ಪ್ಯಾಲೆಸ್ತೀನ್ | ಕನಿಷ್ಠ 22 ಪತ್ರಕರ್ತರ ಸಾವು; ಇಸ್ರೇಲಿ ದಾಳಿ ಹೆಚ್ಚಿನ ಸಾವಿಗೆ ಕಾರಣ

ನ್ಯೂಯಾರ್ಕ್‌: ಇಸ್ರೇಲ್-ಪ್ಯಾಲೆಸ್ತೀನ್ ಹಿಂಸಾಚಾರದಲ್ಲಿ ಕನಿಷ್ಠ 22 ಪತ್ರಕರ್ತರು ಸಾವನ್ನಪ್ಪಿದ್ದಾರೆ, ಅವರಲ್ಲಿ ಹೆಚ್ಚಿನವರು ಗಾಜಾದ ಮೇಲೆ ಇಸ್ರೇಲ್ ನಡೆಸಿದ ದಾಳಿಗಳ ವೇಳೆ ಮೃತಪಟ್ಟಿದ್ದಾರೆ ಎಂದು ಕಮಿಟಿ ಟು ಪ್ರೊಟೆಕ್ಟ್‌ ಜರ್ನಲಿಸ್ಟ್ಸ್‌(ಸಿಪಿಜೆ)ಯ ವರದಿ ಹೇಳಿದೆ. ಮೃತಪಟ್ಟವರಲ್ಲಿ 18 ಜನರು ಪ್ಯಾಲೆಸ್ತೀನಿಯರಾಗಿದ್ದು, ಮೂವರು ಇಸ್ರೇಲಿಗಳು ಮತ್ತು ಒಬ್ಬ ಲೆಬನಾನಿನ ಪತ್ರಕರ್ತರು ಸೇರಿದ್ದಾರೆ ಎಂದು ಉಲ್ಲೇಖಿಸಿದೆ.

ಈ 22 ಮಂದಿಯಲ್ಲಿ ಮೂವರು ಇಸ್ರೇಲಿ ಪತ್ರಕರ್ತರು ಹಮಾಸ್‌ನ ದಾಳಿಯಲ್ಲಿ ಸಾವನ್ನಪ್ಪಿದ್ದಾರೆ ಎಂದು ವರದಿಯು ಉಲ್ಲೇಖಿಸಿದೆ. ಮೃತಪಟ್ಟ ಎಲ್ಲಾ ಪತ್ರಕರ್ತರು ಸಾಯುವ ಕ್ಷಣದಲ್ಲಿ ಕರ್ತವ್ಯದಲ್ಲಿದ್ದರೇ ಎಂಬ ಬಗ್ಗೆ ಸಿಪಿಜೆ ವರದಿಯು ಉಲ್ಲೇಖಿಸಿಲ್ಲ. ಇಷ್ಟೆ ಅಲ್ಲದೆ 8 ಪತ್ರಕರ್ತರು ಗಾಯಗೊಂಡಿದ್ದು, 3 ಪತ್ರಕರ್ತರು ಕಾಣೆಯಾಗಿದ್ದಾರೆ ಅಥವಾ ಬಂಧನದಲ್ಲಿದ್ದಾರೆ ಎಂದು ವರದಿಯಾಗಿದೆ ಎಂದು ಅದು ಹೇಳಿದೆ.

ಇದನ್ನೂ ಓದಿ: ಆಸ್ಪತ್ರೆ ಮೇಲೆ ಬಾಂಬ್ ದಾಳಿ | ಇಸ್ರೇಲ್ ವಿರುದ್ಧ ವಿಶ್ವದಾದ್ಯಂತ ಬೃಹತ್ ಪ್ರತಿಭಟನೆ

ಈ ನಡುವೆ, ಯುರೋಪ್‌ನ ಅತಿದೊಡ್ಡ ಸುದ್ದಿ ಸಂಗ್ರಾಹಕ ಅಪ್ಲಿಕೇಶನ್ ಮತ್ತು ಜರ್ಮನ್ ಮೂಲದ ಮಾಧ್ಯಮ ಆಕ್ಸೆಲ್ ಸ್ಪ್ರಿಂಗರ್‌ನ ಅಂಗಸಂಸ್ಥೆಯಾದ  ಅಪ್‌ಡೇ ತನ್ನ ಉದ್ಯೋಗಿಗಳಿಗೆ ಇಸ್ರೇಲಿ ದೃಷ್ಟಿಕೋನಕ್ಕೆ ಆದ್ಯತೆ ನೀಡಲು ಮತ್ತು ತಮ್ಮ ಸುದ್ದಿಗಳಲ್ಲಿ ಪ್ಯಾಲೆಸ್ತೀನ್‌ ನಾಗರಿಕರ ಸಾವುಗಳನ್ನು ಕಡಿಮೆ ಮಾಡಲು ನಿರ್ದೇಶನಗಳನ್ನು ನೀಡಿದೆ ಎಂದು ಹೇಳಲಾಗಿದೆ ಎಂಬುವುದು ವರದಿಯಾಗಿದೆ.

“ಪತ್ರಕರ್ತರು ಬಿಕ್ಕಟ್ಟಿನ ಸಮಯದಲ್ಲಿ ಪ್ರಮುಖ ಕೆಲಸ ಮಾಡುವ ನಾಗರಿಕರಾಗಿದ್ದು, ಅವರು ಗುರಿಯಾಗಬಾರದು. ಈ ಹೃದಯವಿದ್ರಾವಕ ಸಂಘರ್ಷವನ್ನು ವರದಿ ಮಾಡಲು ಪ್ರದೇಶದಾದ್ಯಂತ ಪತ್ರಕರ್ತರು ದೊಡ್ಡ ತ್ಯಾಗ ಮಾಡುತ್ತಿದ್ದಾರೆ. ಯುದ್ಧ ಮಾಡುತ್ತಿರುವ ಎರಡು ಕಡೆಯವರು ಅವರ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ಕ್ರಮಗಳನ್ನು ತೆಗೆದುಕೊಳ್ಳಬೇಕು” ಎಂಧು ಸಿಪಿಜೆ ಒತ್ತಿ ಹೇಳಿದೆ.

ಇದನ್ನೂ ಓದಿ: ಗಾಜಾ ಬೆಂಬಲಿಸಿ 10 ಸಾವಿರ ಯಹೂದಿಗಳ ರ‍್ಯಾಲಿ | ಅಮೆರಿಕ – ಇಸ್ರೇಲ್ ವಿರುದ್ಧ ಆಕ್ರೋಶ; ಬಂಧನ

ಪತ್ರಕರ್ತರ ಮೇಲೆ ದಾಳಿಗಳು, ಬಂಧನಗಳು, ಬೆದರಿಕೆಗಳು ಮತ್ತು ಸೆನ್ಸಾರ್ಶಿಪ್ ಮುಂದುವರೆದಿದೆ ಎಂದು ಸಿಪಿಜೆ ಹೇಳಿದೆ. “ಪತ್ರಕರ್ತರು ಕೊಲ್ಲಲ್ಪಟ್ಟರು, ಕಾಣೆಯಾದರು, ಬಂಧನಕ್ಕೊಳಗಾದರು, ಗಾಯಗೊಂಡರು ಅಥವಾ ಬೆದರಿಕೆಗೆ ಒಳಗಾದರು. ಅಲ್ಲದೆ ಮಾಧ್ಯಮ ಕಚೇರಿಗಳು ಮತ್ತು ಪತ್ರಕರ್ತರ ಮನೆಗಳಿಗೆ ಹಾನಿಯಾದ ಹಲವಾರು ದೃಢೀಕರಿಸದ ವರದಿಗಳನ್ನು CPJ ತನಿಖೆ ನಡೆಸುತ್ತಿದೆ” ಎಂದು ಅದು ತನ್ನ ವರದಿಯಲ್ಲಿ ಹೇಳಿದೆ.

ಅಕ್ಟೋಬರ್ 7 ರಂದು ಇಸ್ರೇಲ್ ವಿರುದ್ಧ ಹಮಾಸ್ ತನ್ನ ದಾಳಿ ಪ್ರಾರಂಭಿಸಿದಾಗಿನಿಂದ ಇಸ್ರೇಲ್-ಗಾಜಾ ಸಂಘರ್ಷ ಪ್ರಾರಂಭವಾಗಿತ್ತು. ಅಕ್ಟೋಬರ್ 20 ರ ಹೊತ್ತಿಗೆ ಎರಡೂ ಕಡೆಗಳಲ್ಲಿ 4,000 ಕ್ಕೂ ಹೆಚ್ಚು ಜನರು ಮೃತಪಟ್ಟಿದ್ದಾರೆ. ಮಂಗಳವಾರ ಇಸ್ರೇಲ್ ನಡೆಸಿದ ವಾಯು ದಾಳಿಯಲ್ಲಿ ಗಾಜಾದ ಆಸ್ಪತ್ರೆಯಲ್ಲಿದ್ದ 500ಕ್ಕೂ ಹೆಚ್ಚು ಪ್ಯಾಲೆಸ್ತೀನಿಯರು ಮೃತಪಟ್ಟಿದ್ದಾರೆ.

ವಿಡಿಯೊ ನೋಡಿ: “ಇಸ್ರೇಲ್ ಪ್ಯಾಲೆಸ್ತೀನ್ ಯುದ್ಧ”ದ ಹಿನ್ನೆಲೆ ಏನು? Janashakthi Media

Donate Janashakthi Media

Leave a Reply

Your email address will not be published. Required fields are marked *