ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ದರ ಪರಿಷ್ಕರಣೆ

ಬೆಂಗಳೂರು: ರಾಜ್ಯ ಸರಕಾರವು ಕೊರೊನಾ ಸೋಂಕಿನಿಂದ ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿರುವವರಿಗೆ ದರವನ್ನು ಪರಿಷ್ಕರಿಸಿ ಹೊಸ ಆದೇಶವನ್ನು ಹೊರಡಿಸಿದೆ.

ಈ ಬಗ್ಗೆ ಇಂದು ಸರಕಾರಿ ಸುತ್ತೋಲೆಯನ್ನು ಹೊರಡಿಸಿರುವ ಸರಕಾರದ ಮುಖ್ಯ ಕಾರ್ಯದರ್ಶಿ ಪಿ. ರವಿ ಕುಮಾರ್‌ ಅವರು ಆದೇಶ ಹೊರಡಿಸಿದ್ದಾರೆ.

ಇದನ್ನು ಓದಿ: 50 ಸಾವಿರ ಸನಿಹಕ್ಕೆ ಕೋವಿಡ್‌ ಹೊಸ ಪ್ರಕರಣ

ಮೇ 1ರಂದು ಮುಖ್ಯಮಂತ್ರಿ ಬಿ.ಎಸ್.‌ ಯಡಿಯೂರಪ್ಪರವರೊಂದಿಗೆ ಖಾಸಗಿ ಆಸ್ಪತ್ರೆಗಳು ಕೈಗೊಂಡ ಸಭೆಯಲ್ಲಿ, ಮಾನ ಸಂಪನ್ಮೂಲ ಹಾಗೂ ಪರಿಕರಗಳ ವೆಚ್ಚವು ಹೆಚ್ಚಾಗುತ್ತಿರುವುದರಿಂದ ಪ್ಯಾಕೇಜ್‌ ದರಗಳನ್ನು ಪರಿಷ್ಕರಿಸಬೇಕಾಗಿ ಕೋರಿದ್ದರು.

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವೆಗಳ ನಿರ್ದೇಶಕ ಮತ್ತು ತಾಂತ್ರಿಕ ಸಮಿತಿಯು ಪರಿಶೀಲನೆಯನ್ನು ನಡೆಸಿ ಪರಿಷ್ಕೃತ ದರವನ್ನು ಸರಕಾರ ಬಿಡುಗಡೆ ಮಾಡಿದೆ.

ಇದನ್ನು ಓದಿ: ಕೋವಿಡ್ ನಿಂದ ನಲುಗಿಹೋದ ಸಮಸ್ತ ಜನರ ಸಂಕಷ್ಟಗಳ ಪರಿಹಾರಕ್ಕೆ ಸಿಪಿಐ(ಎಂ) ಮನವಿ

ಕೋವಿಡ್‌ ಸೋಂಕಿತರ ಚಿಕಿತ್ಸೆಗಾಗಿ ಪಿಪಿಇ ಕಿಟ್‌ ಹಾಗೂ ಪರಿಕರಗಳನ್ನು ಒಳಗೊಂಡಿರುವ ದರಗಳನ್ನು ಪರಿಷ್ಕರಿಸಲಾಗಿದೆ.

ಹೊಸ ದರದ ಪ್ರಕಾರ

  1. ಜನರಲ್‌ ವಾರ್ಡ್‌ ಗೆ – ರೂ. 5200
  2. ಹೆಚ್‌ಡಿಯು – ರೂ. 8000
  3. ಐಸೋಲೇಷನ್‌ ಐಸಿಯು ವೆಂಟಿಲೇಟರ್‌ ರಹಿತ – ರೂ. 9750
  4. ಐಸೋಲೇಷನ್‌ ಐಸಿಯು ವೆಂಟಿಲೇಟರ್‌ ಸಹಿತ – ರೂ. 11500

ಮೇಲಿನ ದರಗಳಲ್ಲಿ ಖಾಸಗಿ ಆಸ್ಪತ್ರೆಗಳು ಚಿಕಿತ್ಸೆಯನ್ನು ನೀಡಬೇಕು ಇಲ್ಲವಾದಲ್ಲಿ ವಿಪತ್ತು ನಿರ್ವಹಣಾ ಕಾಯ್ದೆ, 2005ರ ಸೆಕ್ಷನ್‌ (51 ರಿಂದ 60) ಮತ್ತು ಭಾರತ ದಂಡ ಸಂಹಿತೆಯ ಸಂಬಂಧಿತ ವಿಭಾಗಗಳ ಅಡಿಯಲ್ಲಿ ಶಿಕ್ಷಾರ್ಹವಾಗಿರುತ್ತದೆ ಎಂದು ಸರಕಾರದ ಆದೇಶದಲ್ಲಿ ಸೂಚಿಸಲಾಗಿದೆ.

Donate Janashakthi Media

Leave a Reply

Your email address will not be published. Required fields are marked *