ಅಂಗಾಂಗ ವ್ಯಾಪಾರದ ಗ್ಯಾಂಗ್‌; ಕಿಡ್ನಿ ದಾನ ಮಾಡಿ ಮೋಸ ಹೋದ ವ್ಯಕ್ತಿ

ಗುಂಟೂರು:  ಕಿಡ್ನಿ ದಾನ ಮಾಡಿದ್ರೆ 29 ಲಕ್ಷ ರೂಪಾಯಿ ನೀಡೋದಾಗಿ ನಂಬಿಸಿ ಅಂಗಾಂಗ ವ್ಯಾಪಾರದ ಗ್ಯಾಂಗ್‌ ಒಂದು ಗುಂಟೂರಿನ ಬಡ ಆಟೋ ರಿಕ್ಷಾ ಚಾಲಕನಿಗೆ ಮೋಸ ಮಾಡಿದ್ದು ವ್ಯಕಿ ಆರೋಪ ಮಾಡಿದ್ದಾನೆ.

ಗುಂಟೂರು ಪಟ್ಟಣದ ಜಿ ಮಧು ಬಾಬು(31 ವರ್ಷ) ಮೋಸ ಹೋದ ವ್ಯಕ್ತಿ. ಅಂಗಾಂಗ ವ್ಯಾಪಾರದ ಗ್ಯಾಂಗ್‌ 2023ರ ನವೆಂಬರ್‌ನಲ್ಲಿ ಮಧು ಬಾಬು ಅವರನ್ನು ಸಂಪರ್ಕಿಸಿತ್ತು. ತಮ್ಮ ವೆಬ್‌ ಸೈಟ್‌ ಬಗ್ಗೆಯೂ ತಿಳಿಸಿತ್ತು. ವೆಬ್‌ ಸೈಟ್‌ ಹಾಗೂ ಫೇಸ್ಬುಕ್‌ ಚೆಕ್‌ ಮಾಡಿದ್ದ ಮಧು ಬಾಬುವನ್ನು ಇನ್ನೊಬ್ಬ ವ್ಯಕ್ತಿ ಸಂಪರ್ಕಿಸಿದ್ದಾನೆ. ಆ ವ್ಯಕ್ತಿ ತನಗೆ 30 ಲಕ್ಷ ರೂಪಾಯಿ ಸಿಕ್ಕಿದೆ ಎಂದು ಭರವಸೆ ನೀಡಿದ್ದನು ಎಂದು ತಿಳಿದು ಬಂದಿದೆ.

ಇದನ್ನು ಓದಿ : ಆಸ್ಪತ್ರೆಯು ಹೆಣ್ಣು ಮಗುವನ್ನು ಬದಲಾಯಿಸಿ ಗಂಡು ಶಿಶುವನ್ನು ಮಾರಲು ಯತ್ನ; 4 ಮಂದಿ ಸೆರೆ

ಮಧುಬಾಬು ಆರ್ಥಿಕ ಸ್ಥಿತಿ ಚೆನ್ನಾಗಿರಲಿಲ್ಲ. ಅವರ ತಂದೆ ಆರ್ಥಿಕ ಸಮಸ್ಯೆಯಿಂದ ಆತ್ಮಹತ್ಯೆ ಮಾಡಿಕೊಂಡಿದ್ದರು. ಸಾಲ ತೀರಿಸಲಾಗದೆ ಮಧುಬಾಬು ಕಿಡ್ನಿ ಮಾರಾಟಕ್ಕೆ ಮುಂದಾಗಿದ್ದರು. 31-33 ವರ್ಷದೊಳಗಿನ O + ve ಮತ್ತು B + ve ರಕ್ತದ ಗುಂಪಿನ ಅಗತ್ಯವಿದೆ ಎಂದು ಗ್ಯಾಂಗ್‌ ತಿಳಿಸಿದ್ದರಿಂದ ಅವರು ಕಿಡ್ನಿ ಮಾರಾಟ ಮಾಡಿದ್ದರು.

ಜೂನ್ 15, 2024 ರಂದು ಮೂತ್ರಪಿಂಡವನ್ನು ದಾನ ಮಾಡಿದ್ದು, ತಂಡ ಬರೀ 1.1 ಲಕ್ಷ ರೂಪಾಯಿ ನೀಡಿದೆ. ವಿಜಯವಾಡದ ವಿಜಯಾ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಶಸ್ತ್ರಚಿಕಿತ್ಸೆ ನಡೆಸಲಾಗಿದೆ. ನವೆಂಬರ್ 2023 ರಿಂದ ಜೂನ್ 2024 ರವರೆಗೆ ಮಧುಗೆ ಸುಮಾರು 1.1 ಲಕ್ಷ ರೂಪಾಯಿಗಳನ್ನು ವೆಚ್ಚವಾಗಿ ಪಾವತಿಸಲಾಗಿದೆ. ಮೋಸ ಮಾಡಿದ ಗ್ಯಾಂಗ್‌ ಬಂಧಿಸುವಂತೆ ಮಧುಬಾಬು ಪೊಲೀಸರಿಗೆ ದೂರು ನೀಡಿದ್ದಾರೆ. ಈ ಗ್ಯಾಂಗ್‌ ಅನೇಕರಿಗೆ ಇದೇ ರೀತಿ ಮೋಸ ಮಾಡಿದೆ ಎಂಬ ಅನುಮಾನ ಬಂದಿದ್ದು, ಪೊಲೀಸರು ತನಿಖೆ ಶುರು ಮಾಡಿದ್ದಾರೆ.

ಇದನ್ನು ನೋಡಿ : ರೈಲು ಚಾಲಕರಿಗೆ ವಿಶ್ರಾಂತಿ ಇಲ್ಲ! ನಿದ್ದೆ ಇಲ್ಲ!! ಹಾಗಾಗಿಯೇ ಅಪಘಾತಗಳು ಹೆಚ್ಚಾಗುತ್ತಿವೆ!!! Janashakthi Media

Donate Janashakthi Media

Leave a Reply

Your email address will not be published. Required fields are marked *