– ಭಾವನ ಟಿ.
ಗೆಳೆಯ…
ಈ ತೆನೆ ಹೊತ್ತು,
ನಗು ಚೆಲ್ಲುತ್ತಿರುವ ,
ಬತ್ತದ ಪೈರಿನಂತೆ,
ನಮ್ಮೀ ಒಲವು,
ಎಲ್ಲರ ಹಸಿದ ಹೊಟ್ಟೆ,
ತುಂಬಿಸಬೇಕು..!
ನಡೀ ಆ ಕಬ್ಬನ್ನು,
ಒಟ್ಟು ಮಾಡಿ ರಾಶಿ ಹಾಕಿ,
ಆಲೆಮನೆಯೆಡೆ ಕೊಂಡೊಯ್ದು,
ಪ್ರಣಯದ ರಸವ ಹಿಂಡಿ,
ಹದವಾಗಿ ಕುದಿಸಿ,
ಬೇಯಿಸಿ,
ಒಲವಿನ ಬೆಲ್ಲದಂಟನ್ನು,
ಸವಿದುಬಿಡೋಣ..!
ನಿಜವಾದ ನಮ್ಮೀ ಪ್ರೀತಿ – ಪ್ರೇಮ,
ಮಾಗಬೇಕಿರುವುದು,
ಬತ್ತದ ಗದ್ದೆಯ ಬದುವಿನಂಚಿನಲ್ಲಿ,
ಮತ್ತು ಬೆಳೆದು ನಿಂತ
ಈ ಸಿಹಿಯಾದ,
ಸವಿಯಾದ,
ಕಬ್ಬಿನ ತೋಟದಲ್ಲಿಯೇ ಇನಿಯ..!
ಮತ್ತಷ್ಟು,
ಆಳವಾಗಿ,
ಮೊಗೆದಷ್ಟು,
ಹೆಚ್ಚಾಗುವ,
ರಸವತ್ತಾದ,
ರುಚಿಯಾದ,
ಪ್ರೇಮದ ಮಧುವ,
ಹೀರಿಬಿಡೋಣ ಬಾರೋ ಗೆಳೆಯ..!