ಓದುಗರ ಬರಹಗಳಿಗೆ ಆಹ್ವಾನ : ಕೊರೊನಾ ಕಾಲದ ಮರೆಯಲಾಗದ ಅನುಭವ ಕಥನ

ಓದುಗರ ಬರಹಗಳಿಗೆ ಆಹ್ವಾನ
ಕೊರೊನಾ ಕಾಲದ ಮರೆಯಲಾಗದ ಅನುಭವ ಕಥನ

 

ಕೊರೊನಾ ಕಾಲ ಎಲ್ಲರನ್ನೂ ಒಂದಲ್ಲ ಒಂದು ರೀತಿಯಲ್ಲಿ ತಟ್ಟಿದೆ. ಕೊರೊನಾಗೆ ತುತ್ತಾದವರನ್ನು, ಕೊರೊನಾ ವಿರುದ್ಧ ಹೋರಾಡಿದ ಮುಂಚೂಣಿಯ ಯೋಧರನ್ನು, ಲಾಕ್ ಡೌನ್ ನ ಪರಿಣಾಮವಾಗಿ ವಿವಿಧ ರೀತಿಯಲ್ಲಿ ಸಂಕಟಕ್ಕೆ ಒಳಗಾಗಿ ನರಳಿದವರನ್ನು, ಇವರ ನೋವನ್ನು ಹಂಚಿಕೊoಡ ನಿಕಟವರ್ತಿಗಳನ್ನು, ಈ ಮಾನವೀಯ ಬಿಕ್ಕಟ್ಟಿನ ಪರಿಹಾರಕ್ಕೆ ದುಡಿದವರನ್ನು – ಹಲವು ಬಗೆಯ ವ್ಯಕ್ತ ಅವ್ಯಕ್ತ ನೆಲೆಯ ಮರೆಯಲಾಗದ ಅನುಭವಗಳು ತಟ್ಟಿವೆ. ನೋವು, ಸಂಕಟ ಭೀತಿ ವಿಹ್ವಲತೆ, ಅರಿವಿಗೇ ಸಿಗದ ಕಸಿವಿಸಿಗಳು ಎಲ್ಲರನ್ನೂ ಕಾಡಿವೆ. ಲಾಕ್ ಡೌನ್ ಕಾಲದ ದುಡಿಯುವ ಜನರ ಸಂಕಟಗಳಂತೂ ಪದ ವಿವರಣೆಯ ಅಳತೆ ಮೀರಿದ್ದಾಗಿತ್ತು.

ನಾವು ಕಂಡ ಕೇಳಿದ ಅನುಭವಿಸಿದ ಅನುಭವದ ಕೆಲವು ತುಣುಕುಗಳನ್ನು ಬರೆಯುವ ಮೂಲಕ ದಾಖಲಿಸೋಣ. ಇದು ಜನಶಕ್ತಿ ಮಿಡಿಯಾದ ಆಹ್ವಾನ. ಆಯ್ದ ಬರಹಗಳನ್ನು ಪ್ರಕಟಿಸುತ್ತೇವೆ.

ಬರಹವನ್ನು 20 ಸೆಪ್ಟೆಂಬರ್ 2020 ಒಳಗೆ ಕಳಿಸಿ

* ಬರಹ 500 ಪದಗಳನ್ನು ಮೀರದಿರಲಿ
* ನುಡಿ ಅಥವ ಯುನಿಕೋಡ್ ತಂತ್ರಾಂಶದಲ್ಲಿರಲಿ
* ಪ್ರತ್ಯೇಕ ಫೈಲಿನಲ್ಲಿ ನಿಮ್ಮ ಹೆಸರು ಅಂಚೆ ವಿಳಾಸ, ಮೊಬೈಲ್/ವಾಟ್ಸಪ್ ನಂಬರ್, ಈ ಮೇಲ್ ವಿಳಾಸ ಒದಗಿಸಿ. ಇತ್ತೀಚೆಗಿನ ಪಾಸ್ ಪೋರ್ಟ್ ಅಳತೆಯ ಭಾವಚಿತ್ರದೊಂದಿಗೆ ನೂರು ಪದ ಮೀರದಂತೆ ಕಿರು ಪರಿಚಯವನ್ನು ಕಳುಹಿಸಿ.
* ಬರಹ ಮತ್ತು ಕಿರುಪರಿಚಯವನ್ನು [email protected] ಗೆ ಈ ಮೈಲ್ ನಲ್ಲಿ ಕಳಿಸಿ

 

 

Donate Janashakthi Media

Leave a Reply

Your email address will not be published. Required fields are marked *