರೋಪಿಸಿದ್ದರು.