ಪ್ಯಾರಿಸ್: ಪ್ಯಾರಿಸ್‌ನಲ್ಲಿ ಪ್ಯಾರಾಲಿಂಪಿಕ್ಸ್ ನ 17ನೇ ಆವೃತ್ತಿಯಲ್ಲಿ ಭಾರತದ ಅಥ್ಲೀಟ್ಗಳು ಈ ಬಾರಿ ಪದಕಗಳ ಸುರಿಮಳೆಯನ್ನೇ ಸುರಿಸಿದ್ದಾರೆ. ಮಹಾ ಕ್ರೀಡಾಕೂಟಕ್ಕೆ ಅಂತಿಮ ತೆರೆ ಬೀಳುವ ಮುನ್ನ ದಿನವೂ ಕೂಡ ಭಾರತಕ್ಕೆ ಅಥ್ಲೀಟ್ಸ್ ಗಳು ಪದಕಗಳನ್ನು ಗೆದ್ದುಕೊಡುವ ಮೂಲಕ ದೇಶದ ಕೀರ್ತಿ ಪತಾಕೆ ಹೆಚ್ಚಿಸಿದ್ದಾರೆ.
ಈ ಬಾರಿಯ ಪ್ಯಾರಾಲಿಂಪಿಕ್ಸ್‌ನಲ್ಲಿ ಇತಿಹಾಸ ಸೃಷ್ಟಿಸಿದ ಭಾರತ ದಾಖಲೆಯ 29 ಪದಕ ಗೆಲ್ಲುವಲ್ಲಿ ಯಶಸ್ವಿಯಾಗಿದೆ. ಇವುಗಳಲ್ಲಿ ಏಳು ಚಿನ್ನ, ಒಂಬತ್ತು ಬೆಳ್ಳಿ ಮತ್ತು 13 ಕಂಚು ಸೇರಿವೆ. ವಾಸ್ತವವಾಗಿ ಪ್ಯಾರಾಲಿಂಪಿಕ್ಸ್ ಇತಿಹಾಸದಲ್ಲಿ ಭಾರತ ಇಷ್ಟು ಸಂಖ್ಯೆಯ ಪದಕಗಳನ್ನು ಗೆದ್ದಿದ್ದು, ಇದೇ ಮೊದಲು. ಇದಕ್ಕೂ ಮೊದಲು ಟೊಕಿಯೋ ಪ್ಯಾರಾಲಿಂಪಿಕ್ನಲ್ಲಿ 19 ಪದಕಗಳನ್ನು ಗೆದ್ದಿದ್ದು, ಭಾರತದ ಅತ್ಯುತ್ತಮ ಪ್ರದರ್ಶನವಾಗಿತ್ತು.
ಕ್ರೀಡಾಕೂಟದ ಕೊನೆಯ ದಿನವಾದ ಇಂದು ಭಾರತದ ಪ್ಯಾರಾ ಅಥ್ಲೀಟ್ ಪೂಜಾ ಓಜಾ, ಮಹಿಳೆಯರ ಪ್ಯಾರಾ ಕ್ಯಾನೋ KL1 200 ಮೀಟರ್ ಸ್ಪರ್ಧೆಯ ಸೆಮಿಫೈನಲ್‌ನಲ್ಲಿ ನಾಲ್ಕನೇ ಸ್ಥಾನ ಪಡೆಯುವ ಮೂಲಕ ಫೈನಲ್ ರೇಸ್ನಿಂದ ಹೊರಬಿದ್ದರು. ಇದರೊಂದಿಗೆ ಭಾರತದ ಅಭಿಯಾನವೂ ಕೊನೆಗೊಂಡಿತು. ಅದಾಗ್ಯೂ ಈ ಬಾರಿಯ ಪ್ಯಾರಾಲಿಂಪಿಕ್ಸ್‌ನಲ್ಲಿ ಇತಿಹಾಸ ಸೃಷ್ಟಿಸಿದ ಭಾರತ ದಾಖಲೆಯ 29 ಪದಕ ಗೆಲ್ಲುವಲ್ಲಿ ಯಶಸ್ವಿಯಾಗಿದೆ. ಇವುಗಳಲ್ಲಿ ಏಳು ಚಿನ್ನ, ಒಂಬತ್ತು ಬೆಳ್ಳಿ ಮತ್ತು 13 ಕಂಚು ಸೇರಿವೆ. ವಾಸ್ತವವಾಗಿ ಪ್ಯಾರಾಲಿಂಪಿಕ್ಸ್ ಇತಿಹಾಸದಲ್ಲಿ ಭಾರತ ಇಷ್ಟು ಸಂಖ್ಯೆಯ ಪದಕಗಳನ್ನು ಗೆದ್ದಿದ್ದು, ಇದೇ ಮೊದಲು. ಇದಕ್ಕೂ ಮೊದಲು ಟೊಕಿಯೋ ಪ್ಯಾರಾಲಿಂಪಿಕ್ನಲ್ಲಿ 19 ಪದಕಗಳನ್ನು ಗೆದ್ದಿದ್ದು, ಭಾರತದ ಅತ್ಯುತ್ತಮ ಪ್ರದರ್ಶನವಾಗಿತ್ತು.
ಭಾರತದ ಪದಕಗಳ ಪಟ್ಟಿ ಈ ರೀತಿ ಇದೆ
1. ಮಹಿಳೆಯರ 10 ಮೀಟರ್ ಏರ್ ರೈಫಲ್ ಸ್ಟ್ಯಾಂಡಿಂಗ್ ಎಸ್‌ಎಚ್1 (ಶೂಟಿಂಗ್) ನಲ್ಲಿ ಅವನಿ ಲೆಖರಾ – ಚಿನ್ನ
2. ಮಹಿಳೆಯರ 10 ಮೀಟರ್ ಏರ್ ರೈಫಲ್ ಸ್ಟ್ಯಾಂಡಿಂಗ್ ಎಸ್‌ಎಚ್1 (ಶೂಟಿಂಗ್) ನಲ್ಲಿ ಮೋನಾ ಅಗರ್ವಾಲ್ – ಕಂಚು
3. ಮಹಿಳೆಯರ 100 ಮೀ ಟಿ35 (ಅಥ್ಲೆಟಿಕ್ಸ್) ನಲ್ಲಿ ಪ್ರೀತಿ ಪಾಲ್ – ಕಂಚು
4. ಪುರುಷರ 10 ಮೀಟರ್ ಏರ್ ಪಿಸ್ತೂಲ್ SH1 (ಶೂಟಿಂಗ್) ನಲ್ಲಿ ಮನೀಶ್ ನರ್ವಾಲ್ – ಬೆಳ್ಳಿ
5. ಮಹಿಳೆಯರ 10ಮೀ ಏರ್ ಪಿಸ್ತೂಲ್ SH1 (ಶೂಟಿಂಗ್) ನಲ್ಲಿ ರುಬಿನಾ ಫ್ರಾನ್ಸಿಸ್ – ಕಂಚು
6. ಮಹಿಳೆಯರ 200 ಮೀ ಟಿ35 (ಅಥ್ಲೆಟಿಕ್ಸ್) ನಲ್ಲಿ ಪ್ರೀತಿ ಪಾಲ್ – ಕಂಚು
7. ಪುರುಷರ ಹೈಜಂಪ್ ಟಿ47 (ಅಥ್ಲೆಟಿಕ್ಸ್)ನಲ್ಲಿ ನಿಶಾದ್ ಕುಮಾರ್ – ಬೆಳ್ಳಿ
8. ಪುರುಷರ ಡಿಸ್ಕಸ್ ಥ್ರೋ F56 (ಅಥ್ಲೆಟಿಕ್ಸ್) ನಲ್ಲಿ ಯೋಗೇಶ್ ಕಥುನಿಯಾ – ಬೆಳ್ಳಿ
9. ಪುರುಷರ ಸಿಂಗಲ್ಸ್ SL3 (ಬ್ಯಾಡ್ಮಿಂಟನ್) ನಲ್ಲಿ ನಿತೇಶ್ ಕುಮಾರ್ – ಚಿನ್ನ
10. ಮಹಿಳೆಯರ ಸಿಂಗಲ್ಸ್ SU5 (ಬ್ಯಾಡ್ಮಿಂಟನ್) ನಲ್ಲಿ ತುಳಸಿಮತಿ ಮುರುಗೇಶನ್ – ಬೆಳ್ಳಿ
11. ಮನೀಶಾ ರಾಮದಾಸ್ ಮಹಿಳೆಯರ ಸಿಂಗಲ್ಸ್ SU5 (ಬ್ಯಾಡ್ಮಿಂಟನ್) – ಕಂಚು
12. ಸುಹಾಸ್ ಯತಿರಾಜ್ ಪುರುಷರ ಸಿಂಗಲ್ಸ್ SL4 (ಬ್ಯಾಡ್ಮಿಂಟನ್) – ಬೆಳ್ಳಿ
13. ರಾಕೇಶ್ ಕುಮಾರ್ – ಶೀತಲ್ ದೇವಿ ಮಿಶ್ರ ತಂಡದ ಕಾಂಪೌಂಡ್ ಓಪನ್ (ಆರ್ಚರಿ) – ಕಂಚು
14. ಪುರುಷರ ಜಾವೆಲಿನ್ ಎಸೆತದಲ್ಲಿ ಸುಮಿತ್ ಆಂಟಿಲ್ F64 (ಅಥ್ಲೆಟಿಕ್ಸ್) – ಚಿನ್ನ
15. ಮಹಿಳೆಯರ ಸಿಂಗಲ್ಸ್ SH6 (ಬ್ಯಾಡ್ಮಿಂಟನ್) ನಲ್ಲಿ ನಿತ್ಯ ಶ್ರೀ ಶಿವನ್ – ಕಂಚು
16. ಮಹಿಳೆಯರ 400 ಮೀ ಟಿ20 (ಅಥ್ಲೆಟಿಕ್ಸ್) ನಲ್ಲಿ ದೀಪ್ತಿ ಜೀವನ್ಜಿ – ಕಂಚು
17. ಪುರುಷರ ಜಾವೆಲಿನ್ F46 (ಅಥ್ಲೆಟಿಕ್ಸ್) ನಲ್ಲಿ ಸುಂದರ್ ಸಿಂಗ್ ಗುರ್ಜರ್ – ಕಂಚು
18. ಪುರುಷರ ಜಾವೆಲಿನ್ F46 (ಅಥ್ಲೆಟಿಕ್ಸ್) ನಲ್ಲಿ ಅಜೀತ್ ಸಿಂಗ್ – ಬೆಳ್ಳಿ
19. ಪುರುಷರ ಹೈಜಂಪ್ T63 (ಅಥ್ಲೆಟಿಕ್ಸ್) ನಲ್ಲಿ ಮರಿಯಪ್ಪನ್ ತಂಗವೇಲು – ಕಂಚು
20. ಪುರುಷರ ಹೈ ಜಂಪ್ T63 (ಅಥ್ಲೆಟಿಕ್ಸ್) ನಲ್ಲಿ ಶರದ್ ಕುಮಾರ್ – ಬೆಳ್ಳಿ
21. ಪುರುಷರ ಶಾಟ್ ಪುಟ್ F46 (ಅಥ್ಲೆಟಿಕ್ಸ್) ನಲ್ಲಿ ಸಚಿನ್ ಖಿಲಾರಿ – ಬೆಳ್ಳಿ
22. ಪುರುಷರ ವೈಯಕ್ತಿಕ ರಿಕರ್ವ್‌ನಲ್ಲಿ ಹರ್ವಿಂದರ್ ಸಿಂಗ್ (ಆರ್ಚರಿ) – ಚಿನ್ನ
23. ಪುರುಷರ ಕ್ಲಬ್ ಥ್ರೋ 51 (ಅಥ್ಲೆಟಿಕ್ಸ್) ನಲ್ಲಿ ಧರಂಬೀರ್ – ಚಿನ್ನ
24. ಪುರುಷರ ಕ್ಲಬ್ ಥ್ರೋ 51 (ಅಥ್ಲೆಟಿಕ್ಸ್) ನಲ್ಲಿ ಪ್ರಣವ್ ಸೂರ್ಮಾ – ಬೆಳ್ಳಿ
25. ಜೂಡೋ ಪುರುಷರ 60 ಕೆಜಿ ವಿಭಾಗದಲ್ಲಿ ಕಪಿಲ್ ಪರ್ಮಾರ್ – ಕಂಚು
26. ಟಿ64 ಹೈಜಂಪ್ (ಅಥ್ಲೆಟಿಕ್ಸ್) ಪ್ರವೀಣ್ ಕುಮಾರ್ – ಚಿನ್ನ
27. ಪುರುಷರ ಶಾಟ್‌ಪುಟ್ F57 (ಅಥ್ಲೆಟಿಕ್ಸ್) ಹೊಕಾಟೊ ಸೆಮಾ – ಕಂಚು
28. ಮಹಿಳೆಯರ 200 ಮೀ ಟಿ12 (ಅಥ್ಲೆಟಿಕ್ಸ್) ಸಿಮ್ರಾನ್ ಸಿಂಗ್ – ಕಂಚು
29. ಪುರುಷರ ಜಾವೆಲಿನ್ F41 (ಅಥ್ಲೆಟಿಕ್ಸ್) ನಲ್ಲಿ ನವದೀಪ್ ಸಿಂಗ್ – ಚಿನ್ನ