ಪದವಿ ಶಿಕ್ಷಣಕ್ಕೆ ಹೊಸ ಪಠ್ಯ : ಶಿಕ್ಷಣದ ಮತೀಯವಾದಿಕರಣಕ್ಕೆ ದಾರಿ ಮಾಡಿಕೊಡಲಿದೆಯೇ?

ಗುರುರಾಜ ದೇಸಾಯಿ

ವಿಶ್ವವಿದ್ಯಾಲಯಗಳಲ್ಲಿ ಹೆಚ್ಚುತ್ತಿರುವ ಮತೀಯವಾದ ಒಂದು ಕಡೆಯಾದರೆ ಮತ್ತೊಂದೆಡೆ ಸರಕಾರ ಶಾಲಾ ಕಾಲೇಜುಗಳ  ಪಠ್ಯಕ್ರಮಗಳ ತಿರುಚುವಿಕೆ, ಪಠ್ಯಗಳ ಬದಲಾವಣೆ ಮೂಲಕ  ಇತಿಹಾಸದ ಜಾತ್ಯತೀತ ಸತ್ಯಗಳನ್ನು ಕಿತ್ತುಹಾಕುವುದು ಹೆಚ್ಚಾಗುತ್ತಿರುವುದು ಆತಂಕಕಾರಿ ವಿಚಾರವಾಗಿದೆ.  ಬಲಪಂಥೀಯ ಸರಕಾರವು ಶಿಕ್ಷಣವನ್ನು ಮತೀಯವಾದದೆಡೆಗೆ ಕೊಂಡೊಯ್ಯಲು ತನ್ನ ಯೋಜನೆಯನ್ನು ಜಾರಿಗೊಳಿಸಲು ಸಜ್ಜಾಗಿ ನಿಂತಿದೆ. ಅದಕ್ಕೆ ಅವರು ಈಗ ಆಯ್ಕೆ ಮಾಡಿಕೊಂಡ ದಾರಿಯೇ ಪದವಿ ಇತಿಹಾಸ ಪಠ್ಯಕ್ರಮ ರೂಪಿಸುವ ದಸ್ತಾವೇಜು.

ಪದವಿ ಇತಿಹಾಸ ಪಠ್ಯಕ್ರಮಕ್ಕೆ ಯುಜಿಸಿ ಒಂದು ದಸ್ತಾವೇಜು (draft) ಸಿದ್ದಪಡಿಸಿದೆ. ಅನೇಕ ಶಿಕ್ಷಕರು ಮತ್ತು ವಿದ್ಯಾರ್ಥಿಗಳು ಇದನ್ನು ‘ಶಿಕ್ಷಣದ ಮತೀಯವಾದ ಮತ್ತು ವಿರೂಪಗೊಳಿಸುವಿಕೆ ‘ ಎಂದು ಆತಂಕ ವ್ಯಕ್ತಪಡಿಸಿದ್ದಾರೆ. ಮುಸ್ಲಿಂ ಆಡಳಿತದ ಕಾಲಘಟ್ಟವನ್ನು ಮತ್ತು ಅದರ ಪ್ರಾಮುಖ್ಯತೆಯನ್ನು ಕುಗ್ಗಿಸಿ ವೇದ ಕಾಲ ಮತ್ತು ಹಿಂದೂ ದಾರ್ಮಿಕ ಕಾಲದ ಕುರಿತಾದ  ಅದ್ಯಾಯಗಳನ್ನು  ಸೇರಿಸುತ್ತಿದ್ದಾರೆ ಎಂಬ ಆರೋಪಗಳು ಕೇಳಿ ಬಂದಿವೆ.

ಆಯೋಗವು ತನ್ನ ಅಂತರ್ಜಾಲ ತಾಣದಲ್ಲಿ ಫೆಬ್ರವರಿ 15ರಂದು ಬಿ. ಎ. (ಇತಿಹಾಸ) ದಲ್ಲಿ ಕಲಿಕೆಯ ಆದಾರಿತ ‘curriculum framework’ ನ ದಸ್ತಾವೇಜನ್ನು ಪ್ರಕಟಿಸಿದ್ದಾರೆ. ಮತ್ತು ಫೆಬ್ರವರಿ 28ರ ಒಳಗೆ ಪ್ರತಿಕ್ರಿಯೆ ಕೇಳಿದ್ದಾರೆ. ಆದರೆ ಬಹಳಷ್ಟು ಜನರ ಗಮನಕ್ಕೆ ಇದು ಬಾರದಿರುವುದು ಅಚ್ಚರಿಯ ಸಂಗತಿಯಾಗಿದೆ. ಉನ್ನತ ಶಿಕ್ಷಣ ನಿಯಂತ್ರಣ ಆಯೋಗವು ಒಂದು ಮಾರ್ಗಸೂಚಿಯನ್ನು ಕೊಡುವುದನ್ನು ಬಿಟ್ಟು ಸಂಪೂರ್ಣವಾಗಿ ಇತಿಹಾಸದ ಪಠ್ಯವನ್ನು ಬದಲಿಸಲು ಮುಂದಾಗಿದೆ ಎಂಬುದು ಶಿಕ್ಷಣ ತಜ್ಞರ ಪ್ರಶ್ನೆಯಾಗಿದೆ.

ಇದನ್ನೂ ಓದಿ : ಹೊಸ ರಾಷ್ಟ್ರೀಯ ಶಿಕ್ಷಣ ನೀತಿ ಕುರಿತು ಕಾಂಗ್ರೆಸ್ ನಿಲುವೇನು ? ಬರಗೂರು ರಾಮಚಂದ್ರಪ್ಪ ಬಹಿರಂಗ ಪತ್ರ

ಹೊಸ ಪಠ್ಯದಲ್ಲಿ ಏನಿದೆ? : ಹೊಸ ಪಠ್ಯಕ್ರಮವನ್ನು ಕೆಲವರು ಸಮರ್ಥಿಸಿಕೊಂಡರ, ಅನೇಕರು ವಿರೋಧಿಸುತ್ತಿದ್ದಾರೆ. ಹಾಗಾಗಿ ಈಗ ಪರ ವಿರೋಧದ ಕೂಗು ಎದ್ದಿದೆ. ಹರಪ್ಪನ್ನರು ಎಂದರೆ ಯಾರು? ಇವರಿಗೂ, ಇಂದಿನ ತಲೆಮಾರಿನ ಭಾರತೀಯರಿಗೂ ಏನು ಸಂಬಂಧ ? ಆರ್ಯರ ಆಕ್ರಮಣ ನಡೆದದ್ದು ಸುಳ್ಳೇ? ಹಲವಾರು ಉಪಗ್ರಹ ಆಧಾರಿತ ಮಾಹಿತಿಗಳು, ಭೂಗರ್ಭ ವಿಜ್ಞಾನ ಶಾಸ್ತ್ರದ ತಥ್ಯಗಳು, ಪಾರಂಪರಿಕ ಪುರಾಣೇತಿಹಾಸದ ಸಾಕ್ಷ್ಯಗಳು, ಪುರಾತತ್ವ ಶಾಸ್ತ್ರಗಳೂ ಅಲ್ಲದೇ, ಹಲವಾರು ಆಧುನಿಕ ವೈಜ್ಞಾನಿಕ ಸಂಶೋಧನೆಗಳನ್ನು ಆಧರಿಸಿ, ಭಕ್ಷಿಯವರು ’ಸರಸ್ವತಿ ನಾಗರಿಕತೆ’ ಎಂಬ ಈ ಪುಸ್ತಕವನ್ನು ರಚಿಸಿದ್ದಾರೆ. ವಸಾಹತು ಚರಿತ್ರಕಾರರು ಕಡೆಗಣಿಸಿದ ಭಾರತದ ನೈಜ ಇತಿಹಾಸದ ಅನೇಕ ನೂತನ, ನಿಗೂಢ ಮತ್ತು ಉಪೇಕ್ಷಿತ ಆಯಾಮಗಳನ್ನು ಈ ಪುಸ್ತಕವು ಬಹಿರಂಗ ಪಡಿಸಿದೆ ಎಂಬುದು ಬಲಪಂಥೀಯ ಚಿಂತಕರ ಅಭಿಪ್ರಾಯ ಆಗಿದೆ.   ಈ ಪಠ್ಯಕ್ರಮದಲ್ಲಿ ಮತೀಯಾದದ ವಿಚಾರಗಳೇ ಹೆಚ್ಚಾಗಿವೆ ಎನ್ನುವುದು ಪ್ರಗತಿಪರ ಇತಿಹಾಸ ತಜ್ಞರು ಹಾಗೂ ಶಿಕ್ಷಣ ತಜ್ಞರ ಆರೋಪವಾಗಿದೆ.

ಈ ಹೊಸ ಪಠ್ಯಕ್ರಮದ ಪ್ರಕಾರ ಈಗಿರುವ ‘ಇತಿಹಾಸ ಪೂರ್ವ ಮತ್ತು ಆರಂಬದ ಇತಿಹಾಸದ ಕಾಲಘಟ್ಟ’ದ ಪಠ್ಯದ ಬದಲಿಗೆ, eternity of synonyms bharat’, ವೇದ, ವೇದಾಂತ, ಉಪನಿಷತ್, ಸ್ಮ್ರುತಿ, ಪುರಾಣಗಳನ್ನು ಸೇರಿಸಲಾಗಿದೆ. ಕೌಟಿಲ್ಯನ ಅರ್ಥಶಾಸ್ತ್ರ, ಕಾಳಿದಾಸನ ಕಾವ್ಯ  ಪ್ರಾಚೀನ ಸಾಹಿತ್ಯ, ಚರಕ ಸಂಹಿತೆಗಳಂತಹ ಸೆಕ್ಯುಲರ್ ಪಠ್ಯಗಳನ್ನು ಕೈಬಿಡಲಾಗಿದೆ ಎಂದು  ಸಹಾಯಕ ಪ್ರೊ. ಜಿತೇಂದ್ರ ಮೀನಾ ಹೇಳುತ್ತಾರೆ.

‘Eternity’ಯೊಂದಿಗೆ ಸಮೀಕರಿಸುತ್ತಾ ಧಾರ್ಮಿಕ ಪಾತ್ರಗಳು, ಪೌರಾಣಿಕ ಕತೆಗಳನ್ನು ವೈಬವೀತರಿಸಲಾಗುತ್ತಿದೆ.  ಮತ್ತೊಂದು ದಸ್ತಾವೇಜು ‘from early times to 550 CE” ನಲ್ಲಿ  ‘Indus-saraswati civilisation’  and it’s continuation and fall and survival ಕುರಿತು ವಿವರಿಸಲಾಗಿದೆ. ಹರಪ್ಪ ನಾಗರಿಕತೆಯ ಪಠ್ಯದ ಬದಲಿಗೆ ಈ ಸರಸ್ವತಿ ನಾಗರಿಕತೆಯನ್ನು ತಂದಿದ್ದಾರೆ. ಮತ್ತೊಂದು  ‘cultural heritage of india’ ಎಂಬ ಪಠ್ಯದಲ್ಲಿ ramayana , mahabharat traditional cultureನ್ನು ಸೇರಿಸಲಾಗಿದೆ. Invation ಎನ್ನುವ ಪದವನ್ನು ಮುಸ್ಲಿಂ ಆಡಳಿತಗಾರರ ವಿರುದ್ದ ಡಾಳಾಗಿ ಬಳಸಿದ್ದಾರೆ. ಬ್ರಿಟೀಷ್ ವಿರುದ್ದ ಜಾಣ ಮೌನ ತಾಳಿದ್ದಾರೆ. ಇದು ಕೇವಲ ಉದಾಹರಣೆಗಳು ಮಾತ್ರ. ಈ ಮುಂಚೆ UGC ಕೇವಲ ಸಾಮಾನ್ಯ ಮಾರ್ಗಸೂಚಿಗಳನ್ನು ಕೊಡುತ್ತಿತ್ತು. ಇದೇ ಮೊದಲ ಬಾರಿ ಸಂಪೂರ್ಣ ಪಠ್ಯಕ್ರಮಕ್ಕೆ ಮುಂದಾಗಿದೆ ಎಂದು ಶಿಕ್ಷಣ ತಜ್ಞ ಬಿ. ಶ್ರೀಪಾದ ಭಟ್‌ ರವರು ಆರೋಪಿಸಿದ್ದಾರೆ.

UGC ಯ ಈ ನಿರ್ದಾರಕ್ಕೂ NEP2020 ಯ ಶಿಫಾರಸ್ಸುಗಳಿಗೂ ನೇರ ಸಂಬಂದವಿದೆ ಅಥವಾ UGC ಅದರ ಶಿಫಾರಸ್ಸುಗಳನ್ನು ಜಾರಿಗೊಳಿಸಲು ಮುಂದಾಗಿದೆ. ಅಲ್ಲಿ ಪ್ರಾಚೀನ ಭಾರತದ ಕುರಿತು, ಪುರಾಣಗಳ ಕುರಿತು, ದರ್ಮದ ಕುರಿತಾದ  ಪಠ್ಯಕ್ರಮಕ್ಕೆ ಶಿಫಾರಸ್ಸು ಮಾಡಲಾಗಿತ್ತು ಮತ್ತು ಸಂಪೂರ್ಣವಾಗಿ ಕೇಂದ್ರೀಕರಣಕ್ಕೆ ಒಲವು ವ್ಯಕ್ತಪಡಿಸಿತ್ತು. ಈಗ ಅದು ಸಾಕಾರಗೊಳ್ಳುತ್ತಿದೆ ಎಂದು ವಿದ್ಯಾರ್ಥಿ ಸಂಘಟನೆಗಳು ಆರೋಪಿಸಿವೆ.

ಎಲ್ಲವೂ ಮುಗಿದ ನಂತರ ಕಣ್ಣೊರೆಸುವ ತಂತ್ರವಾಗಿ ಈ ಪ್ರಕಟಣೆಯನ್ನು ತೇಲಿ ಬಿಟ್ಟಿದ್ದಾರೆ. ಎಲ್ಲಾ ಬಗೆಯ ಶಿಕ್ಷಣದ ಮತೀಯವಾದಿಕರಣ ಮುಗಿದ ನಂತರ ನಮ್ಮ ಅಭಿಪ್ರಾಯ ಕೇಳುತ್ತಿದ್ದಾರೆ. ನಮ್ಮ ಪ್ರಜ್ಞಾಪೂರ್ವ ನಿಷ್ಕ್ರಿಯತೆ ಎಂತಹ ದುರಂತಗಳಿಗೆ ಕಾರಣವಾಗುತ್ತಿದೆ ಎಂದು ಇಲ್ಲಿನ ಪ್ರಜ್ಞಾವಂತರಿಗೆ ಅರಿವಾಗಿಲ್ಲವೆಂದರೆ ಮತ್ತೇನೂ ಮಾತನಾಡಲು ಸಾದ್ಯವಿಲ್ಲ ಎಂದು ಭಾರತ ವಿದ್ಯಾರ್ಥಿ ಫೆಡರೇಷನ್‌ (SFI) ನ ರಾಜ್ಯ ಕಾರ್ಯದರ್ಶಿ ವಾಸುದೇವರೆಡ್ಡಿ ತಿಳಿಸಿದ್ದಾರೆ.

ಇದನ್ನೂ ಓದಿ : ಬಲಪಂಥೀಯ ರಾಜಕಾರಣವೇ ಹೆಸರಿನ ರಾಜಕಾರಣ

ಯುಜಿಸಿ ನಿರ್ಧಾರ ಸರಿಯೇ?  : UGC ರಾಜ್ಯಗಳಿಗೆ ಕೇವಲ  ಮಾರ್ಗಸೂಚಿಗಳನ್ನು ಮಾತ್ರ ಕೊಡಬೇಕು ಮತ್ತು ರಾಜ್ಯಗಳು ಪಠ್ಯಕ್ರಮಗಳನ್ನು ರೂಪಿಸುತ್ತವೆ.  ಈ ಪರಿಪಾಠವನ್ನು ಕೈಬಿಟ್ಟ  UGC ಈ ಬಾರಿ ಸ್ವತಃ ತಾನೇ ಬಿ. ಎ. (ಇತಿಹಾಸ) ಪಠ್ಯಕ್ರಮ ರಚಿಸುತ್ತಿದೆ ಮತ್ತು ರಾಜ್ಯಗಳ ಮೇಲೆ ಹೇರುತ್ತಿದೆ. ಇದು ಒಕ್ಕೂಟ ವ್ಯವಸ್ಥೆಯ, ಸಂವಿಧಾನ ನೀತಿಸಂಹಿತೆಯ ಸ್ಪಷ್ಟವಾದ ಉಲ್ಲಂಘನೆ. ಈ ಮೊದಲು ಎನ್‌ಸಿಆರ್‌ಟಿ, ಪಠ್ಯಗಳು ರಾಜ್ಯದಿಂದ ತಯಾರಿ ಮಾಡಿ ಕೊಡುತ್ತಿದ್ದವು. ಕೇಂದ್ರ ಶಿಕ್ಷಣ ಇಲಾಖೆ ಅದನ್ನು ಪರಿಶೀಲನೆ ಮಾಡಿ ಅಂತಿಮಗೊಳಿಸಿ ಕಳುಹಿಸುತ್ತಿದ್ದವು. ಆದರೆ ಈಗ ಕೇಂದ್ರ ಶಿಕ್ಷಣ ಇಲಾಖೆಯೇ ಪಠ್ಯಕ್ರಮ ತಯಾರಿಸಿ ರಾಜ್ಯಗಳಿಗೆ ಕಳುಹಿಸುತ್ತಿದೆ.  ಇತಿಹಾಸ ಪಠ್ಯಕ್ರಮವನ್ನು ಸಂಪೂರ್ಣ ಬದಲಿಸುತ್ತಿರುವ UGC ಮಾಜಿ ಸೇನಾಧಿಕಾರಿ ಜಿ. ಡಿ. ಪಕ್ಷಿ ಅವರ ‘ಸರಸ್ವತಿ ನಾಗರಿಕತೆ’ ಎಂಬ ಪುಸ್ತಕವನ್ನು  ಅಕರ ಗ್ರಂಥವನ್ನಾಗಿ ಬಳಸಿಕೊಳ್ಳುತ್ತಿದೆ. ಅಥವಾ ಅದನ್ನೇ ಪಠ್ಯವನ್ನಾಗಿಸಿದರೂ ಅಚ್ಚರಿಯಿಲ್ಲ ಎಂಬ ಆತಂಕ ಶಿಕ್ಷಣ ತಜ್ಞರನ್ನು ಕಾಡುತ್ತಿದೆ.

ಪಠ್ಯಕ್ರಮ ಮತ್ತು ಬಿಜೆಪಿ : ಬಿಜೆಪಿ ಅಧಿಕಾರಕ್ಕೆ ಬಂದಾಗಲೆಲ್ಲ ಪಠ್ಯದಲ್ಲಿ ಮತೀಯವಾದಿಕರಣ ಪ್ರಕ್ರಿಯೆ ನಡೆಯುತ್ತಲೇ ಇರುತ್ತದೆ. ವಾಜಪೇಯಿಯವರು ಪ್ರಧಾನಿಯಾಗಿದ್ದಾಗ ಕೇಂದ್ರ ಸಚಿವ ಮುರಳಿ ಮನೋಹರ ಜೋಷಿ ಪಠ್ಯಕ್ರಮ ಮತೀಯವಾದಿಕರಣಕ್ಕೆ ಚಾಲನೆ ನೀಡಿದರು.  ಕರ್ನಾಟಕದಲ್ಲೂ ಬಿಜೆಪಿ ಅಧಿಕಾರದಲ್ಲಿದ್ದಾಗ 2012 ರಲ್ಲಿ ಪಠ್ಯಕ್ರಮದ ಪರಿಷ್ಕರಣೆ ಹೆಸರಲ್ಲಿ ಪಠ್ಯದಲ್ಲಿ ಮತೀಯ ವಿಚಾರಗಳನ್ನು ತುರುಕುವ ಪ್ರಯತ್ನ ನಡೆದಿತ್ತು. ಪಠ್ಯಗಳಲ್ಲಿ ವರ್ಣಾಶ್ರಮ ವ್ಯವಸ್ಥೆಯನ್ನು ಜಾರಿಗೆ ತರುವುದು ಬಿಜೆಪಿ ಮುಖ್ಯ ಉದ್ದೇಶ ಎಂಬುದು ಸ್ಪಷ್ಟವಾಗಿ ಗೊತ್ತಾಗುತ್ತಿದೆ. ಕೇರಳದ ಎಡರಂಗ ಸರಕಾರ ಹಾಗೂ ತಮಿಳು ನಾಡಿನ ಡಿಎಂಕೆ ಸರಕಾರ ಮಾತ್ರ ಕೇಂದ್ರದ ಈ ನಡೆಯನ್ನು ವಿರೋಧಿಸಿವೆ. ಕಾಂಗ್ರೆಸ್‌ ಈ ವಿಚಾರದಲ್ಲಿ ಮೌನಕ್ಕೆ ಶರಣಾಗಿದೆ.

ಇದರ ಅಪಾಯ, ಸತ್ಯಾಸತ್ಯೆತಗಳ ಕುರಿತು ಮುಖ್ಯವಾಗಿ ಇತಿಹಾಸದ ಶಿಕ್ಷಕರು, ಪ್ರಾಧ್ಯಾಪಕರು ಮುಕ್ತವಾಗಿ ಮಾತನಾಡಬೇಕು. ಸರಕಾರಗಳು ಇವರುಗಳ ಜೊತೆ ಸಂವಾದ ನಡೆಸಬೇಕು. ಶಿಕ್ಷಣ ಹಕ್ಕುದಾರರಾದ ವಿದ್ಯಾರ್ಥಿಗಳು, ವಿದ್ಯಾರ್ಥಿ ಸಂಘಟನೆಗಳು, ಅಧ್ಯಾಪಕರು, ಅಧ್ಯಾಪಕರ ಸಂಘಟನೆಗಳ, ಶಿಕ್ಷಣ ತಜ್ಞರ ಜೊತೆ ಸಭೆಗಳನ್ನು, ಮುಕ್ತವಾದ ಚರ್ಚೆಗಳನ್ನು ನಡೆಸಬೇಕು. ಸೌಹಾರ್ಧ ಭಾರತವನ್ನು ಪರಿಚಯಿಸುವ ಜವಬ್ದಾರಿ ತನ್ನ ಮೇಲಿದೆ ಎಂಬುದನ್ನು ಸರಕಾರ ಮರೆಯಬಾರದು.

Donate Janashakthi Media

Leave a Reply

Your email address will not be published. Required fields are marked *