ಸಾರಿಗೆ ನಿಗಮ ಪುನ:ಶ್ಚೇತನ: ʻಒಂದು ಬಸ್ಸಿಗೆ ಚಾಲಕ ಮಾತ್ರ ಸಾಕುʼ – 130 ಪುಟಗಳ ವರದಿ ಸಲ್ಲಿಕೆ

ಬೆಂಗಳೂರು: ಸಾರಿಗೆ ನಿಗಮಗಳನ್ನು ಪುನಶ್ಚೇತನಗೊಳಿಸುವ ನಿಟ್ಟಿನಲ್ಲಿ ನಿವೃತ್ತ ಅಪರ ಮುಖ್ಯ ಕಾರ್ಯದರ್ಶಿ ಎಂ.ಆರ್‌. ಶ್ರೀನಿವಾಸ ಮೂರ್ತಿ ನೇತೃತ್ವದ ಏಕ ಸದಸ್ಯ ಸಮಿತಿಯು ರಾಜ್ಯ ಸರ್ಕಾರಕ್ಕೆ 130 ಪುಟಗಳ ವರದಿಯನ್ನು ಸಲ್ಲಿಸಿದೆ.

ವರದಿಯಲ್ಲಿ ಸೂಚಿಸಿರುವ ಕೆಲವು ಅಂಶಗಳಲ್ಲಿ ಪ್ರಮುಖವಾದದ್ದು, ಒಂದು ಬಸ್ಸಿಗೆ ಚಾಲಕನೊಬ್ಬನೇ ಸಾಕು… ಆತನೇ ನಿರ್ವಾಹಕನ ಕೆಲಸವನ್ನು ಮಾಡಬೇಕೆಂಬ ಶಿಫಾರಸ್ಸನ್ನು ಮಾಡಿರುವುದು ಆಶ್ಚರ್ಯವನ್ನುಂಟು ಮಾಡಿದೆ. ಈ ಶಿಫಾರಸ್ಸು ಸಾರಿಗೆ ನೌಕರರ ಸಂಖ್ಯೆಯನ್ನು ಭಾರೀ ಪ್ರಮಾಣದಲ್ಲಿ ಕಡಿಮೆ ಮಾಡುವ ಮೂಲಕ ಸಾರಿಗೆ ನಿಗಮಗಳ ಪುನಃಶ್ಚೇತನ ಮಾಡಲು ಸಾಧ್ಯವೇ ಎಂಬ ಪ್ರಶ್ನೆ ಉದ್ಭವಿಸಿದೆ.

ಇದರೊಂದಿಗೆ ಬಸ್ಸುಗಳನ್ನು ಖರೀದಿ ವಿಚಾರದಲ್ಲಿಯೂ ಶಿಫಾರಸ್ಸು ಮಾಡಲಾಗಿದ್ದು, ಸರ್ಕಾರವು ಬಸ್ಸುಗಳ ಖರೀದಿಗೆ ಹಣಕಾಸು ನೇರವು ನೀಡಕೂಡದು ಬದಲಾಗಿ ಮಧ್ಯವರ್ತಿ ಸಂಸ್ಥೆಗಳು ಒದಗಿಸಬೇಕೆಂದು ಸಹ ಶಿಫಾರಸ್ಸು ಮಾಡಲಾಗಿದೆ.

ಇದರೊಂದಿಗೆ, ಸಾರಿಗೆ ವ್ಯವಸ್ಥೆಯಲ್ಲಿನ ಸೋರಿಕೆ ತಡೆಗಟ್ಟುವುದು, ಸಂಪನ್ಮೂಲ ಸೃಜನೆತೆಗೆ ಒತ್ತು ನೀಡುವುದು, ಸಂಸ್ಥೆಗಳ ಉತ್ತಮ ಸೇವೆಯ ಮೂಲಕ ಲಾಭದಾಯಕವಾಗಿ ಕಾರ್ಯನಿರ್ವಹಿಸುವುದು. ನಾಲ್ಕೂ ಸಾರಿಗೆ ಸಂಸ್ಥೆಗಳ ಸುಸ್ಥಿರ ಕಾರ್ಯ ನಿರ್ವಹಣೆ ಕುರಿತು ವರದಿಯಲ್ಲಿ‌ ಹಲವು ಶಿಫಾರಸ್ಸುಗಳನ್ನು ಸಹ ಮಾಡಿದೆ.

ಎಂ.ಆರ್. ಶ್ರೀನಿವಾಸ ಮೂರ್ತಿ ನೇತೃತ್ವದ ಏಕ ಸದಸ್ಯ ಸಮಿತಿಯ ವರದಿಯನ್ನು ಗೃಹ ಕಚೇರಿ ಕೃಷ್ಣಾದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಭೇಟಿ ಮಾಡಿ ಸಲ್ಲಿಸಿದ್ದಾರೆ. ಈ ಸಂದರ್ಭದಲ್ಲಿ ಮುಖ್ಯಮಂತ್ರಿಯವರ ಪ್ರಧಾನ ಕಾರ್ಯದರ್ಶಿ ಎನ್. ಮಂಜುನಾಥ್ ಪ್ರಸಾದ್, ಕಾರ್ಯದರ್ಶಿ ಜಯರಾಂ ರಾಯಪುರ, ಸಾರಿಗೆ ಇಲಾಖೆ ಕಾರ್ಯದರ್ಶಿ ಪ್ರಸಾದ್, ಕೆಎಸ್‌ಆರ್‌ಟಿಸಿ ವ್ಯವಸ್ಥಾಪಕ ನಿರ್ದೇಶಕ ಅನ್ಬುಕುಮಾರ್ ಮತ್ತು ಇತರ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.

ವರದಿಯ ಕೆಲ ಪ್ರಮುಖಾಂಶಗಳು

  1. ಒಂದು ಬಸ್ಸಿಗೆ ಚಾಲಕ ಮಾತ್ರ ಸಾಕು. ಚಾಲಕನೇ ನಿರ್ವಾಹಕನ ಕೆಲಸ ಮಾಡುವಂತಿರಬೇಕು
  2. ನಾಲ್ಕೂ ಸಾರಿಗೆ ನಿಗಮಗಳಿಗೆ ಮಧ್ಯವರ್ತಿ ಸಂಸ್ಥೆಯಿಂದ ಹಣಕಾಸು ಸಾಲ
  3. ಬಸ್ಸುಗಳ ಖರೀದಿಗೆ ಸರ್ಕಾರ ಹಣ ನೀಡದೇ ಮಧ್ಯವರ್ತಿ ಸಂಸ್ಥೆಯಿಂದ ಹಣಕಾಸು ಒದಗಿಸಬೇಕು
  4. ಸಾರಿಗೆ ನಿಗಮಗಳ ಆರ್ಥಿಕ ನಷ್ಟ ದೂರ ಮಾಡಲು ಹಲವು ಶಿಫಾರಸ್ಸು
  5. ನಿಗಮಗಳು ತಮ್ಮ ಆದಾಯದಲ್ಲೇ ಮುಂದುವರೆಯುವಂತೆ ಮಾಡುವ ಬಗ್ಗೆ ಸಲಹೆ
  6. ಸದ್ಯ ನಾಲ್ಕೂ ನಿಗಮಗಳ ಬಳಿ 24 ಸಾವಿರ ಬಸ್ಸುಗಳಿವೆ
  7. 2030 ರ ಹೊತ್ತಿಗೆ ಬಸ್ಸುಗಳ ಸಂಖ್ಯೆ 40 ಸಾವಿರಕ್ಕೆ ಏರಿಸಲು ಕ್ರಮವಹಿಸಲು ಶಿಫಾರಸು
  8. ಬಸ್ಸುಗಳನ್ನು ನಿಗದಿತ ನಿಲ್ದಾಣದಲ್ಲಿ ಮಾತ್ರವೇ ನಿಲ್ಲಿಸುವಂತಿರಬೇಕು
  9. ಹೀಗೆ 130 ಪುಟಗಳ ವರದಿ ಸಲ್ಲಿಕೆ ಮಾಡಲಾಗಿದೆ
Donate Janashakthi Media

Leave a Reply

Your email address will not be published. Required fields are marked *