ಅನಂತಪುರ: ಹಿಂದೂಪುರ ಸರಕಾರಿ ಆಸ್ಪತ್ರೆಯಲ್ಲಿ ಆಕ್ಸಿಜನ್ ಕೊರತೆಯಿಂದಾಗಿ ಕನಿಷ್ಟ 8 ಕೋವಿಡ್-19 ರೋಗಿಗಳು ಮರಣ ಹೊಂದಿದ್ದಾರೆ ಎಂದು ರೋಗಿಗಳ ಸಂಬಂಧಿಕರು ಆಕ್ರೋಶಗೊಂಡಿದ್ದಾರೆ. ಆದರೆ ರೋಗಿಗಳ ಸಂಬಂಧಿಕರ ಆರೋಪವನ್ನು ಆಂಧ್ರ ಸರಕಾರ ನಿರಾಕರಿಸಿದೆ.
ಹಿಂದೂಪುರ ಸರಕಾರಿ ಆಸ್ಪತ್ರೆಯ 6-ಕೆಎಲ್ ಲಿಕ್ವಿಡ್ ಆಕ್ಸಿಜನ್ ಟ್ಯಾಂಕ್ ಖಾಲಿಯಾದ ಪರಿಣಾಮವಾಗಿ ಈ ಘಟನೆ ಸಂಭವಿಸಿದೆ. ಬೃಹತ್ ಆಮ್ಲಜನಕ ಸಿಲಿಂಡರ್‌ಗಳನ್ನು ಸಂಪರ್ಕಿಸಲು ಪರ್ಯಾಯ ವ್ಯವಸ್ಥೆಗಳನ್ನು ಮಾಡಲು ಯಾರೂ ಇಲ್ಲದಿದ್ದಾಗ ರೋಗಿಗಳು ಆಕ್ರಂದನ ಜೋರಾಗಿ ಪರಿಣಮಿಸಿತು.
ಇದನ್ನು ಓದಿ: ಆಕ್ಸಿಜನ್ ಕೊರತೆ ಚಾಮರಾಜನಗರದಲ್ಲಿ 24 ಮಂದಿ ಸಾವು
ರವಿವಾರ ಸಂಜೆ ಹಾಗೂ ಸೋಮವಾರ ಬೆಳಗ್ಗಿನ ತನಕ ಸಾವುಗಳು ಸಂಭವಿಸಿರುವ ವರದಿ ಇದಾಗಿದೆ ಎಂಬ ಮಾಹಿತಿ ಇದ್ದು ಇನ್ನು ನಿಖರಾವಾದ ಕಾರಣ ತಿಳಿದುಬಂದಿಲ್ಲ.
ಸ್ಥಳಕ್ಕೆ ಭೇಟಿ ನೀಡಿದ ಹಿಂದೂಪುರದ ಸರ್ಕಲ್ ಪೊಲೀಸ್ ಇನ್ಸ್‌ಪೆಕ್ಟರ್ ಬಾಲಾ ಮಡ್ಡಿಲೇಟಿ ಮತ್ತು ಅವರ ಸಿಬ್ಬಂದಿಗಳು ತಲುಪಿದರು.
ಸ್ಥಳದಲ್ಲಿದ್ದ ರೋಗಿಯ ಸಂಬಂಧಿಕರೊಬ್ಬರು “ಆಮ್ಲಜನಕ ಪೂರೈಕೆ ಇದ್ದಕ್ಕಿದ್ದಂತೆ ಬೆಳಿಗ್ಗೆ 5.40 ಕ್ಕೆ ನಿಂತುಹೋಯಿತು. ಮತ್ತು ಬೃಹತ್ ಸಿಲಿಂಡರ್‌ಗಳನ್ನು ಸಂಪರ್ಕಿಸಲು ಯಾರು ಇರಲಿಲ್ಲ. ನಾವೇ ಹೋಗಿ ಸಿಲಿಂಡರ್ ಸಿದ್ಧಗೊಳಿಸಿ ಅವುಗಳನ್ನು ಸಂಪರ್ಕಿಸಬೇಕಾಗಿತ್ತು” ಎಂದು ವಿವರಿಸಿದರು.
ಇದನ್ನು ಓದಿ: ಉಸಿರಾಡೋಕ್ಕೆ ಕಷ್ಟ ಆಗುತ್ತೆ ಎಂದು ಫೋನ್ ಮಾಡಿದ್ದ ನವವಿವಾಹಿತ 2ತಾಸಲ್ಲೇ ಪ್ರಾಣಬಿಟ್ಟ
ಹಿಂದೂಪುರ ಸರ್ಕಾರಿ ಆಸ್ಪತ್ರೆ ಅಧೀಕ್ಷಕ ಪ್ರಭಾಕರ್ ಮಾತನಾಡಿ ʻʻಸಾಕಷ್ಟು ಸಂಖ್ಯೆಯ ಬೃಹತ್ ಸಿಲಿಂಡರ್‌ಗಳಿವೆ ಮತ್ತು ಎಲ್‌ಎಂಒ ಟ್ಯಾಂಕ್‌ನಿಂದ ಸರಬರಾಜು ಸ್ಥಗಿತಗೊಂಡಾಗ ಪರಿಸ್ಥಿತಿ ಬಿಗಡಾಯಿಸಿದೆ. ಕಳೆದ ಎರಡು ದಿನಗಳಿಂದ ರೋಗಿಗಳ ಆರೋಗ್ಯದಲ್ಲಿ ಸಾಕಷ್ಟು ವ್ಯತ್ಯಾಸ ಕಂಡು ಬಂದಿದ್ದವು ಹಾಗಾಗಿ ಆರೋಗ್ಯದಲ್ಲಿ ಏರುಪೇರಾದ ಪರಿಣಾಮವಾಗಿ ಸಾವನ್ನಪ್ಪಿದರು. ಆದರೆ ಆಮ್ಲಜನಕದ ಪೂರೈಕೆಯ ಕೊರತೆಯಿಂದಾಗಿ ಅಲ್ಲ” ಎಂದು ಹೇಳುತ್ತಾರೆ.
ಶನಿವಾರ ಅನಂತಪುರ ಸರಕಾರಿ ಜನರಲ್ ಆಸ್ಪತ್ರೆಯಲ್ಲಿ 16 ರೋಗಿಗಳು ಜೀವ ಕಳೆದುಕೊಂಡಿದ್ದರು. ಆಕ್ಸಿಜನ್ ಬಿಕ್ಕಟ್ಟನ್ನು ಜಿಲ್ಲಾಡಳಿತ ಸಹ ನಿರಾಸಿದೆ.