ಪಾಕಿಸ್ತಾನ : ವಾಯುನೆಲೆ ಮೇಲೆ ಉಗ್ರರ ದಾಳಿ: 3 ಯುದ್ಧ ವಿಮಾನಗಳಿಗೆ ಹಾನಿ

ಇಸ್ಲಾಮಾಬಾದ್: ಪಾಕಿಸ್ತಾನದ ಪಂಜಾಬ್‌ ಪ್ರಾಂತ್ಯದಲ್ಲಿನ ಮಿಯಾನ್‌ವಾಲಿಯಲ್ಲಿರುವ ವಾಯು ಪಡೆಯ ನೆಲೆ ಮೇಲೆ ಉಗ್ರರು ಶನಿವಾರ ಬೆಳಿಗ್ಗೆ ದಾಳಿ ನಡೆಸಿದ್ದಾರೆ. ಅಲ್ಲಿ ನಿಲ್ಲಿಸಲಾಗಿದ್ದ ಮೂರು ವಿಮಾನಗಳಿಗೆ ಹಾನಿಯಾಗಿದೆ ಎಂದು ಅಲ್ಲಿನ ಸೇನಾ ಮೂಲಗಳು ತಿಳಿಸಿವೆ.

ಹಲವು ಆತ್ಮಾಹುತಿ ಬಾಂಬ್ ದಾಳಿಕೋರರು ಇಂದು ಬೆಳಿಗ್ಗೆ ವಾಯು ನೆಲೆಗೆ ನುಗ್ಗಿದ್ದಾರೆ. ಇದಕ್ಕೆ ಪ್ರತಿಯಾಗಿ ನಡೆಸಿದ ಗುಂಡಿನ ದಾಳಿಯಲ್ಲಿ ಮೂವರು ಉಗ್ರರನ್ನು ಹತ್ಯೆ ಮಾಡಲಾಗಿದೆ ಎಂದು ಪಾಕಿಸ್ತಾನ ವಾಯು ಪಡೆ (ಪಿಎಎಫ್) ತಿಳಿಸಿದೆ. ಭಾರಿ ಶಸ್ತ್ರಸಜ್ಜಿತರಾದ 5-6 ಮಂದಿ ಜನರ ಗುಂಪು ಶನಿವಾರ ಮುಂಜಾನೆ ತೀವ್ರ ಸ್ವರೂಪದ ದಾಳಿ ಆರಂಭಿಸಿದೆ. ಇದರಿಂದ ಎರಡೂ ಕಡೆಗಳ ನಡುವೆ ಗುಂಡಿನ ಚಕಮಕಿ ನಡೆದಿದೆ.

ಈ ಘಟನೆಯನ್ನು ಖಚಿತಪಡಿಸಿರುವ ಪಿಎಎಫ್, ಉಗ್ರರು ವಾಯು ನೆಲೆ ಪ್ರವೇಶಿಸುವುದಕ್ಕೂ ಮುನ್ನವೇ ಅವರ ಪ್ರಯತ್ನವನ್ನು ವಿಫಲಗೊಳಿಸಲಾಗಿದೆ ಎಂದು ಹೇಳಿದೆ.

ಇದನ್ನೂ ಓದಿ: ಗಾಜಾ ಯುದ್ಧ ಇಡೀ ಪ್ರದೇಶಕ್ಕೆ ವ್ಯಾಪಿಸುವ ಅಪಾಯ ಇದೆಯಾ?

“ನವೆಂಬರ್ 4, 2023ರ ಮುಂಜಾನೆ ಪಾಕಿಸ್ತಾನ ವಾಯು ಪಡೆಯ ಮಿಯಾನ್‌ವಾಲಿ ತರಬೇತಿ ವಾಯು ನೆಲೆಯು ವಿಫಲ ಭಯೋತ್ಪಾದನಾ ದಾಳಿಗೆ ಒಳಗಾಗಿದೆ. ಇದಕ್ಕೆ ಪಡೆಗಳು ಪರಿಣಾಮಕಾರಿಯಾಗಿ ಪ್ರತಿಕ್ರಿಯೆ ನೀಡಿದೆ. ಈ ಪ್ರಯತ್ನವನ್ನು ವಿಫಲಗೊಳಿಸಿದೆ ಮತ್ತು ತಡೆದು, ಸಿಬ್ಬಂದಿ ಹಾಗೂ ಆಸ್ತಿಯ ಸುರಕ್ಷತೆ ಮತ್ತು ಭದ್ರತೆಯನ್ನು ಖಾತರಿಗೊಳಿಸಿವೆ ಎಂದು ತಿಳಿಸಿದೆ.

ಅಸಾಧಾರಣ ಧೈರ್ಯ ಹಾಗೂ ಸಕಾಲಿಕ ಪ್ರತಿಕ್ರಿಯೆ ಪ್ರದರ್ಶಿಸುವ ಮೂಲಕ ಮೂವರು ಉಗ್ರರನ್ನು ವಾಯು ನೆಲೆ ಪ್ರವೇಶಿಸುವುದಕ್ಕೂ ಮುನ್ನವೇ ಹೊಡೆದುರುಳಿಸಲಾಗಿದೆ. ಸೇನಾ ಪಡೆಗಳ ಸಕಾಲಿಕ ಮತ್ತು ಪರಿಣಾಮಕಾರಿ ಪ್ರತಿಕ್ರಿಯೆ ಕಾರಣದಿಂದ ಉಳಿದ ಮೂವರು ಉಗ್ರರನ್ನು ಪ್ರತ್ಯೇಕಗೊಳಿಸಲಾಗಿದೆ ಎಂದು ಹೇಳಿದೆ.

ಕಾರ್ಯಾಚರಣೆ ಮುಂದುವರಿದ್ದು ಶೀಘ್ರದಲ್ಲಿ ಯಶಸ್ವಿಯಾಗಿ ಪೂರ್ಣಗೊಳ್ಳಲಿದೆ ಎಂದು ಸೇನೆ ವಿಶ್ವಾಸ ವ್ಯಕ್ತಪಡಿಸಿದೆ.

ಬಲೊಚಿಸ್ತಾನ ಹಾಗೂ ಖೈಬರ್‌ ಪ್ರಾಂತ್ಯದಲ್ಲಿ 17 ಜನರ ಬಲಿ ಪಡೆದ ಸರಣಿ ಭಯೋತ್ಪಾದಕ ಕೃತ್ಯ ನಡೆದ ಕೆಲವೇ ಗಂಟೆಗಳ ಅಂತರದಲ್ಲಿ ವಾಯು ನೆಲೆ ಮೇಲಿನ ದಾಳಿ ನಡೆದಿದೆ.

ವಿಡಿಯೋ ನೋಡಿ: ಪ್ಯಾಲಿಸ್ತೇನ್‌ ಪರ ಪ್ರತಿಭಟನೆ ಮಾಡುವುದು ಅಪರಾಧವೆ? Janashakthi Media

Donate Janashakthi Media

Leave a Reply

Your email address will not be published. Required fields are marked *