ಪಂಜಾಬಿನಲ್ಲಿ ಈ ಬಾರಿಯ ದಸರಾದ ‘ರಾವಣರು’

ಪಂಜಾಬ್: ಕೃಷಿ ಕಾಯ್ದೆ ತಿದ್ದುಪಡಿಗಳ ವಿರುದ್ಧ ರೈತರ ಮತ್ತು ಜನಗಳ ಆಕ್ರೋಶ ತೀವ್ರವಾಗಿರುವ ಪಂಜಾಬಿನ ಹಲವು ಹಳ್ಳಿಗಳಲ್ಲಿ ಮತ್ತು ಪಟ್ಟಣಗಳಲ್ಲಿ ಈ ಬಾರಿ ದಸರಾದಂದು ರಾವಣನ ಪ್ರತಿಕೃತಿಗಳ ದಹನ ಮಾಡುವ ಬದಲು ಪ್ರಧಾನ ಮಂತ್ರಿಗಳು , ಮತ್ತು ಈ ಮಸೂದೆಗಳ ಹಿಂದಿದ್ದ ಅವರ ಸಹಚರರು ಎಂದು ಪರಿಭಾವಿಸಿರುವ ವ್ಯಕ್ತಿಗಳ ಪ್ರತಿಕೃತಿಗಳ ದಹನ ನಡೆದಿದೆ ಎಂದು ವರದಿಯಾಗಿದೆ.

ಭಟಿಂಡಾದ ಬಹುಪಯೋಗಿ ಕ್ರೀಡಾಂಗಣದಲ್ಲಿ ಮೋದಿಯವರ ಜೊತೆಗೆ ಮುಕೇಶ್ ಅಂಬಾನಿ  ಮತ್ತು ಗೌತಮ್‍ ಅದಾನಿಯ, ಅಲ್ಲದೆ ಅಮೆರಿಕನ್ ಬಂಡವಾಳಿಗ ಇರುವ ಪ್ರತಿಕೃತಿಗಳನ್ನು ದಹನ ಮಾಡಲಾಯಿತು ಎಂದು ಪಂಜಾಬಿನ ‘ಟ್ರಿಬ್ಯೂನ್’ ಪತ್ರಿಕೆಯಲ್ಲಿ ವರದಿಯಾಗಿದೆ.

ಸಂಗತ್‍, ಮನ್ಸ ನಗರ, ಬುಧ್‍ಲದಾ, ಸಂಗ್ರೂರ್, ಬರ್ನಾಲ, ಮುಂತಾದ ಇತರ ಹಲವೆಡೆಗಳಲ್ಲಿ ಭಾರತೀಯ ಕಿಸಾನ್‍ ಯೂನಿಯನ್ ನೇತೃತ್ವದಲ್ಲಿ ಇವು ನಡೆದಿವೆ. ಈ ಸಂಘ ಸೇರಿದಂತೆ 29 ಪಂಜಾಬಿನ ರೈತ ಸಂಘಟನೆಗಳನ್ನು ಕೇಂದ್ರ ಸರಕಾರದ ಕೃಷಿ ಇಲಾಖೆಯ ಕಾರ್ಯದರ್ಶಿಗಳು ದಿಲ್ಲಿಯ ಕೃಷಿ ಭವನದಲ್ಲಿ ಮಾತುಕತೆಗೆಂದು ಕರೆದಿದ್ದರು.

ಮಾತುಕತೆಗಳ ವೇಳೆಯಲ್ಲಿ, ಈ  ಶಾಸನದಲ್ಲಿ ಸಿ2+ 50% ಕನಿಷ್ಟ ಬೆಂಬಲ ಬೆಲೆಯನ್ನು ಖಾತ್ರಿಪಡಿಸುವ ಯಾವುದೇ ಕಲಮು ಏಕಿಲ್ಲ ಎಂಬ ರೈತರ ನೇರ ಪ್ರಶ್ನೆಗೆ ಉತ್ತರ ನೀಡಲು ಕೃಷಿ ಕಾರ್ಯರ್ದರ್ಶಿಗೆ ಸಾಧ್ಯವಾಗಲಿಲ್ಲ.

ರೈತರ ಸಮಸ್ಯೆಗಳನ್ನು ಬಗೆಹರಿಸಬೇಕು ಎಂದು ಸರಕಾರ ನಿಜವಾಗಿಯೂ ಬಯಸುವುದಾದರೆ ಪ್ರಧಾನ ಮಂತ್ರಿಗಳು ಮತ್ತು ಕೃಷಿ ಮಂತ್ರಿಗಳು ದೇಶದ ಎಲ್ಲ ರೈತ ಸಂಘಟನೆಗಳನ್ನು ಮಾತುಕತೆಗೆ ಕರೆಯಬೇಕು ಎಂದು ಪಂಜಾಬಿನ ರೈತ ಪ್ರತಿನಿಧಿಗಳು ಆಗ್ರಹಿಸಿದರು.ಮೂರೂ ಕಾಯ್ದೆಗಳನ್ನು ಹಿಂತೆಗೆದುಕೊಳ್ಳಬೇಕು ಎಂಬ ಆಗ್ರಹಕ್ಕೆ ಕೃಷಿ ಕಾರ್ಯದರ್ಶಿ ಒಪ್ಪುವ ಸ್ಥಿತಿಯಲ್ಲಿ ಇಲ್ಲದ್ದರಿಂದ  ಮಾತುಕತೆಗಳು ವ್ಯರ್ಥವೆಂದು ಪಂಜಾಬಿನ ರೈತ ಮುಖಂಡರು ಮಾತುಕತೆಯಿಂದ ಹೊರನಡೆದರು. ಪಂಜಾಬಿನ ರೈತರು ತಮ್ಮ ಹೋರಾಟವನ್ನು ಇನ್ನಷ್ಟು ತೀವ್ರಗೊಳಸುವ ಭಾಗವಾಗಿ ದಸರಾದಂದು ಈ ವಿಶಿಷ್ಟ ಸಾಂಕೇತಿಕ ಪ್ರತಿಭಟನೆ ನಡೆಸಿದ್ದಾರೆ.

 

 

Donate Janashakthi Media

Leave a Reply

Your email address will not be published. Required fields are marked *