ಪರಿಸರ ಜಾಗೃತಿ ದಿನ; ಜೂನ್ 03ರಂದು ರಾಜ್ಯಮಟ್ಟದ ಸೈಕಲ್ ಜಾಥಾ

ಬೆಂಗಳೂರು: ವಿಶ್ವ ಸೈಕಲ್‌ ದಿನಾಚರಣೆ ಮತ್ತು ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವ ಅಂಗವಾಗಿ ನಾಳೆ(ಜೂನ್‌ 3) ರಾಜ್ಯದಲ್ಲಿ ಸೈಕಲ್‌ ರ‍್ಯಾಲಿ ಆಯೋಜಿಸಲಾಗಿದೆ ಎಂದು ಯುವ ಸಬಲೀಕರಣ ಮತ್ತು ಕ್ರೀಡಾ ಸಚಿವ ನಾರಾಯಣ ಗೌಡ ಹೇಳಿದರು.

ಸೈಕಲ್‌ ಜಾಥಾಕ್ಕೆ ವಿಧಾನಸೌಧದ ಮುಂಭಾಗ ಸಚಿವರಾದ ಡಾ.ಸಿ.ಎನ್‌.ಅಶ್ವತ್ಥನಾರಾಯಣ, ಮುರುಗೇಶ ನಿರಾಣಿಯವರು ಚಾಲನೆ ನೀಡಲಿದ್ದಾರೆ ಎಂದು ತಿಳಿಸಿದ ಅವರು, ಸೈಕಲ್‌ ಬಳಕೆಯಿಂದ ಆರೋಗ್ಯದಲ್ಲಿನ ಏರುಪೇರು ಸಮತೋಲನ ಹಾಗೂ ಉತ್ತಮ ಬದಲಾವಣೆಗಳ ಕುರಿತು ಜನರಲ್ಲಿ ಅರಿವು ಮೂಡಿಸಲಾಗುವುದು. ದಿನನಿತ್ಯದ ಚಟುವಟಿಕೆಗಳಲ್ಲಿ  ಸೈಕಲ್‌ ಬಳಸಲು ಪ್ರೇರೇಪಿಸುವುದಕ್ಕಾಗಿ ವಿಶ್ವ ಬೈಸಿಕಲ್ ದಿನಾಚರಣೆ ಆಯೋಜಿಸಲಾಗಿದೆ. ಸೈಕಲ್‌ ಬಳಕೆಯಿಂದಾಗಿ  ಪರಿಸರ ಮಾಲಿನ್ಯ ತಡೆಗಟ್ಟಬಹುದು. ಟ್ರಾಫಿಕ್‌ ಸಮಸ್ಯೆಯನ್ನೂ ತಗ್ಗಿಸಬಹುದಾಗಿದೆ. ಆದ್ದರಿಂದ ಹೆಚ್ಚಿನ ಸಂಖ್ಯೆಯಲ್ಲಿ ಸೈಕಲ್‌ ಬಳಸಬೇಕು ಎಂದು ಹೇಳಿದರು.

ರಾಜ್ಯದ ಏಳು ಐತಿಹಾಸಿಕ ಸ್ಥಳಗಳಾದ ಹಂಪಿ, ಬೇಲೂರು, ರಾಣಿ ಅಬ್ಬಕ್ಕ ಕೋಟೆ, ಗೋಲ್‌ ಗುಂಬಜ್‌, ಮೈಸೂರು ಅರಮನೆ, ಮಲ್ಪೆ ಮತ್ತು ಮಡಿಕೇರಿ ಕೋಟೆಗಳಲ್ಲಿ ಬೈಸಿಕಲ್‌ ರ‍್ಯಾಲಿ ಆಯೋಜಿಸಲಾಗಿದೆ. ನಮ್ಮ–ನಿಮ್ಮ ಸೈಕಲ್‌ ಫೌಂಡೇಷನ್ ಸಹಯೋಗದಲ್ಲಿ ‘ಲೀಡ್‌ ಬೆಂಗಳೂರು ರೈಡ್‌–2022’ ಆಯೋಜಿಸುತ್ತಿದ್ದು, ಇದರಲ್ಲಿ ಜರ್ಮನಿಯ ವಿವಿಧ ಕಂಪನಿಗಳ ಸಿಇಒಗಳು ಭಾಗವಹಿಸಲಿದ್ದಾರೆ. ಇದರ ಜೊತೆಗೆ ಬೆಂಗಳೂರಿನಲ್ಲಿ ಸುಮಾರು 200 ಸೈಕಲ್‌ ಸವಾರರು ಪಾಲ್ಗೊಳ್ಳುವ ಸಾಧ್ಯತೆ ಇದೆ ಎಂದಿದ್ದಾರೆ.

Donate Janashakthi Media

Leave a Reply

Your email address will not be published. Required fields are marked *