ಬೆಳಗಾವಿ: 62 ವರ್ಷ ವಯಸ್ಸಿನ ವ್ಯಕ್ತಿಯೋರ್ವ ‘ತಾನು ಬದುಕಿದ್ದೇನೆ’ ಎಂದು ಸಾಬೀತುಪಡಿಸಲು ಕಂದಾಯ ಕಚೇರಿಗೆ ಅಲೆಯುತ್ತಿದ್ದು, ಅಧಿಕಾರಗಳ ಎಡವಟ್ಟಿಗೆ ವೃದ್ಧ ವ್ಯಥೆ ಪಡುವಂತಾಗಿದೆ. ಸುಮಾರು 17 ತಿಂಗಳುಗಳಿಂದ ಕಚೇರಿಯಿಂದ ಕಚೇರಿ ಅಲೆಯುತ್ತಿದ್ದಾರೆ ಎಂದು ದಿ ನ್ಯೂ ಇಂಡಿಯನ್ ಎಕ್ಸ್ಪ್ರೆಸ್’ ವರದಿ ಮಾಡಿದೆ.
ಕಂದಾಯ ಕಚೇರಿಯಲ್ಲಿ ಸಿಬ್ಬಂದಿಯೊಬ್ಬರು ಮಾಡಿದ ಎಡವಟ್ಟಿನಿಂದಾಗಿ ಬೆಳಗಾವಿ ತಾಲೂಕಿನ ಸಾವಗಾಂವ್ ಗ್ರಾಮದ ವ್ಯಕ್ತಿಯೊಬ್ಬರನ್ನು ‘ಮೃತಪಟ್ಟಿದ್ದಾರೆ’ ಎಂದು ಘೋಷಿಸಲಾಗಿತ್ತು. ಅಷ್ಟೇ ಅಲ್ಲ, ಅವರಿಗೆ ಸಂಬಂಧಿಸಿದ ಆಧಾರ್ ಕಾರ್ಡ್ನಂಥ ಪ್ರಮುಖ ದಾಖಲೆಗಳನ್ನೆಲ್ಲ ಎದ್ದುಗೊಳಿಸಲಾಗಿತ್ತು. ಪರಿಣಾಮವಾಗಿ ವೃದ್ಧ ಕಚೇರಿಗೆ ಅಲೆಯುವ ಸ್ಥಿತಿ ನಿರ್ಮಾಣವಾಗಿದೆ.
ಗಣಪತಿ ಮತ್ತು ಅವರ ಸಹೋದರರು ತಮ್ಮ ಅಜ್ಜನ ಹೆಸರಿನಲ್ಲಿದ್ದ 6 ಎಕರೆ 23 ಗುಂಟೆ ಜಮೀನಿನ ಮೇಲೆ ಹಕ್ಕು ಪಡೆಯಲು “ಉತ್ತರಾಧಿಕಾರ ಪ್ರಮಾಣಪತ್ರ”ಕ್ಕೆ ಅರ್ಜಿ ಸಲ್ಲಿಸಿದಾಗ ವಿಚಾರ ಬೆಳಕಿಗೆ ಬಂತು. ಅಲ್ಲದೆ, ಸಮಸ್ಯೆಯೂ ಸೃಷ್ಟಿಯಾಯಿತು. ಗಣಪತಿಯವರ ತಾತ ಮಸಣು ಶಟ್ಟು ಕಾಕತ್ಕರ್ ಅವರು 1976 ರ ಫೆಬ್ರವರಿ 2ರಂದು ನಿಧನರಾಗಿದ್ದರು. ಅವರು ಸಾಯುವ ಮೊದಲು ಮೂವರು ಗಂಡು ಮಕ್ಕಳಿಗೆ ತಲಾ 9 ಎಕರೆ ಭೂಮಿಯನ್ನು ವರ್ಗಾಯಿಸಿದ್ದರು ಮತ್ತು 6 ಎಕರೆ ಮತ್ತು 23 ಗುಂಟೆ ಜಮೀನನನ್ನು ತಮಗಾಗಿ ಇಟ್ಟುಕೊಂಡಿದ್ದರು.ಬೆಳಗಾವಿ
ಇದನ್ನೂ ಓದಿ : ಆರ್ಡರ್ ಮಾಡಿದ್ದ ಆಹಾರವನ್ನು ತಲುಪಿಸದ ಕಾರಣ ಜೊಮ್ಯಾಟೊ ಹಾಗೂ ಡಾಮಿನೋಸ್ ಸಂಸ್ಥೆಗಳಿಗೆ 40 ಸಾವಿರ ರೂ. ದಂಡ
ಮಸಣು ಶಟ್ಟು ಕಾಕತ್ಕರ್ ಮರಣದ ನಂತರವೂ ಅವರ ಮೂವರು ಪುತ್ರರು ಜಮೀನನ್ನು ತಮ್ಮ ಹೆಸರಿಗೆ ವರ್ಗಾಯಿಸಿರಲಿಲ್ಲ. ಕೆಲವು ವರ್ಷಗಳ ನಂತರ, ಮಸಾನು ಅವರ ಮೂವರು ಪುತ್ರರು ನಿಧನರಾದರು. ಗಣಪತಿ ಸೇರಿದಂತೆ ಮಸಣೂರಿನ ಎಂಟು ಮೊಮ್ಮಕ್ಕಳು ಎರಡು ವರ್ಷಗಳ ಹಿಂದೆ ಜಮೀನನ್ನು ತಮ್ಮ ಹೆಸರಿಗೆ ವರ್ಗಾಯಿಸಲು ನಿರ್ಧರಿಸಿದ್ದರು ಎಂದು ವರದಿ ಉಲ್ಲೇಖಿಸಿದೆ.
ಉತ್ತರಾಧಿಕಾರ ಪ್ರಮಾಣಪತ್ರಕ್ಕಾಗಿ ಅರ್ಜಿ ಸಲ್ಲಿಸಲು ತಹಶೀಲ್ದಾರ್ ಕಚೇರಿಯಿಂದ ಮೊಮ್ಮಕ್ಕಳು ತಮ್ಮ ಅಜ್ಜನ ಮರಣ ಪ್ರಮಾಣಪತ್ರವನ್ನು ಸ್ವೀಕರಿಸದಿದ್ದಾಗ, ಅವರು ಬೆಳಗಾವಿಯ ನಾಲ್ಕನೇ ಜೆಎಂಎಫ್‌ಸಿ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದರು.
ಹಿಂಡಲಗಾ ಕಂದಾಯ ನಿರೀಕ್ಷಕರ ಕಚೇರಿಯಲ್ಲಿ ಮರಣ ಪ್ರಮಾಣ ಪತ್ರ ಸಿದ್ಧಪಡಿಸಿದ ಬಳಿಕ ಅಲ್ಲಿನ ಕಂಪ್ಯೂಟರ್ ಆಪರೇಟರ್ ಒಬ್ಬರು ಗಣಪತಿ ಅವರಿಗೆ ಗುರುತಿನ ಪುರಾವೆಯಾಗಿ ಆಧಾರ್ ಕಾರ್ಡ್ ನೀಡುವಂತೆ ತಿಳಿಸಿದ್ದರು. ಆದರೆ, ಕಂಪ್ಯೂಟರ್ ಆಪರೇಟರ್ ತಪ್ಪಾಗಿ ಗಣಪತಿ ಅವರ ಅಜ್ಜನ ಬದಲಿಗೆ ಅವರದ್ದೇ ಆಧಾರ್ ಕಾರ್ಡ್ ಸಂಖ್ಯೆಯನ್ನು ನಮೂದಿಸಿ ಮರಣ ಪ್ರಮಾಣ ಪತ್ರದಲ್ಲಿ ಮುದ್ರಿಸಿದ್ದರು. ಅದೇ ವೇಳೆಗೆ ಗಣಪತಿ ಅವರ ಆಧಾರ್ ನಂಬರ್ ಲಾಕ್ ಆಗಿದ್ದು, ಪಡಿತರ ಚೀಟಿಯಿಂದ ಅವರ ಹೆಸರನ್ನು ಅಳಿಸಿ, ‘ಜೀವಂತವಾಗಿಲ್ಲ’ ಎಂದು ಗುರುತು ಹಾಕಲಾಗಿತ್ತು.
2023ರ ಆಗಸ್ಟ್ 3ರಂದು ಇದು ಗಣಪತಿ ಗಮನಕ್ಕೆ ಬರುತ್ತದೆ. ನಂತರ ಅವರು ತಹಶೀಲ್ದಾರ್ ಸೇರಿದಂತೆ ಸ್ಥಳೀಯ ಎಲ್ಲ ಕಚೇರಿಗಳಿಗೆ ಭೇಟಿ ನೀಡಿ ಸಮಸ್ಯೆ ಬಗ್ಗೆ ವಿರಿಸಿದ್ದರು. ಆದರೆ, ಯಾವೊಬ್ಬ ಅಧಿಕಾರಿಯೂ ಸಮಸ್ಯೆಗೆ ಪರಿಹಾರ ಒದಗಿಸಿಲ್ಲ ಎಂದು ವರದಿ ತಿಳಿಸಿದೆ.
ಇದನ್ನೂ ನೋಡಿ : ಸೈಬರ್ ಕಳ್ಳರ ಬಗ್ಗೆ ಎಚ್ಚರವಿರಲಿ Janashakthi Media #Cybercrime #Cyberfraud #CyberPolice