ಶಿವಮೊಗ್ಗದಲ್ಲಿ ಅರಮನೆ ಎಮಕಬ ಮತಕೇಂದ್ರ

ಶಿವಮೊಗ್ಗ: ಶಿವಮೊಗ್ಗದಲ್ಲಿ ಅರಮನೆ ಎಂದು ಮತದಾನ ಕೇಂದ್ರ ರಚನೆಯಾಗಿದೆ. ಶಿವಮೊಗ್ಗದ ಜಿಲ್ಲಾ ಪಂಚಾಯತಿಯ ಮತದಾನ ಕೇಂದ್ರದಲ್ಲಿ ವಿಭಿನ್ನ ಪ್ರಯತ್ನ ನಡೆದಿದೆ. ಮತದಾನಕ್ಕೆ ಬರುವವರಿಗೆ ಇಲ್ಲಿ ವಿಶೇಷ ವೆಲ್ ಕಂ ಮಾಡಲಾಗುತ್ತಿದೆ.

ಮತದಾರರೇ ಪ್ರಭು ಎಂಬ ಘೋಷಣೆಯೊಂದಿಗೆ ಮತದಾರರನ್ನು ಸೆಳೆಯಲು ವಿಭಿನ್ನ ಪ್ರಯತ್ನ ನಡೆದಿದೆ. ಪ್ಯಾಲೇಸ್ ರೀತಿಯಲ್ಲಿ ಮತದಾನ ಕೇಂದ್ರ ಸಿದ್ದಗೊಂಡಿದೆ. ಮತದಾನ ನಂತರ ರಾಜ ಸಿಂಹಾಸದಲ್ಲಿ ಕುಳಿತು ಫೋಟೋ ಸೆಲ್ಫಿ ತೆಗೆಸಿಕೊಳ್ಳಲು ಅವಕಾಶ ಕಲ್ಪಿಸಲಾಗಿದೆ.

ಇದನ್ನೂ ಓದಿ: ಪ್ರಜ್ವಲ್ ರೇವಣ್ಣ ವಿರುದ್ಧ ಬ್ಲೂ ಕಾರ್ನರ್ ನೊಟೀಸ್ ಜಾರಿ: ಏನಿದು ಬ್ಲೂ ಕಾರ್ನರ್ ನೊಟೀಸ್: ರೆಡ್‌ಕಾರ್ನರ್‌ಗಿಂತ ಈ ನೊಟೀಸ್ ಎಷ್ಟು ಭಿನ್ನ?

ದುರ್ಗಿಗುಡಿ ಪ್ರೌಢಶಾಲೆಯಲ್ಲಿ  ಬೂತ್ ನಂಬರ್ 120 ನಲ್ಲಿ ಮತಯಂತ್ರ ಕೈಕೊಟ್ಟಪರಿಣಾಮ ಅರ್ಧ ಗಂಟೆ ತಡವಾಗಿ ಮತದಾನ ಆರಂಭವಾಗಿದೆ. ಎಲ್ಲೆಡೆ 7 ಗಂಟೆಗೆ ಆರಂಭವಾದರೆ ಬೂತ್ ನಂಬರ್ 120 ರಲ್ಲಿ 7-30 ಕ್ಕೆ ಮತದಾನ ಆರಂಭವಾಗಿದೆ.

ಪ್ರಾಚೀನ ಕಾಲದ ಉಡುಗೆ ತೊಟ್ಟ ಚುನಾವಣಾಧಿಕಾರಿಗಳು ಮತಕೇಂದ್ರಕ್ಕೆ ಹಾಜರಾಗಿದ್ದಾರೆ. ಮಾದರಿ ಮತಗಟ್ಟೆಯಾಗಿ ಈ ಜಿಲ್ಲಾ ಪಂಚಾಯತಿ ಮತಗಟ್ಟೆಯನ್ನು ರಚಿಸಲಾಗಿದೆ.

ಮಾಜಿ ಸಿಎಂ ಯಡಿಯೂರಪ್ಪ, ಸಂಸದ ರಾಘವೇಂದ್ರ, ಬಿಜೆಪಿ ರಾಜ್ಯಾಧ್ಯಕ್ಷ ವಿಜೇಂದ್ರ ಶಿಕಾರಿಪುರದಲ್ಲಿ ಮತಚಲಾಯಿಸಿದ್ದಾರೆ.ಕೆ.ಎಸ್ ಈಶ್ವರಪ್ಪಸೈನ್ಸ್ ಮೈದಾನದ ಸರ್ಕಾರಿ ಪೂರ್ವ ಕಾಲೇಜಿನಲ್ಲಿ ಮತಚಲಾಯಿಸಲಿದ್ದಾರೆ.

ಇದನ್ನೂ ನೋಡಿ: ಪೆನ್‌ಡ್ರೈವ್‌ ಪ್ರಕರಣ – ಮಹಿಳೆಯರ ಘನತೆಗೆ ಕುಂದುಂಟು ಮಾಡುತ್ತಿರುವವರ ಮೇಲೆ ಕ್ರಮಕ್ಕೆ ಆಗ್ರಹ Janashakthi Media

Donate Janashakthi Media

Leave a Reply

Your email address will not be published. Required fields are marked *