ಬೆಂಗಳೂರು: ‘ಅನಿವಾರ್ಯ ಎನಿಸಿದಾಗ ಶರೀರದ ಅಂಗಾಂಗಳನ್ನು ಮಾರಿಕೊಂಡು ಜೀವನ ಮಾಡಬಹುದು. ಮುಸಲ್ಮಾನರ ಬಾಡಿಗೆ ದುಡ್ಡಿನಿಂದಲ್ಲ. ಮನೆ ಖಾಲಿಯಿದೆ, ಹಿಂದೂಗಳಿಗೆ ಮಾತ್ರ’ ಎಂದು ದಯಾನಂದ ಎನ್ನುವವರು ಫಲಕ ಹಾಕಿದ್ದ ಚಿತ್ರ ಈ ಹಿಂದೆ ವೈರಲ್ ಆಗಿತ್ತು. ಈಗ ಅಂತಹದ್ದೆ ಘಟನೆ ಮತ್ತೆ ನಡೆದಿದ್ದು ಸಾಮಾಜಿಕ ಜಾಲತಾಣದ ತುಂಬೆಲ್ಲ “ಸಿಲಿಕಾನ್ ವ್ಯಾಲಿ” ವಿರುದ್ಧ ಆಕ್ರೋಶ ವ್ಯಕ್ತವಾಗಿದೆ.
ಹೌದು, ಹಿಜಾಬ್ ಮತ್ತು ಜಟ್ಕಾ ಕಟ್ಟ ವಿವಾದದ ಸಂದರ್ಭದಲ್ಲಿ, ಬೆಂಗಳೂರಿನಲ್ಲಿ ಮುಸ್ಲಿಂರಿಗೆ ಮನೆ ಕೊಡುವುದಿಲ್ಲ ಎಂಬ ಚರ್ಚೆ ನಡೆದಿತ್ತು. ಭಾರತ ಅಮೃತ ಮಹೋತ್ಸವ ಆಚರಿಸಿಕೊಳ್ಳುತ್ತಿರುವ ಈ ವರ್ಷದಲ್ಲಿ, ಸ್ವಾತಂತ್ರ್ಯ ದಿನದಂದೆ ಮುಸ್ಲಿಂ ಮಹಿಳೆಯನ್ನು ಮನೆ ಮಾಲಿಕರು ಅವಮಾನಿಸಿದ ಘಟನೆ ನಡೆದಿದೆ. ‘ಎಲ್ಲರೂ ಭಾರತ ಸ್ವಾತಂತ್ರ್ಯದ ಅಮೃತ ಮಹೋತ್ಸವ ಆಚರಿಸುತ್ತಿದ್ದರೆ, ನನ್ನ ಆಗಸ್ಟ್ 15 ಹೀಗೆ ಕಳೆಯಿತು’ ಎಂದು ಹೈಫಾ ಒಕ್ಕಣೆ ಬರೆದುಕೊಂಡಿದ್ದಾರೆ.
If everyone is done celebrating the 75th anniversary of independence, here is how I spent my Aug 15th. #bangalore #househunting pic.twitter.com/O81muhTi8w
— Haifa (@HaifaZu) August 16, 2022
ಹೈಫಾ ಹೆಸರಿನ ಮಹಿಳೆಯು ಬೆಂಗಳೂರಿನ ವಿವಿಧೆಡೆ ಬಾಡಿಗೆ ಮನೆಗಾಗಿ ಹುಡುಕಾಡಿದ್ದಾರೆ. ಈ ವೇಳೆ ಮನೆ ಮಾಲೀಕರು ಮತ್ತು ಆಕೆಯ ನಡುವೆ ನಡೆದ ಸಂವಾದವನ್ನು ಹೈಫಾ ಟ್ವಿಟರ್ನಲ್ಲಿ ಹಂಚಿಕೊಂಡಿದ್ದಾರೆ. ಸಾಕಷ್ಟು ಜನರು ಈ ಟ್ವೀಟ್ಗೆ ತಮ್ಮ ಅನುಭವಗಳನ್ನು, ಸಲಹೆಗಳನ್ನು ಉಲ್ಲೇಖಿಸಿ ಕಾಮೆಂಟ್ ಮಾಡಿದ್ದಾರೆ. ಇಬ್ಬರು ಪ್ರತ್ಯೇಕ ಮನೆ ಮಾಲೀಕರೊಂದಿಗಿನ ಸಂವಾದವನ್ನು ಹೈಫಾ ಹಂಚಿಕೊಂಡಿದ್ದಾರೆ. ಒಂದು ಮಾತುಕತೆಯಲ್ಲಿ ಸಂಬಂಧಿಸಿದ ವ್ಯಕ್ತಿಯು, ‘ಮನೆ ಏನೋ ಲಭ್ಯವಿದೆ. ಆದರೆ ಮಾಲೀಕರು ಕೇವಲ ಹಿಂದೂಗಳಿಗೆ ಮಾತ್ರ ಕೊಡುವುದಾಗಿ ಹೇಳುತ್ತಿದ್ದಾರೆ’ ಎಂದು ಹೇಳಲಾಗಿದೆ. ‘ಎಲ್ಲರೂ ಭಾರತ ಸ್ವಾತಂತ್ರ್ಯದ ಅಮೃತ ಮಹೋತ್ಸವ ಆಚರಿಸುತ್ತಿದ್ದರೆ, ನನ್ನ ಆಗಸ್ಟ್ 15 ಹೀಗೆ ಕಳೆಯಿತು’ ಎಂದು ಹೈಫಾ ಒಕ್ಕಣೆ ಬರೆದುಕೊಂಡಿದ್ದಾರೆ.
11,000 ಲೈಕ್ ಮತ್ತು ಸಾವಿರಾರು ಮಂದಿಯ ಪ್ರತಿಕ್ರಿಯೆಯೊಂದಿಗೆ ಹೈಫಾ ಅವರ ಪೋಸ್ಟ್ ವೈರಲ್ ಆಗಿದೆ. ಸಮಾಜದ ಒಂದು ವರ್ಗವು ಅವರ ಪರಿಸ್ಥಿತಿಗೆ ವಿಷಾದ ವ್ಯಕ್ತಪಡಿಸಿದ್ದರೆ, ಒಂದಿಷ್ಟು ಜನರು ಮನೆ ಮಾಲೀಕರ ನಿರ್ಧಾರವನ್ನು ಬೆಂಬಲಿಸಿದ್ದಾರೆ. ಹಲವರು ತಾವು ಅನುಭವಿಸಿದ ಸಂಕಷ್ಟವನ್ನೂ ವಿವರಿಸಿದ್ದಾರೆ.
ಇದನ್ನೂ ಓದಿ : ಅನಿವಾರ್ಯವಾದರೆ ಅಂಗಾಂಗ ಮಾರಿಕೊಳ್ಳುವೆ-ಮುಸ್ಲಿಮರಿಗೆ ಮನೆ ಬಾಡಿಗೆಗೆ ಕೊಡುವುದಿಲ್ಲ; ಹೀಗೊಂದು ಫಲಕ