ಪಾಲಿಕೆ-ಸ್ಥಳೀಯ ಸಂಸ್ಥೆಗಳಿಗೆ ಚುನಾವಣೆ: ಸೆಪ್ಟೆಂಬರ್‌ 6ರಂದು ಫಲಿತಾಂಶ

ಬೆಂಗಳೂರು: ಬೆಳಗಾವಿ, ಹುಬ್ಬಳ್ಳಿ ಧಾರವಾಡ, ಕಲಬುರಗಿ ಮಹಾನಗರ ಪಾಲಿಕೆ ಮತ್ತು ವಿವಿಧ ಜಿಲ್ಲೆಗಲ್ಲಿನ ನಗರಸಭೆ ಹಾಗೂ ಪುರಸಭೆಗಳಿಗೆ ಇಂದು (ಸೆಪ್ಟೆಂಬರ್‌ 3ರಂದು) ಮತದಾನ ನಡೆಯಲಿದ್ದು, ಸೆಪ್ಟೆಂಬರ್‌ 6ರಂದು ಫಲಿತಾಂಶ ಹೊರಬೀಳಲಿದೆ. ಅಂತಿಮವಾಗಿ ಮತದಾರರೇ ನಿರ್ಣಾಯಕವಾಗಲಿದ್ದಾರೆ.

ಪ್ರಮುಖ ಮೂರು ಪಕ್ಷಗಳಾದ ಬಿಜೆಪಿ, ಕಾಂಗ್ರೆಸ್‌, ಜೆಡಿಎಸ್‌ ಪಕ್ಷ ಬಹುತೇಕ ಕ್ಷೇತ್ರಗಳಲ್ಲಿ ತಮ್ಮ ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸಿದೆ. ಇದರೊಂದಿಗೆ ಬಿಎಸ್‌ಪಿ, ಎಎಪಿ, ಸಿಪಿಐ(ಎಂ), ಎಸ್‌ಡಿಪಿಐ, ಎಐಎಂಐಎಂ, ಕನ್ನಡ ಪಕ್ಷ, ಕರ್ನಾಟಕ ರಾಷ್ಟ್ರ ಸಮಿತಿ, ಉತ್ತಮ ಪ್ರಜಾಕೀಯ ಪಕ್ಷಗಳು ಒಳಗೊಂಡು ಪಕ್ಷೇತರರು ಕಣದಲ್ಲಿದ್ದಾರೆ.

ಮಹಾನಗರ ಪಾಲಿಕೆಗಳು; ಬೆಳಗಾವಿ (58 ವಾರ್ಡ್), ಹುಬ್ಬಳ್ಳಿ-ಧಾರವಾಡ (82 ವಾರ್ಡ್) ಮತ್ತು ಕಲಬುರಗಿ (55 ವಾರ್ಡ್).

ಬೆಳಗಾವಿ: ಬಿಜೆಪಿ ಪಕ್ಷವು 55 ಕ್ಷೇತ್ರಗಳಲ್ಲಿ, ಕಾಂಗ್ರೆಸ್‌ 45 ಕ್ಷೇತ್ರಗಳಲ್ಲಿ, ಜೆಡಿಎಸ್‌ 11 ಕ್ಷೇತ್ರಗಳಲ್ಲಿ, ಎಎಪಿ 27 ಕ್ಷೇತ್ರಗಳಲ್ಲಿ ಎಐಎಂಐಎಂನಿಂದ 7 ಕ್ಷೇತ್ರಗಳಲ್ಲಿ, ಉತ್ತಮ ಪ್ರಜಾಕೀಯ ಪಕ್ಷ 1, ಎಸ್‌ಡಿಪಿಐ 1 ಕ್ಷೇತ್ರದಲ್ಲಿ ಹಾಗೂ ಪಕ್ಷೇತರರು 238 ಮಂದಿ ಸ್ಪರ್ಧೆಯಲ್ಲಿದ್ದಾರೆ. ಒಟ್ಟು 385 ಮಂದಿ ಅಭ್ಯರ್ಥಿಗಳು ಕಣದಲ್ಲಿದ್ದಾರೆ.

ಇದನ್ನು ಓದಿ: ಸೆಪ್ಟಂಬರ್ 3ರಂದು ಸ್ಥಳೀಯ ಸಂಸ್ಥೆಗಳ ಚುನಾವಣೆ

ಹುಬ್ಬಳ್ಳಿ ಧಾರವಾಡ: ಬಿಜೆಪಿ-82, ಕಾಂಗ್ರೆಸ್‌-82, ಜೆಡಿಎಸ್‌-49, ಎಎಪಿ-41 , ಬಿಎಸ್‌ಪಿ-7, ಸಿಪಿಐ(ಎಂ)-1, ಉತ್ತಮ ಪ್ರಜಾಕೀಯ ಪಕ್ಷ11, ಎಐಎಂಐಎಂ-12, ಎಸ್‌ಡಿಪಿಐ-4, ಕರ್ನಾಟಕ ರಾಷ್ಟ್ರ ಸಮಿತಿ-4, ಕರ್ನಾಟಕ ಶಿವಸೇನೆ ಸಮಿತಿ-4, ಕರ್ನಾಟಕ ಜನಸೇವಾ ಪಾರ್ಟಿ-1 ಅಭ್ಯರ್ಥಿಗಳು ಕಣದಲ್ಲಿದ್ದು, 122 ಮಂದಿ ಪಕ್ಷೇತರರು ಸ್ಪರ್ಧಿಸಿದ್ದಾರೆ. ಒಟ್ಟು 420 ಮಂದಿ ಅಭ್ಯರ್ಥಿಗಳು ಕಣದಲ್ಲಿದ್ದಾರೆ.

ಕಲಬುರಗಿ: ಬಿಜೆಪಿ-47 , ಕಾಂಗ್ರೆಸ್‌-55,  ಜೆಡಿಎಸ್‌-45, ಎಎಪಿ-26, ಎಐಎಂಐಎಂ‌-20, ಎಸ್‌ಡಿಪಿಐ-10, ಬಿಎಸ್‌ಪಿ-6, ಸಿಪಿಐ(ಎಂ)-2, ಕರ್ನಾಟಕ ರಾಷ್ಟ್ರ ಸಮಿತಿ-4, ವೆಲ್‌ಫೇರ್‌ ಪಾರ್ಟಿ ಆಫ್‌ ಇಂಡಿಯಾ-1, ಇಂಡಿಯನ್‌ ಯೂನಿಯನ್‌-1 ಕ್ಷೇತ್ರಗಳಲ್ಲಿ ತಮ್ಮ ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸಿದ್ದು, 83 ಮಂದಿ ಪಕ್ಷೇತರರು ಸ್ಪರ್ಧೆಯಲ್ಲಿದ್ದಾರೆ. ಒಟ್ಟು 300 ಮಂದಿ ಅಭ್ಯರ್ಥಿಗಳು ಕಣದಲ್ಲಿದ್ದಾರೆ.

ನಗರ ಸಭೆ-ಪುರಸಭೆ: ಬೆಂಗಳೂರು ಗ್ರಾಮಾಂತರ (ದೊಡ್ಡಬಳ್ಳಾಪುರ ನಗರಸಭೆ-31 ವಾರ್ಡ್‌), ಚಿಕ್ಕಮಗಳೂರು (ತರೀಕೆರೆ ಪುರಸಭೆ-23 ವಾರ್ಡ್‌ (1 ಅವಿರೋಧ ಆಯ್ಕೆ) ) ಬೀದರ್‌ (ಬೀದರ್‌ ನಗರಸಭೆ-2 ವಾರ್ಡ್‌), ಶಿವಮೊಗ್ಗ (ಭದ್ರವತಿ ನಗರಸಭೆ-1)

ಇದನ್ನು ಓದಿ: ಬಿಬಿಎಂಪಿಯಲ್ಲಿ ಜನಪ್ರತಿನಿಧಿಗಳಿಲ್ಲ: ಇನ್ನೂ ಒಂದೂವರೆ ವರ್ಷ ಚುನಾವಣೆ ಇಲ್ಲ

ದೊಡ್ಡಬಳ್ಳಾಪುರ ನಗರ ಸಭೆ: ಬಿಜೆಪಿ-30, ಕಾಂಗ್ರೆಸ್‌-31, ಜೆಡಿಎಸ್‌-28, ಸಿಪಿಐ(ಎಂ)-2, ಬಿಎಸ್‌ಪಿ-3, ಎಸ್‌ಡಿಪಿಐ-2, ಕನ್ನಡ ಪಕ್ಷ-5, ಕರ್ನಾಟಕ ರಾಷ್ಟ್ರ ಸಮಿತಿ-2, ಉತ್ತಮ ಪ್ರಜಾಕೀಯ ಪಾರ್ಟಿ-1 ಕ್ಷೇತ್ರಗಳಲ್ಲಿ ಅಭ್ಯರ್ಥಿಗಳು ಸ್ಪರ್ಧಿಸಿದ್ದು, 15 ಮಂದಿ ಪಕ್ಷೇತರರು ಕಣದಲ್ಲಿದ್ದಾರೆ. ಒಟ್ಟು 119 ಮಂದಿ ಅಭ್ಯರ್ಥಿಗಳು ಸ್ಪರ್ಧೆಯಲ್ಲಿದ್ದಾರೆ.

ತರೀಕೆರೆ ಪುರಸಭೆ: ಕಾಂಗ್ರೆಸ್‌-22, ಬಿಜೆಪಿ-14, ಜೆಡಿಎಸ್‌-2 ಮತ್ತು 41 ಪಕ್ಷೇತರರು ಸ್ಪರ್ಧೆಯಲ್ಲಿದ್ದಾರೆ. ಒಟ್ಟು 79 ಮಂದಿ ಅಭ್ಯರ್ಥಿಗಳು ಕಣದಲ್ಲಿದ್ದಾರೆ.

ಬೀದರ್‌ ನಗರಸಭೆ: ಕಾಂಗ್ರೆಸ್‌, ಬಿಜೆಪಿ, ಜೆಡಿಎಸ್‌, ಬಿಎಸ್‌ಪಿ, ಎಐಎಂಐಎಂ 2 ಕ್ಷೇತ್ರಗಳಲ್ಲಿ ಸ್ಪರ್ಧಿಸಿದ್ದು, 2 ಪಕ್ಷೇತರರು ಸೇರಿ 12 ಮಂದಿ ಅಭ್ಯರ್ಥಿಗಳು ಕಣದಲ್ಲಿದ್ದಾರೆ.

ಭದ್ರಾವತಿ ನಗರಸಭೆ: ಬಿಜೆಪಿ, ಕಾಂಗ್ರೆಸ್‌, ಜೆಡಿಎಸ್‌, ತಲಾ 1 ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸಿದೆ.

ಉಪ ಚುನಾವಣೆಗಳು

ಮೈಸೂರು ಮಹಾನಗರ ಪಾಲಿಕೆ- 1 ಕ್ಷೇತ್ರ,

ಬಾಗಲಕೋಟೆ ಜಿಲ್ಲೆಯ ಮುಧೋಳ ನಗರಸಭೆ- 1 ಕ್ಷೇತ್ರ, ಬೀಳಗಿ ಪಟ್ಟಣ ಪಂಚಾಯತಿ-1 ಕ್ಷೇತ್ರ, ಮಹಾಲಿಂಗಪೂರ ಪುರಸಭೆ – 1 ಕ್ಷೇತ್ರ, ತೇರದಾಳ ಪುರಸಭೆ- 1 ಕ್ಷೇತ್ರ.

ಕೊಡುಗು ಜಿಲ್ಲೆಯ ಸೋಮುವಾರಪೇಟೆ ಪಟ್ಟಣ ಪಂಚಾಯಿತಿ 2 ಕ್ಷೇತ್ರ ಹಾಗೂ ವಿರಾಜಪೇಟೆ ಪಟ್ಟಣ ಪಂಚಾಯಿತಿ 1 ಕ್ಷೇತ್ರ.

ಉತ್ತರ ಕನ್ನಡ ಜಿಲ್ಲೆಯ ದಾಂಡೇಲಿ ನಗರಸಭೆ – 1 ಕ್ಷೇತ್ರ.
ಕಲಬುರಗಿ ಜಿಲ್ಲೆ ಚಿತ್ತಾಪುರದ ವಾಡಿ ಪುರಸಭೆ – 2 ಕ್ಷೇತ್ರ.
ಬೀದರ್‌ ಜಿಲ್ಲೆಯ ಬಸವ ಕಲ್ಯಾಣ ನಗರಸಭೆ – 2 ಕ್ಷೇತ್ರ.
ಕೋಲಾರ ಜಿಲ್ಲೆಯ ಕೆ.ಜಿ.ಎಫ್ ನಗರಸಭೆ – 1 ಕ್ಷೇತ್ರ.
ದಾವಣಗೆರೆ ಜಿಲ್ಲೆ ಹರಹರ ನಗರಸಭೆ  – 1 ಕ್ಷೇತ್ರ
ಬೆಳಗಾವಿ ಜಿಲ್ಲೆಯ ರಾಯಭಾಗ ಪಟ್ಟಣ ಪಂಚಾಯತಿ 1 ಕ್ಷೇತ್ರ.
ಬೆಳಗಾವಿ ಜಿಲ್ಲೆ ಸವದತ್ತಿ ಪುರಸಭೆ – 1 ಕ್ಷೇತ್ರ
ಕೊಪ್ಪಳ ಜಿಲ್ಲೆ ಕುಷ್ಟಗಿ ಪುರಸಭೆ – 1 ಕ್ಷೇತ್ರ
ಗದಗ ಜಿಲ್ಲೆಯ ಮುಳುಗುಂದ ಪಟ್ಟಣ ಪಂಚಾಯಿತಿ – 1 ಕ್ಷೇತ್ರ
ರಾಮನಗರ ಜಿಲ್ಲೆಯ ನಗರಸಭೆ – 1 ಕ್ಷೇತ್ರ.
ವಿಜಯಪುರ ಜಿಲ್ಲೆಯ ಬಸವನ ಬಾಗೇವಾಡಿ ಪುರಸಭೆ – 1 ಕ್ಷೇತ್ರ

ಮೇಲಿನ ಕ್ಷೇತ್ರಗಳಿಗೆ ಉಪಚುನಾವಣೆಯು ನಡೆಯಲಿದ್ದು, ಬಿಜೆಪಿ, ಕಾಂಗ್ರೆಸ್‌ ಹಾಗೂ ಜೆಡಿಎಸ್‌ ಪಕ್ಷಗಳು ಬಹುತೇಕ ಕ್ಷೇತ್ರಗಳಲ್ಲಿ ತಮ್ಮ ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸಿದ್ದು ಪಕ್ಷೇತರರು ಸಹ ಸ್ಪರ್ಧೆಯಲ್ಲಿದ್ದಾರೆ. ಈ ಮೇಲಿನ ಕ್ಷೇತ್ರಗಳಲ್ಲಿ ಒಟ್ಟು 59 ಮಂದಿ ಅಭ್ಯರ್ಥಿಗಳು ಕಣದಲ್ಲಿದ್ದಾರೆ.

ಚುನಾವಣಾ ಆಯೋಗವು ಮತದಾನ ನಡೆಯುವ ಪ್ರದೇಶಗಳಲ್ಲಿ ಮತದಾನಕ್ಕೆ ಅನುಕೂಲವಾಗುವಂತೆ ಎಲ್ಲಾ ಸರ್ಕಾರಿ ಕಚೇರಿಗಳು, ಶಾಲಾ-ಕಾಲೇಜುಗಳು, ಅನುದಾನಿತ ಶಿಕ್ಷಣ ಸಂಸ್ಥೆಗಳು, ಸರ್ಕಾರಿ ಸ್ವಾಮ್ಯದ ಸಂಸ್ಥೆಗಳಿಗೆ ಸೆಪ್ಟೆಂಬರ್ 3ರಂದು ಸಾರ್ವತ್ರಿಕ ರಜೆ ಘೋಷಸಿದೆ.

ಚುನಾವಣೆ ನಡೆಯುವ ವಾರ್ಡ್‌ನ ವ್ಯಾಪ್ತಿಯಲ್ಲಿರುವ ಎಲ್ಲಾ ಸಾರ್ವಜನಿಕ ಉದ್ದಿಮೆಗಳು, ವ್ಯವಹಾರಿಕ ಸಂಸ್ಥೆಗಳು, ಖಾಸಗಿ ಕಂಪನಿಗಳು ಮತ್ತು ಇತರ ಸಂಸ್ಥೆಗಳಲ್ಲಿ ಖಾಯಂ ಆಗಿ ಅಥವ ದಿನಗೂಲಿ ಮೇಲೆ ಕೆಲಸ ನಿರ್ವಹಿಸುತ್ತಿರುವ ನೌಕರರಿಗೆ ಮತದಾನ ಮಾಡಲು ಅನುಕೂಲವಾಗುವಂತೆ ವೇತನ ಸಹಿತ ರಜೆ ನೀಡಲು ಸೂಚನೆ ನೀಡಲಾಗಿದೆ.

ಇದನ್ನು ಓದಿ: ಪಾಲಿಕೆ, ಸ್ಥಳೀಯ ಸಂಸ್ಥೆ ಚುನಾವಣೆ: ಬಿಜೆಪಿ-ಕಾಂಗ್ರೆಸ್‌ನಲ್ಲಿ ಬಂಡಾಯದ್ದೆ ಚಿಂತೆ

ಚುನಾವಣೆ ನಡೆಯುವ ವಾರ್ಡ್‌ಗಳ ವ್ಯಾಪ್ತಿಯ ಹೊರಗಡೆ ಕೆಲಸ ನಿರ್ವಹಣೆ ಮಾಡುತ್ತಿದ್ದು, ಆದರೆ ಚುನಾವಣೆ ನಡೆಯುವ ವಾರ್ಡ್‌ನ ವ್ಯಾಪ್ತಿಯಲ್ಲಿ ನೋಂದಾಯಿತ ಮತದಾರರಾಗಿರುವವರಿಗೆ ಮತದಾನ ಮಾಡಲು ಅನುಕೂಲವಾಗುವಂತೆ ಪ್ರಜಾಪ್ರತಿನಿಧಿ ಕಾಯ್ದೆ 1951ರ ಸೆಕ್ಷನ್ 135-ಬಿ ಅಡಿಯಲ್ಲಿ ವೇತನ ಸಹಿತ ರಜೆ ನೀಡಲು ಆದೇಶಿಸಲಾಗಿದೆ.

ಆದರೆ ಈ ರಜೆಯು ತುರ್ತು ಸೇವೆಗಳ ಮೇಲೆ ಇರುವ ಸರ್ಕಾರಿ ಅಧಿಕಾರಿಗಳಿಗೆ ಅನ್ವಯವಾಗುವುದಿಲ್ಲ. ಆದಾಗ್ಯೂ ತುರ್ತು ಸೇವೆಯಡಿ ಕೆಲಸ ಮಾಡುವ ನೌಕರರಿಗೆ ಮತ ಚಲಾಯಿಸಲು ಅನುಕೂಲವಾಗುವಂತೆ ವ್ಯವಸ್ಥೆ ಮಾಡತಕ್ಕದ್ದು. ಚುನಾವಣಾ ಕಾರ್ಯಗಳಿಗೆ ನಿಯೋಜಿಸಲ್ಪಟ್ಟ ಎಲ್ಲಾ ಸರ್ಕಾರಿ ನೌಕರರು ಚುನಾವಣಾ ಕಾರ್ಯಕ್ಕೆ ಹಾಜರಾಗತಕ್ಕದ್ದು.

Donate Janashakthi Media

Leave a Reply

Your email address will not be published. Required fields are marked *