ಭುವನೇಶ್ವರ: ಭತ್ತ ಸಂಗ್ರಹಣೆ ಮತ್ತು ರೈತರ ಸಮಸ್ಯೆಗಳ ಕುರಿತು ರಾಜ್ಯ ಸರಕಾರದ ಧೋರಣೆಯನ್ನು ಖಂಡಿಸಿ ಭಾರತೀಯ ಜನತಾ ಪಕ್ಷ(ಬಿಜೆಪಿ)ದ ಶಾಸಕ ವಿಧಾನಸಭೆಯಲ್ಲಿ ಆತ್ಮಹತ್ಯೆ ಹತ್ನಿಸಿರುವ ಘಟನೆ ನಡೆದಿದೆ. ದಿಯೋಗಢ ಶಾಸಕ ಸುಭಾಷ್ ಚಂದ್ರ ಪಾಣಿಗ್ರಹಿ ಸ್ಯಾನಿಟೈಸರ್ ಕುಡಿದು ಆತ್ಮಹತ್ಯೆ ಯತ್ನಿಸಿದ್ದಾರೆ.
ಆಹಾರ ಮತ್ತು ಗ್ರಾಹಕ ಕಲ್ಯಾಣ ಸಚಿವ ರನೇಂದ್ರ ಸ್ವೇನ್ ವಿಧಾನಸಭಾ ಅಧಿವೇಶನದಲ್ಲಿ ಪಡಿತರ ಮತ್ತು ಇತರೆ ವ್ಯವಸ್ಥೆಯ ವಿಚಾರದ ಬಗ್ಗೆ ಮಾತನಾಡುತ್ತಿದ್ದ ವೇಳೆಯೇ ಸುಭಾಷ್ ಪಾಣಿಗ್ರಹಿ ಸ್ಯಾನಿಟೈಸರ್ ಕುಡಿದರು. ಹತ್ತಿರದಲ್ಲೇ ಇದ್ದ ಸಂಸದೀಯ ವ್ಯವಹಾರಗಳ ಸಚಿವ ಬಿಕ್ರಮ್ ಕೇಶರಿ ಅರುಖಾ ಮತ್ತು ಇತರ ಶಾಸಕರು ಸ್ಯಾನಿಟೈಸರ್ ಕಸಿದುಕೊಂಡರು.
ರಾಜ್ಯದಲ್ಲಿ ಫೆಬ್ರವರಿ 26ರವರೆಗೆ 10.53 ಲಕ್ಷ ನೋಂದಾಯಿತ 57.67 ಲಕ್ಷ ಟನ್ ಭತ್ತವನ್ನು ಸಂಗ್ರಹಿಸಲಾಗಿದೆ. ಇದುವರೆಗೆ 11.25 ಲಕ್ಷ ನೋಂದಾಯಿತ ರೈತರಿಂದ 60.4 ಲಕ್ಷ ಟನ್ ಭತ್ತವನ್ನು ಸಂಗ್ರಹಿಸಲಾಗಿದೆ. ಫೆಬ್ರವರಿ 26 ರಿಂದ ಮಾರ್ಚ್ 12ರ ಅವಧಿಯಲ್ಲಿ 70,000 ರೈತರಿಂದ 2.73 ಲಕ್ಷ ಟನ್ ಭತ್ತವನ್ನು ಸಂಗ್ರಹಿಸಲಾಗಿದೆ ಎಂದು ಸದನದಲ್ಲಿ ಸಚಿವರು ವಿವರಿಸಿದರು.
ಘಟನೆಯ ನಂತರ ವಿಧಾನಸಭೆಯ ಅಧಿವೇಶನದಲ್ಲಿ ವಿಪರೀತ ಗದ್ದಲ ಉಂಟಾದ ಪರಿಣಾಮವಾಗಿ ಅಧಿವೇಶವನವನ್ನು ಮೂಂದೂಡಿದರು.
ʻʻರೈತರು ಆತ್ಮಹತ್ಯೆಗಳು ಹೆಚ್ಚಾಗುತ್ತಿವೆ. ನೀವು ಏನು ಮಾಡುತ್ತಿದ್ದೀರಿ ಎಂದು ಜನತೆ ನಮ್ಮನ್ನು ಪ್ರಶ್ನೆ ಮಾಡುತ್ತಿದ್ದಾರೆ. ಇದರಿಂದ ಸಾಯುವುದೇ ಉತ್ತಮʼʼ ಎಂದು ರಾಜ್ಯ ಸರಕಾರವು ರೈತರ ಬೇಡಿಕೆಗಳಿಗೆ ಕಿವಿಗೊಡದ ಪರಿಣಾಮದಿಂದ ಬೇಸತ್ತು ಆತ್ಮಹತ್ಯೆಗೆ ಯತ್ನಿಸಿದ ಅವರು ದಿಯೋಘರ್ ಜಿಲ್ಲೆಯ ಎಲ್ಲಾ 29 ಪ್ರಾಥಮಿಕ ಕೃಷಿ ಸಹಕಾರಿ ಸಂಘಗಳಲ್ಲಿ (ಪಿಎಸಿಎಸ್) ಭತ್ತವನ್ನು ಸಂಗ್ರಹಿಸುತ್ತಿಲ್ಲ ಎಂದು ಆರೋಪಿಸಿದ್ದಾರೆ.
ವಿಧಾನಸಭಾ ಅಧಿವೇಶನದಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ಸದಸ್ಯರು ರಾಜ್ಯಾದ್ಯಂತ ಭತ್ತದ ಸಂಗ್ರಹದಲ್ಲಿ ದುರುಪಯೋಗವಾಗುತ್ತಿದೆ ಎಂದು ಗದ್ದಲ ಏರ್ಪಡಿದರು. ಬೆಳಿಗ್ಗೆ 10.30ಕ್ಕೆ ಅಧಿವೇಶನ ಆರಂಭ ಆಗುತ್ತಿದ್ದಂತೆ ಸದನದ ಬಾವಿಗೆ ಗದ್ದಲ ಏರ್ಪಡಿಸಿದರು. ಗದ್ದಲ ಜೋರಾದ ಪರಿಣಾಮವಾಗಿ ಸುರ್ಜ್ಯಾ ನಾರಾಯನ್ ಪತ್ರೊ 11.30ಕ್ಕೆ ಸದನವನ್ನು ಮೂಂದೂಡಿದರು. ಕಾಂಗ್ರೆಸ್ ಶಾಸಕಾಂಗ ಪಕ್ಷದ (ಸಿಎಲ್‌ಪಿ) ನಾಯಕ ನರಸಿಂಗ ಮಿಶ್ರಾ ಮಾತನಾಡಿ ವಿವಿಧ ಮಂಡಿಗಳಲ್ಲಿ ಭತ್ತವನ್ನು ಖರೀದಿ ಮಾಡುವ ವಿಚಾರದಲ್ಲಿ ಸಾಕಷ್ಟು ಮೋಸವಾಗುತ್ತಿದೆ. ರೈತರಿಂದ ಭತ್ತ ಸಂಗ್ರಹಕ್ಕೆ ಶೀಘ್ರದಲ್ಲಿ ಕ್ರಮಕೈಗೊಳ್ಳಬೇಕೆಂದು ಆಗ್ರಹಿಸಿದರು.