ನವದೆಹಲಿ: ಜಾತಿ-ಆಧಾರಿತ ಜನಗಣತಿಯೊಂದನ್ನು ನಡೆಸಬೇಕು ಎಂಬ ಬೇಡಿಕೆ ಮತ್ತೆ ಎದ್ದು ಬಂದಿದೆ. ಸಾಮಾನ್ಯ ಜನಗಣತಿಯಲ್ಲಿ ಪರಿಶಿಷ್ಟ ಜಾತಿಗಳು ಮತ್ತು ಪರಿಶಿಷ್ಟ ಬುಡಕಟ್ಟುಗಳ ಗಣತಿ ಮಾಡುವುದನ್ನು ಬಿಟ್ಟರೆ, ಇತರ ಹಿಂದುಳಿದ ವರ್ಗಗಳ ದತ್ತಾಂಶ ಲಭ್ಯವಿಲ್ಲ. ಇತರ ಹಿಂದುಳಿದ ವರ್ಗಗಳ ವಿವಿಧ ವಿಧಗಳ ಒಂದು ಕರಾರುವಾಕ್ಕಾದ ಲೆಕ್ಕ ಇರುವುದು ಅಗತ್ಯವಾಗಿದೆ.
ಆದ್ದರಿಂದ 2021ರ ಸಾಮಾನ್ಯ ಜನಗಣತಿಯೊಂದಿಗೆ ಜಾತಿ ಜನಗಣತಿಯನ್ನೂ ನಡೆಸಬೇಕು ಎಂಬ ಬೇಡಿಕೆಯನ್ನು ತಾನು ಬೆಂಬಲಿಸುವುದಾಗಿ ಭಾರತ ಕಮ್ಯೂನಿಸ್ಟ್ ಪಕ್ಷ (ಮಾರ್ಕ್ಸ್‌ವಾದಿ)-ಸಿಪಿಐ(ಎಂ) ಹೇಳಿದೆ.