ಪ್ಯಾರಿಸ್ :ಒಲಿಂಪಿಕ್‌ನಲ್ಲಿ ನಡೆದ ಮಹಿಳೆಯರ 50ಕೆಜಿ ವಿಭಾಗದ ಫ್ರೀ ಸ್ಟೈಲ್ ಕುಸ್ತಿಯಲ್ಲಿ ಸೆಮಿಫೈನಲ್ ಪಂದ್ಯದಲ್ಲಿ ಭರ್ಜರಿ ಜಯಗಳಿಸುವ ಮೂಲಕ ವಿನೇಶ್ ಪೋಗಟ್ ಅವರು ಫೈನಲ್ ತಲುಪುವ ಮೂಲಕ ದಾಖಲೆ ಬರೆದಿದ್ದಾರೆ.
ಕುಸ್ತಿಯಲ್ಲಿ ಭಾರತದ ಪರವಾಗಿ ಫೈನಲ್ ಪ್ರವೇಶಿಸಿದ ಮೊದಲ ಮಹಿಳಾ ಕ್ರೀಡಾಪಟು ಎಂಬ ಹೆಗ್ಗಳಿಕೆಗೆ ಅವರು ಪಾತ್ರರಾಗಿದ್ದಾರೆ.
ಸೆಮಿಫೈನಲ್‌ನಲ್ಲಿ 5-0 ಅಂತರದ ಜಯ
ಮಹಿಳೆಯರ ಫ್ರೀ ಸ್ಟೈಲ್ 50 ಕೆಜಿ ಸೆಮಿಫೈನಲ್‌ನಲ್ಲಿ ಕ್ಯೂಬಾದ ಯುಸ್ನೆಲಿಸ್ ಗುಜ್ಮನ್ ಲೋಪೆಜ್ ಅವರನ್ನು 5-0 ಅಂತರದಿಂದ ಸೋಲಿಸಿ ಒಲಿಂಪಿಕ್ ಫೈನಲ್ ತಲುಪಿದ ಮೊದಲ ಭಾರತೀಯ ಮಹಿಳಾ ಕುಸ್ತಿಪಟು ಎಂಬ ಹೆಗ್ಗಳಿಕೆಗೆ ವಿನೇಶ್ ಫೋಗಟ್ ಪಾತ್ರರಾಗಿದ್ದಾರೆ. ಮಂಗಳವಾರ ನಡೆದ ಸೆಮಿಫೈನಲ್ ಪಂದ್ಯದಲ್ಲಿ ಅವರು ಕ್ಯೂಬಾದ ಯುಸ್ನೆಲಿಸ್ ಗುಜ್ಮನ್ ಅವರನ್ನು ಸೋಲಿಸಿ ಇತಿಹಾಸ ಬರೆದಿದ್ದಾರೆ. ಸೆಮಿಸ್‌ನಲ್ಲಿ ಗೆಲುವು ಸಾಧಿಸಿದ ವಿನೇಶ್‌ಗೆ ಕನಿಷ್ಠ ಬೆಳ್ಳಿ ಪದಕವನ್ನು ಖಚಿತಪಡಿಸಿಕೊಂಡಿದ್ದಾರೆ. ಒಂದು ವೇಳೆ ಫೈನಲ್‌ನಲ್ಲಿ ಅವರು ಗೆದ್ದರೆ ಚಿನ್ನದ ಪದಕ ಗೆದ್ದು ಸಾಧನೆ ಮಾಡಲಿದ್ದಾರೆ.
ಬ್ರೇಕ್ ಬಳಿಕ ಪುಟಿದೆದ್ದ ವಿನೇಶ್
ಇಬ್ಬರೂ ಕುಸ್ತಿಪಟುಗಳು ಆರಂಭದಲ್ಲಿ ತಾಳ್ಮೆಯಿಂದ ಪಂದ್ಯವನ್ನು ಪ್ರಾರಂಭಿಸಿದರು, ಒಬ್ಬರಿಗೊಬ್ಬರು ಹಿಡಿತ ಸಾಧಿಸಿದರು, ಆದರೆ ಯಾವುದೇ ಹೆಚ್ಚುವರಿ ಅಂಕಗಳನ್ನು ಮೊದಲೇ ನೀಡದಂತೆ ನಿಧಾನವಾಗಿ ಮತ್ತು ಸುರಕ್ಷಿತವಾಗಿ ಆಡಿದರು. ಆದರೆ, ಪಂದ್ಯದ ಸುಮಾರು ಒಂದು ನಿಮಿಷದಲ್ಲಿ, ಫೋಗಾಟ್ ಅಂತಿಮವಾಗಿ ಹಿಡಿತ ಸಾಧಿಸಿದರು. ಕ್ಯೂಬನ್ ಗುಜ್ಮನ್ ಅವರನ್ನು ಕೆಳಗೆ ಹಾಕಿದರೂ ಯಾವುದೇ ಅಂಕ ಸಿಗುವುದಿಲ್ಲ. 30-ಸೆಕೆಂಡ್‌ಗಳ ಶಾಟ್‌ಕ್ಲಾಕ್‌ನಲ್ಲಿ ಗುಜ್‌ಮನ್‌ಗೆ ಪೆಟ್ಟಾದ ಕಾರಣ, ವಿನೇಶ್ ಅವರು ಪಂದ್ಯದ ಮೊದಲ ಅಂಕವನ್ನು ಗಳಿಸಲು ತಮ್ಮ ನೆಲವನ್ನು ಹಿಡಿದಿಟ್ಟುಕೊಂಡಿದ್ದರಿಂದ ಇಬ್ಬರೂ ಗ್ರ್ಯಾಪಲ್‌ಫೆಸ್ಟ್‌ನಲ್ಲಿ ತೊಡಗಿದರು.
ಹಾಲಿ ಚಾಂಪಿಯನ್‌ಗೆ ಶಾಕ್:
4 ಬಾರಿಯ ವಿಶ್ವ ಚಾಂಪಿಯನ್ ಹಾಗೂ ಹಾಲಿ ಒಲಿಂಪಿಕ್ಸ್ ಚಾಂಪಿಯನ್ ಜಪಾನಿನ ಯ್ಯೂ ಸುಸುಕಿ ವಿರುದ್ದ 3-2 ಅಂತರದಲ್ಲಿ ರೋಚಕ ಗೆಲುವು ಸಾಧಿಸಿದ್ದ ಫೋಗಟ್, ಕ್ವಾರ್ಟರ್ ಫೈನಲ್‌ನಲ್ಲಿ ಆಕ್ರಮಣಕಾರಿ ಆಟಕ್ಕೆ ಮೊರೆ ಹೋದರು. ಉಕ್ರೇನ್‌ನ ಮೂರು ಬಾರಿ ಕಾಮನ್‌ವೆಲ್ತ್ ಗೇಮ್ಸ್ ಚಿನ್ನದ ಪದಕ ವಿಜೇತೆ ಒಕ್ಸಾನಾ ಲಿವೀಚ್ ಎದುರು 7-5 ಅಂತರದಲ್ಲಿ ಭರ್ಜರಿ ಗೆಲುವು ಸಾಧಿಸುವ ಮೂಲಕ ಸೆಮೀಸ್‌ಗೆ ಲಗ್ಗೆಯಿಟ್ಟಿದ್ದರು. ಸೆಮಿಫೈನಲ್‌ನಲ್ಲಿ ಕ್ಯೂಬಾದ ಯುಸ್ನೆಲಿಸ್ ಗುಜ್ಮನ್ ಲೋಪೆಜ್ ಅವರನ್ನು 5-0 ಅಂತರದಿಂದ ಸೋಲಿಸಿ ಒಲಿಂಪಿಕ್ ಫೈನಲ್ ತಲುಪಿದ ಮೊದಲ ಭಾರತೀಯ ಮಹಿಳಾ ಕುಸ್ತಿಪಟು ಎಂಬ ಹೆಗ್ಗಳಿಕೆಗೆ ವಿನೇಶ್ ಫೋಗಟ್ ಪಾತ್ರರಾಗಿದ್ದಾರೆ.
ಮೋದಿ ಸರ್ಕಾರದಿಂದ ಅವಮಾನ, ಲಾಠಿ ಏಟು!
ಜಗತನ್ನೇ ಗೆಲ್ಲಲು ಹೊರಟಿರುವ ವಿನೇಶಾ ಫೋಗಟ್ ಗೆ ನಮ್ಮ ದೇಶದಲ್ಲಿ ಸಾಕಷ್ಟು ಅವಮಾನಿಸಲಾಗಿತ್ತು. ಲೈಗಿಂಕ ಕಿರುಕುಳದ ವಿರುದ್ಧ ನ್ಯಾಯಕ್ಕಾಗಿ ಹೋರಾಡಿದ್ದ ಈಕೆಯ ಮೇಲೆ ಮೋದಿ ಸರ್ಕಾರ ಲಾಠಿಯಿಂದ ಹೊಡೆದು, ನ್ಯಾಯದ ಕತ್ತು ಹಿಸುಕಿತ್ತು.
ಬೀದಿಯಲ್ಲಿ ಎಳೆದಾಡಿ ತುಳಿದು ಅವಾಮಾನಿಸಲಾಗಿತ್ತು. ಇಂದು ಈ ಹುಡುಗಿಯ ಸಾಧನೆಯ ಮುಂದೆ ದೇಶದ ವ್ಯವಸ್ಥೆ ಸೋಲು ಕಂಡಿದೆ’ ಒಲಿಂಪಿಕ್ ಪದಕ ವಿಜೇತ ಕುಸ್ತಿಪಟುಗಳಾದ ಸಾಕ್ಷಿ ಮಲಿಕ್ ಮತ್ತು ಬಜರಂಗ್ ಪೂನಿಯ ಎಕ್ಸ್ನಲ್ಲಿ ಪೋಸ್ಟ್ ಮಾಡುವ ಮೂಲಕ ವಿನೇಶ್ ಸಾಧನೆಯನ್ನು ಕೊಂಡಾಡಿದ್ದಾರೆ. ಜೊತೆಗೆ ಕೇಂದ್ರ ಸರ್ಕಾರದ ಕೆನ್ನೆಗೆ ಬಾರಿಸಿದ್ದಾರೆ.
ವಿನೇಶ್ ಫೋಗಟ್ ಅವರು ಕುಸ್ತಿಯಲ್ಲಿ ಒಲಿಂಪಿಕ್ ಸೆಮಿ ಫೈನಲ್ ಪ್ರವೇಶಿಸಿದ ಮೊದಲ ಭಾರತೀಯ ಮಹಿಳಾ ಕುಸ್ತಿಪಟು ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಫೈನಲ್‌ನಲ್ಲಿ ಚಿನ್ನ ಅಥವಾ ಬೆಳ್ಳಿ ಗೆದ್ದರೆ ಐತಿಹಾಸಿಕ ಪದಕ ಗೆದ್ದ ಸಾಧನೆ ಮಾಡಲಿದ್ದಾರೆ.