NEET ಮರುಪರೀಕ್ಷೆಗೆ 2 ಲಕ್ಷ ವಿದ್ಯಾರ್ಥಿಗಳ ಗೈರು: ಪೇಪರ್ ಲೀಕ್ ಆತಂಕ, ಮಾನಸಿಕ ಒತ್ತಡ ಪ್ರಮುಖ ಕಾರಣ?

ನವದೆಹಲಿ: ಮೇ 3ರಂದು ನಡೆದ NEET-UG ಪರೀಕ್ಷೆಯನ್ನು ಬರೆದ ಎರಡು ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳು ಜೂನ್ 21ರಂದು ನಡೆದ ಮರುಪರೀಕ್ಷೆಗೆ ಹಾಜರಾಗಿಲ್ಲ ಎಂದು ರಾಷ್ಟ್ರೀಯ ಪರೀಕ್ಷಾ ಏಜೆನ್ಸಿ (NTA) ಪ್ರಾಥಮಿಕ ಅಂದಾಜು ತಿಳಿಸಿದೆ. ಗೈರು

ಮೊದಲ ಪರೀಕ್ಷೆಯಲ್ಲಿ 22,05,035 ಅಭ್ಯರ್ಥಿಗಳು ಭಾಗವಹಿಸಿದ್ದರೆ, ಮರುಪರೀಕ್ಷೆಗೆ ಸುಮಾರು 20 ಲಕ್ಷ ಮಂದಿ ಮಾತ್ರ ಹಾಜರಾಗಿದ್ದು, ಇದು ಸುಮಾರು 9% ಇಳಿಕೆಯನ್ನು ತೋರಿಸುತ್ತದೆ. ನಿಖರ ಸಂಖ್ಯೆಗಳು ಇನ್ನೂ ಸಂಗ್ರಹಿಸಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಪರೀಕ್ಷಾ ಅವಧಿಯಲ್ಲಿ ಕನಿಷ್ಠ 21 ವಿದ್ಯಾರ್ಥಿಗಳು ಆತ್ಮಹತ್ಯೆ ಮಾಡಿಕೊಂಡಿರುವುದು ಚಿಂತಾಜನಕ ಸಂಗತಿಯಾಗಿದೆ.

ಇದನ್ನೂ ಓದಿ: ರೇಣುಕಾಸ್ವಾಮಿ ಕೊಲೆ ಪ್ರಕರಣ: ಸಾಕ್ಷಿಗೆ ಒತ್ತಡ ಆರೋಪ, ತಿರುಚಲು ಯತ್ನಿಸಿದರೆ ಕಠಿಣ ಕ್ರಮ – ಕೋರ್ಟ್‌

ಮಾನಸಿಕ ಒತ್ತಡ, ನಂಬಿಕೆ ಕುಸಿತ

ಶಿಕ್ಷಣ ತಜ್ಞರ ಪ್ರಕಾರ, ಪೇಪರ್ ಲೀಕ್ ವಿವಾದವು ವಿದ್ಯಾರ್ಥಿಗಳಲ್ಲಿ ಭಾರೀ ಮಾನಸಿಕ ಒತ್ತಡ ಉಂಟುಮಾಡಿದ್ದು, ಪರೀಕ್ಷಾ ವ್ಯವಸ್ಥೆಯ ಮೇಲೆ ನಂಬಿಕೆ ಕುಂದಿಸಿದೆ. ಇದರಿಂದ ಹಲವರು ಮರುಪರೀಕ್ಷೆಗೆ ಹಾಜರಾಗಲು ಹಿಂಜರಿದಿರಬಹುದು ಎಂದು ಅವರು ಹೇಳಿದ್ದಾರೆ.

ಇತರೆ ಕಾರಣಗಳೂ ಪ್ರಮುಖ

ಆದರೆ, NTA ಮೂಲಗಳ ಪ್ರಕಾರ ಕೆಲ ವಿದ್ಯಾರ್ಥಿಗಳು JEE ಮತ್ತು JEE-ಅಡ್ವಾನ್ಸ್ಡ್ ಪರೀಕ್ಷೆಗಳಲ್ಲಿ ಉತ್ತಮ ಸಾಧನೆ ಮಾಡಿದ ಕಾರಣ ವೈದ್ಯಕೀಯ ಕನಸನ್ನು ಬಿಟ್ಟು ಇಂಜಿನಿಯರಿಂಗ್ ಕಡೆ ಮುಖ ಮಾಡಿರಬಹುದು.

ಇದಲ್ಲದೆ, ಕೆಲವರು ವಿದೇಶಿ ಶಿಕ್ಷಣ ಸಂಸ್ಥೆಗಳಿಗೆ ಅರ್ಜಿ ಸಲ್ಲಿಸಿ, ಅಲ್ಲಿ ಪ್ರವೇಶ ಪಡೆಯಲು ಮುಂದಾಗಿರುವ ಸಾಧ್ಯತೆಯೂ ಇದೆ.

ಮತ್ತೊಂದು ಮೂಲದ ಪ್ರಕಾರ, ಮೇ 6ರಂದು ಉತ್ತರ ಕೀ ಬಿಡುಗಡೆಗೊಂಡ ನಂತರ ಕೆಲ ವಿದ್ಯಾರ್ಥಿಗಳು ತಮ್ಮ ಪ್ರದರ್ಶನವನ್ನು ವಿಶ್ಲೇಷಿಸಿ, ಈ ಮಟ್ಟದ ಸ್ಪರ್ಧಾತ್ಮಕ ಪರೀಕ್ಷೆಗೆ ತಾವು ತಕ್ಕವರಲ್ಲ ಎಂದು ಭಾವಿಸಿ ಮರುಪರೀಕ್ಷೆಯಿಂದ ಹಿಂದೆ ಸರಿದಿರಬಹುದು.

ಒಟ್ಟಿನಲ್ಲಿ, NEET ಮರುಪರೀಕ್ಷೆಯಲ್ಲಿ ಕಂಡುಬಂದ ಈ ಗಣನೀಯ ಗೈರುಹಾಜರಿ, ಪರೀಕ್ಷಾ ವ್ಯವಸ್ಥೆಯ ವಿಶ್ವಾಸಾರ್ಹತೆ ಮತ್ತು ವಿದ್ಯಾರ್ಥಿಗಳ ಮಾನಸಿಕ ಆರೋಗ್ಯದ ಬಗ್ಗೆ ಗಂಭೀರ ಪ್ರಶ್ನೆಗಳನ್ನು ಎಬ್ಬಿಸಿದೆ.

ಇದನ್ನೂ ನೋಡಿ: ಆರೋಗ್ಯ ಸೇವೆ ವ್ಯಾಪಾರವಲ್ಲ, ಜನರ ಹಕ್ಕು Janashakthi Media

Donate Janashakthi Media

Leave a Reply

Your email address will not be published. Required fields are marked *