ಗ್ಯಾನ್‌ವಾಪಿ ಮಸೀದಿಯ ಆವರಣದೊಳಗೆ ವೀಡಿಯೋ ಚಿತ್ರಣಕ್ಕೆ ಅವಕಾಶ: ಸಿಪಿಐ(ಎಂ) ಕಳವಳ

ನವದೆಹಲಿ: ವಾರಣಾಸಿಯ ಜಿಲ್ಲಾ ನ್ಯಾಯಾಲಯವು ಗ್ಯಾನ್‌ವಾಪಿ ಮಸೀದಿಯ ಆವರಣದೊಳಗೆ ತನ್ನ ಮೇಲ್ವಿಚಾರಣೆಯಲ್ಲಿ ವೀಡಿಯೊ ಚಿತ್ರಣ ನಡೆಸಲು ಅವಕಾಶ ನೀಡುವ ಅನಪೇಕ್ಷಿತ ನಿರ್ಧಾರವನ್ನು ತೆಗೆದುಕೊಂಡಿದೆ. ಇದರಿಂದ ಕೋಮುವಾದಿ ಶಕ್ತಿಗಳು ಬಳಸಬಹುದಾದ ಒಂದು ಸನ್ನಿವೇಶ ಉಂಟಾಗಿದೆ. ಇದು ಸರಿಯಾಗಿ ಪರಿಗಣಿಸದ ನಿರ್ಧಾರ ಎಂದು ಭಾರತ ಕಮ್ಯೂನಿಸ್ಟ್‌ ಪಕ್ಷ (ಮಾರ್ಕ್ಸ್‌ವಾದಿ)-ಸಿಪಿಐ(ಎಂ) ಪರವಾಗಿ ಪೊಲಿಟ್‍ ಬ್ಯುರೊ ಗಂಭೀರ ಕಳವಳ ವ್ಯಕ್ತಪಡಿಸಿದೆ.

ಸುಪ್ರೀಂ ಕೋರ್ಟ್ ಈಗ ಈ ವಿಷಯದಲ್ಲಿ ಮಧ್ಯಪ್ರವೇಶಿಸಿದೆ. ಈ ವಿಷಯದಲ್ಲಿ ಅತ್ಯಂತ ಎಚ್ಚರಿಕೆ ವಹಿಸಬೇಕು, ಮತ್ತು ಧಾರ್ಮಿಕ ಸ್ಥಳಗಳು(ವಿಶೇಷ ನಿಬಂಧನೆಗಳು) ಕಾಯಿದೆ, 1991 ರ ಅಂಶದ ಮತ್ತು ಆಶಯದ ಯಾವುದೇ ಉಲ್ಲಂಘನೆ ನಡೆಯಬಾರದು ಎಂದು ಸಿಪಿಐ(ಎಂ) ಆಗ್ರಹಿಸಿವುದಾಗಿ ಪೊಲಿಟ್‍ ಬ್ಯುರೊ ತಿಳಿಸಿದೆ. ಧಾರ್ಮಿಕ ಸ್ಥಳಗಳನ್ನು ಕುರಿತಂತೆ ಇಂತಹ ವಿವಾದಗಳನ್ನು ತಪ್ಪಿಸಬೇಕು  ಮತ್ತು ಅವುಗಳ ಅಸ್ತಿತ್ವದಲ್ಲಿರುವ ಸ್ವರೂಪವನ್ನು ಬದಲಾಯಿಸುವ ಪ್ರಯತ್ನಗಳನ್ನು ಅನುಮತಿ ನೀಡಬಾರದು ಎಂಬುದಕ್ಕಾಗಿಯೇ  ಎಂದು ಖಚಿತಪಡಿಸಿಕೊಳ್ಳಲು ಈ ಕಾಯಿದೆಯು ಅಸ್ತಿತ್ವಕ್ಕೆ ಬಂದಿದೆ ಎಂದು  ಪೊಲಿಟ್‍ ಬ್ಯುರೊ ಹೇಳಿದೆ.

Donate Janashakthi Media

Leave a Reply

Your email address will not be published. Required fields are marked *