ಕಲಬುರಗಿ: ತೊಗರಿ, ಹೆಸರು, ಜೋಳ ವನ್ನು ನ್ಯಾಯಬೆಲೆ ಅಂಗಡಿ ಮೂಲಕ ವಿತರಿಸಲಾಗುವುದು ಎಂದು ಆಹಾರ ಸಚಿವ ಉಮೇಶ್ ಕತ್ತಿ ತಿಳಿಸಿದ್ದಾರೆ.
ಈ ಭಾಗದಲ್ಲಿ ಹೆಚ್ಚಾಗಿ ಬೆಳೆಯುತ್ತಿರುವ ಜೋಳ, ತೊಗರಿ ಹಾಗೂ ಹೆಸರು ಕಾಳುಗಳನ್ನು ಖರೀದಿಸಿ ನ್ಯಾಯಬೆಲೆ ಅಂಗಡಿ ಮೂಲಕ ವಿತರಿಸಲು ಕ್ರಮಕೈಗೊಳ್ಳುವುದಾಗಿ ಕತ್ತಿ ತಿಳಿಸಿದ್ದಾರೆ. ಅವರು ಕಲಬುರಗಿ ನಗರದ ಪೊಲೀಸ್ ಪೆರೇಡ್ ಮೈದಾನದಲ್ಲಿ 72ನೇ ಗಣರಾಜ್ಯೋತ್ಸವ ಸಮಾರಂಭದಲ್ಲಿ ಭಾಗವಹಿಸಿದ ಬಳಿಕ ಸುದ್ದಿಗಾರರೊಂದಿಗೆ ಅವರು ಮಾತನಾಡುತ್ತಿದ್ದರು.
ಹಾಗೆಯೇ ದಕ್ಷಿಣ ಕರ್ನಾಟಕದ ಪ್ರಮುಖ ಆಹಾರ ಬೆಳೆಯಾಗಿರುವ ರಾಗಿ ಧಾನ್ಯವನ್ನೂ ಪಡಿತರಕ್ಕೆ ಸೇರ್ಪಡೆ ಮಾಡಲಿದ್ದು, ಏಪ್ರಿಲ್ 1 ರಿಂದ ನ್ಯಾಯಬೆಲೆ ಅಂಗಡಿಗಳ ಮೂಲಕ ಈ ಆಹಾರ ಧಾನ್ಯಗಳ ವಿತರಣೆ ಮಾಡಲು ಚಿಂತನೆ ನಡೆದಿದೆ ಎಂದು ಹೇಳಿದ್ದಾರೆ. ಇದು ಜಾರಿಯಾದರೆ ಅಕ್ಕಿ, ರಾಗಿ ಜೊತೆ ತೊಗರಿ, ಹೆಸರು, ಜೋಳ ಪಡಿತರಕ್ಕೆ ಸೇರ್ಪಡೆಯಾಗಲಿವೆ.