ನ್ಯಾಯಾಲಯದ ಆವರಣದಲ್ಲಿಯೇ ವಕೀಲನ ಬರ್ಬರ ಹತ್ಯೆ : ಹಂತಕನನ್ನು ಬಂಧಿಸಿದ ಪೊಲೀಸರು

ಹೊಸಪೇಟೆ : ಹೊಸಪೇಟೆ ಕೋರ್ಟ ಆವರಣದಲ್ಲಿ ವಕೀಲರೊಬ್ಬರನ್ನ ಬರ್ಬರವಾಗಿ ಕೊಲೆ ಮಾಡಲಾಗಿದೆ. ಈ ಕೊಲೆ ಘಟನೆ ಅತ್ಯಂತ ಹಿನ ಹಾಗೂ ಪೈಶಾಚಿಕ ಕೃತ್ಯವಾಗಿದೆ ಎಂದು ಎಐಎಲ್‌ಯು ಆರೋಪಿಸಿದೆ.

     ವಕೀಲರಾದ ತಾರಳ್ಳಿ ವೆಂಕಟೇಶ

ವಕೀಲರಾದ ತಾರಳ್ಳಿ ವೆಂಕಟೇಶ  (48) ಕೊಲೆಯಾದ ವ್ಯಕ್ತಿ ಎಂದು ತಿಳಿದು ಬಂದಿದೆ. ಕೊಲೆಗೈದ ಆರೋಪಿಯನ್ನು ಸ್ಥಳದಲ್ಲಿಯೇ ಪೋಲಿಸರು ಬಂಧಿಸಿದ್ದು, ಕೊಲೆಗೆ ಕಾರಣವೇನು ಎಂಬುದು ಇನ್ನು ತಿಳಿದು ಬಂದಿಲ್ಲ.

ಈ ಕೊಲೆ ಘಟನೆ ಅತ್ಯಂತ ಖಂಡನಿಯ, ದಿನ ನಿತ್ಯ ವಕೀಲರ ಮೇಲೆ ದಾಳಿ, ದೌರ್ಜನ್ಯ , ಕೊಲೆ ಹಾಗೂ ಹಲ್ಲೆಯಂತಹ ಘಟನೆಗಳು ನಡೆಯುತ್ತಿವೆ. ವಕೀಲರಿಗೆ ಹಾಗೂ ವಕೀಲರ ಕುಟುಂಬಗಳಿಗೆ ರಕ್ಷಣೆ ಇಲ್ಲದಂತಾಗಿದೆ. ಈ ಕೂಡಲೇ ಸರಕಾರಗಳು ವಕೀಲರ ರಕ್ಷಣಾ ಕಾಯ್ದೆಯನ್ನು ರೂಪಿಸಿ  ಜಾರಿಗೊಳಿಸಲು ಕ್ರಮ ವಹಿಸಬೇಕು. ಈ  ಕೂಡಲೇ ಪೋಲಿಸರು ಕೊಲೆ ಆರೋಪಿಗೆ ಸೂಕ್ತ ಹಾಗೂ ಸರಿಯಾದ ತನಿಖೆ ನಡೆಸಿ ತಕ್ಕ ಶಿಕ್ಷೆ  ವಿಧಿಸಲು ಮತ್ತು ಅಗತ್ಯವಾದ ಕ್ರಮಗಳನ್ನು ಕೈಗೊಳ್ಳಬೇಕು  ಎಂದು ಅಖಿಲ ಭಾರತ ವಕೀಲರ ಒಕ್ಕೂಟ ಒತ್ತಾಯಿಸಿದೆ.

 

ಪೊಲೀಸರು ಬಂಧಿಸಿರುವ ಆರೋಪಿ

ಈ  ಘಟನೆಯನ್ನು ಜನಪರ ಸಂಘಟನೆಗಳು ಖಂಡಿಸಿದ್ದು ವಕೀಲರಿಗೆ ರಕ್ಷಣೆ ಇಲ್ಲದಂತಾಗಿದೆ. ವಕೀಲರ ಮೇಲೆ ಇಂತಹ ಹಲ್ಲೆಗಳು ಹೆಚ್ಚುತ್ತಿವೆ. ನ್ಯಾಯಾಲಯದ ಆವರಣದಲ್ಲಿ ಅವರು ಓಡಾಡುವುದು ಹೇಗೆ, ಅವರು ಮನೆಗೆ ಬರುವುದು ತಡವಾದರೆ ಅವರ ಕುಟುಂಬಗಳು ಚಡಪಡಿಸುವ ಸ್ಥಿತಿ ನಿರ್ಮಾಣವಾಗಿದೆ. ಮೇಲೋಟಕ್ಕೆ ಪೊಲೀಸರು ಆರೋಪಿಯನ್ನು ಬಂಧಿಸಿದ್ದು, ಅವನೊಬ್ಬನೆ ಇದರ ಹಿಂದೆ ಇದ್ದಂತೆ ಕಾಣುತ್ತಿಲ್ಲ, ಸಮಗ್ರ ತನಿಖೆ ನಡೆಸಬೇಕು ಮತ್ತು ಮೃತ ವಕೀಲ ತಾರಳ್ಳಿ ವೆಂಕಟೇಶ್‌ ರವರ ಕುಟುಂಬಕ್ಕೆ ಸೂಕ್ತ ಪರಿಹಾರ ನೀಡಬೇಕು ಎಂದು ಸಂಘಟನೆಗಳು ಆಗ್ರಹಿಸಿವೆ.

ಜನಶಕ್ತಿ ಮೀಡಿಯಾ ವಾಟ್ಸಪ್ ಸೇರಿಕೊಳ್ಳಲು ಈ ಲಿಂಕ್ ಕ್ಲಿಕ್ ಮಾಡಿ

Donate Janashakthi Media

One thought on “ನ್ಯಾಯಾಲಯದ ಆವರಣದಲ್ಲಿಯೇ ವಕೀಲನ ಬರ್ಬರ ಹತ್ಯೆ : ಹಂತಕನನ್ನು ಬಂಧಿಸಿದ ಪೊಲೀಸರು

  1. ವಕೀಲರಲ್ಲಿ ನನ್ನದೊಂದು ಮನವಿ ನಿರಪರಾಧಿಗಳು ನಿಮ್ಮ ನಡವಳಿಕೆಯಿಂದ ಬೇಸತ್ತಿರಬಹುದು ಹಾಗೂ ಹಣಕ್ಕಾಗಿ ಜನರ ಜೀವವನ್ನೇ ಹಿಂಡಿರುವ ಉದಾಹರಣೆಗಳು ಇರಬಹುದು ದಯಮಾಡಿ ನ್ಯಾಯವಾದಿಗಳೇ ಹಣವಂತರ ಬೆಂಗಾವಲಿಗಿಂತ ನ್ಯಾಯಕ್ಕೆ ಬೆನ್ನೆಲುಬಾಗಿರಿ
    ವಕೀಲರ ಮೇಲೆ ಹಲ್ಲೆ ಮಾಡುವುದು ಅಕ್ಷಮ್ಯ ಅಪರಾಧ ಈ ರೀತಿ ಘಟನೆಗಳು ಮತ್ತೆ ಮರುಕಳಿಸದಂತೆ ಎಚ್ಚರ ವಹಿಸಬೇಕು
    ಈ ಹಲ್ಲೆಯನ್ನ ಪ್ರತಿಯೊಬ್ಬರು ಖಂಡಿಸಬೇಕು

Leave a Reply

Your email address will not be published. Required fields are marked *