ಮದುರೈ :ತಮಿಳುನಾಡಿನ ಮಧುರೈನಲ್ಲಿ ಸಿಪಿಐ(ಎಂ)ನ 24 ನೇ ಮಹಾಧಿವೇಶನ ನಡೆಯುತ್ತಿರುವ ಸಂದರ್ಭದಲ್ಲಿ ಎಪ್ರಿಲ್ 3ರಂದು “ ಒಕ್ಕೂಟ ತತ್ವ ಭಾರತದ ಶಕ್ತಿ” ಎಂಬ ಒಂದು ವಿಶೇಷ ವಿಚಾರಸಂಕಿರಣವನ್ನು ಏರ್ಪಡಿಸಲಾಯಿತು. ಒಕ್ಕೂಟ
ಇದರಲ್ಲಿ ಸಿಪಿಐ(ಎಂ)ನ ಹಿರಿಯ ಪೊಲಿಟ್‍ಬ್ಯುರೊ ಸದಸ್ಯರಾದ ಪ್ರಕಾಶ ಕಾರಣ್, ತಮಿಳುನಾಡಿನ ಮುಖ್ಯಮಂತ್ರಿ ಎಂ ಕೆ ಸ್ಟಾಲಿನ್, ಕೇರಳದ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಮತ್ತು ಕರ್ನಾಟಕ ಸರಕಾರವನ್ನು ಪ್ರತಿನಿಧಿಸಿ ಉನ್ನತ ಶಿಕ್ಷಣ ಮಂತ್ರಿ ಎಂಸಿ ಸುಧಾಕರ್ ಮಾತನಾಡಿದರು.
ಆಳುವ ಪಕ್ಷಕ್ಕೆ ಕ್ಕೂಟ ತತ್ವದ ಬಗ್ಗೆ ಅಲರ್ಜಿ ಇದೆ… 2012 ರಲ್ಲಿ ನರೇಂದ್ರ ಮೋದಿ ಮುಖ್ಯಮಂತ್ರಿಯಾಗಿದ್ದಾಗ ಸರ್ಕಾರಿಯಾ ಆಯೋಗ ಮತ್ತು ಪುಂಚಿ ಆಯೋಗದ ಶಿಫಾರಸುಗಳನ್ನು ಅಂಗೀಕರಿಸುವಂತೆ ಕರೆ ನೀಡಿದ್ದರು. ನಾನು ಮೋದಿ ಅವರನ್ನು ಕೇಳುತ್ತೇನೆ, ನಿಮ್ಮ ಮೂರು ಅವಧಿಗಳಲ್ಲಿ, ಈ ಶಿಫಾರಸುಗಳನ್ನು ಕಾರ್ಯಗತಗೊಳಿಸಲು ನೀವು ಏನು ಮಾಡಿದ್ದೀರಿ? ಎಂದು ತಮಿಳುನಾಡು ಮುಖ್ಯಮಂತ್ರಿ ಎಂ ಕೆ ಸ್ಟಾಲಿನ್ ಪ್ರಶ್ನಿಸಿದರು. ಪ್ರಧಾನ
ಮಂತ್ರಿಗಳು “ಒಂದು ರಾಷ್ಟ್ರ, ಒಂದು ಚುನಾವಣೆ, ಒಂದು ಸಂಸ್ಕೃತಿ’ ಎಂಬಿತ್ಯಾದಿ ಘೋಷಣೆಗಳ ಮೂಲಕ ಒಂದು ಏಕಘಟಕ ವ್ಯವಸ್ಥೆಯನ್ನು ಸೃಷ್ಟಿಸಲು ಪ್ರಯತ್ನಿಸುತ್ತಿದ್ದಾರೆ. ಇದು ಫ್ಯಾಸಿಸಂಗೆ ದಾರಿಮಾಡಿಕೊಡುತ್ತದೆಯಾದ್ದರಿಂದ ಇಂತಹ ಪ್ರಯತ್ನಗಳನ್ನು ನಾಶ ಮಾಡುವ ಒಂದೇ ದಾರಿಯೆಂದರೆ ಸತತ ಪ್ರಚಾರ ಮತ್ತು ಕೇಂದ್ರದಲ್ಲಿ ಆಳ್ವಿಕೆಯನ್ನು ಬದಲಿಸುವುದು ಎಂದು ಅವರು ಹೇಳಿದರು.
ಇದನ್ನೂ ನೋಡಿ : ಸಿಪಿಐ(ಎಂ) ಮಹಾಧಿವೇಶನ : ಗಾಜಾ ನರಮೇಧವನ್ನು ಖಂಡಿಸಿ ನಿರ್ಣಯ ಅಂಗೀಕಾರ ಒಕ್ಕೂಟ
ಕೇರಳ ಮುಖ್ಯಮಂತ್ರಿ ಮತ್ತು ಸಿಪಿಐ(ಎಂ) ಪೊಲಿಟ್ ಬ್ಯೂರೋ ಸದಸ್ಯ ಕಾಮ್ರೇಡ್ ಪಿಣರಾಯಿ ವಿಜಯನ್ ಮಾತಾಡುತ್ತ. ನಮ್ಮ ರಾಜಕೀಯ ವ್ಯವಸ್ಥೆ ಹೆಚ್ಚು ಏಕಘಟಕ ಸ್ವರೂಪವನ್ನು ಪಡೆಯುತ್ತಿದೆಯೇ? ಇದು ಇಂದು ಭಾರತದಲ್ಲಿ ಒಕ್ಕೂಟ ತತ್ವ ಎದುರಿಸುತ್ತಿರುವ ಪಿಡುಗು… ರಾಜ್ಯಗಳು ತಮಗೆ ಸಾಂವಿಧಾನಿಕವಾಗಿ ಹಂಚಿಕೆಯಾಗಿರುವ ಬಾಬ್ತುಗಳ ಮೇಲೆ ಖರ್ಚು ಮಾಡಲು ಸಂಪೂರ್ಣ ಸ್ವಾತಂತ್ರ್ಯವನ್ನು ಹೊಂದಿರಬೇಕು. ರಾಜ್ಯಗಳು ಆಳುವ ಪಕ್ಷದ ಬ್ರಾಂಡ್ ರಾಯಭಾರಿಗಳಾಗಿ ಕಾರ್ಯನಿರ್ವಹಿಸಬೇಕು ಎಂದು ಆಗ್ರಹಿಸುವುದು ಒಕ್ಕೂಟ ತತ್ವದ ಬೇರುಗಳನ್ನೇ ಕತ್ತರಿಸುತ್ತದೆ ಎಂದು ಹೇಳಿದರು.
ಕಾರ್ಪೊರೇಟ್ ಕಾರ್ಯಸೂಚಿಯಿಂದ ಮತ್ತು ಬಹುಸಂಖ್ಯಾಕ ಕೋಮುವಾದದಿಂದ ಬೆಂಬಲಿತವಾದಸರ್ವಾಧಿಕಾರಿರಶಾಹೀ ಪ್ರವೃತ್ತಿಗಳ ವಿರುದ್ಧ ನಾವು ಪರಿಣಾಮಕಾರಿಯಾಗಿ ಕೆಲಸ ಮಾಡಬೇಕಾಗಿದೆ ಎಂದು ಅವರು ಹೇಳಿದರು.
ಕರ್ನಾಟಕದ ಉನ್ನತ ಶಿಕ್ಷಣ ಸಚಿವ ಎಂ.ಸಿ. ಸುಧಾಕರ್ ತಮ್ಮ ಭಾಷಣದಲ್ಲಿ, ದಕ್ಷಿಣದ ಎಲ್ಲಾ ರಾಜ್ಯಗಳು ಅನ್ಯಾಯಕ್ಕೆ ಒಳಗಾಗಿವೆ. ನಾವು ಒಟ್ಟಾಗಿ ಹೋರಾಡಬೇಕಾಗಿದೆ. ನ್ಯಾಯಕ್ಕಾಗಿ ನಮ್ಮ ಕೂಗನ್ನು ಸಾಮೂಹಿಕವಾಗಿ ವ್ಯಕ್ತಪಡಿಸಲು ನಾವು ಇಲ್ಲಿದ್ದೇವೆ. ಸಹಕಾರಿ ಒಕ್ಕೂಟದ ನೀತಿ ಒಂದು ಆಯ್ಕೆಯಲ್ಲ. ಇದು ನಮ್ಮ ಸಂವಿಧಾನದ ಆತ್ಮ. ಇದು ಕೇವಲ ನೀತಿ ವಿಷಯವಲ್ಲ. ಇದು ಭಾರತೀಯ ಒಕ್ಕೂಟಕ್ಕೆ ಬೆದರಿಕೆ ಎಂದು ಹೇಳಿದರು.
ಸಿಪಿಐ(ಎಂ)ನ ಹಿರಿಯ ಮುಖಂಡರಾದ ಪ್ರಕಾಶ್ ಕಾರಟ್ ಸ್ವಾತಂತ್ರ್ಯದ ನಂತರ ಯಾವುದೇ ಸಮಯದಲ್ಲಿ ಸಂವಿಧಾನದ ಮೂಲ ಲಕ್ಷಣವಾದ ಒಕ್ಕೂಟದ ತತ್ವದ ಮೇಲೆ ಇಷ್ಟು ಗಂಭೀರ ದಾಳಿ ನಡೆದಿಲ್ಲ. ಇಂದು, ಭಾರತೀಯ ಒಕ್ಕೂಟವನ್ನು ಒಳಗೊಂಡಿರುವ ರಾಜ್ಯಗಳನ್ನು ಅಧೀನ ಸ್ಥಿತಿಗೆ ಇಳಿಸಲಾಗುತ್ತಿದೆ" ಎಂದು ಹೇಳಿದರು.