ಬೆಂಗಳೂರು ಜ 21 : ನೂತನ ಸಚಿವರಿಗೆ ಖಾತೆ ಹಂಚಿಕೆ ಮಾಡುವ ಕುರಿತು ಕಳೆದ ಮೂರು ದಿನಗಳಿಂದ ಚರ್ಚೆ ನಡೆಯುತ್ತಿತ್ತು ಈಗ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪರಿಂದ ಮಹತ್ವದ ಸೂಚನೆ ಸಿಕ್ಕಿದೆ. ಇಂದು ಬೆಳಗ್ಗೆ 9 ರಿಂದ 10 ಗಂಟೆ ವೇಳೆಗೆ ಖಾತೆ ಹಂಚಿಕೆ ಮಾಡುವ ಸಾಧ್ಯತೆ ಇದೆ.
ಈ ಕುರಿತಂತೆ ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ನೂತನ ಸಚಿವರಿಗೆ ಖಾತೆ ಹಂಚಿಕೆ ಮಾಡುವಂತ ಲೀಸ್ಟ್ ರೆಡಿ ಇದೆ. ಗುರುವಾರ ಬೆಳಿಗ್ಗೆ 9 ಕ್ಕೆ ನೂತನ ಸಚಿವರಿಗೆ ಖಾತೆ ಹಂಚಿಕೆ ಮಾಡಲಾಗುತ್ತದೆ ಎಂಬುದಾಗಿ ತಿಳಿಸಿದ್ದಾರೆ.
ಸಂಪುಟ ವಿಸ್ತರಣೆಯಲ್ಲಿ ಏಳು ಶಾಸಕರು ಮಂತ್ರಿಗಿರಿ ಅಲಂಕರಿಸಿದ್ದರು ಎಸ್. ಅಂಗಾರ, ಸಿ.ಪಿ. ಯೋಗೇಶ್ವರ್, ಎಂ.ಟಿ.ಬಿ. ನಾಗರಾಜ್, ಆರ್.ಶಂಕರ್, ಅರವಿಂದ ಲಿಂಬಾವಳಿ, ಮುರುಗೇಶ ನಿರಾಣಿ, ಉಮೇಶ್ ಕತ್ತಿ ಸೇರಿ 7 ಮಂದಿ ನೂತನ ಸಚಿವರಾಗಿದ್ದಾರೆ.
ಇದನ್ನೂ ಓದಿ : ಖಾತೆ ಹಂಚಿಕೆ : ಯಡಿಯೂರಪ್ಪಗೆ ತಲೆಬಿಸಿ
ಮೂಲಗಳ ಪ್ರಕಾರ ಹಾಲಿ ಇರುವ ಕನಿಷ್ಠ 15 ಖಾತೆಗಳು ಅದಲು ಬದಲಾಗುವ ಸಾಧ್ಯತೆ ಇದೆ. ಇಂದು ಯಾರಿಗೆ ಯಾವ ಖಾತೆ ಸಿಗಲಿದೆ ಎಂಬುದರ ಸಂಭವನೀಯ ಪಟ್ಟಿ ಇಲ್ಲಿದೆ.
ಎಸ್ ಅಂಗಾರ- ಮೀನುಗಾರಿಕೆ, ಬಂದರು
ಸಿ.ಪಿ. ಯೋಗೇಶ್ವರ್-ಸಣ್ಣ ನೀರಾವರಿ
ಎಂಟಿಬಿ ನಾಗರಾಜ್-ಅಬಕಾರಿ
ಆರ್.ಶಂಕರ್ – ಪೌರಾಡಳಿತ
ಅರವಿಂದ ಲಿಂಬಾವಳಿ-ಅರಣ್ಯ
ಮುರುಗೇಶ ನಿರಾಣಿ-ಗಣಿಗಾರಿಕೆ
ಉಮೇಶ್ ಕತ್ತಿ- ಆಹಾರ ಖಾತೆ ಸಿಗುವ ಸಾಧ್ಯತೆ ಇದೆ.
ಖಾತೆಗಳ ಬದಲಾವಣೆ ಸಾಧ್ಯತೆ ಇದ್ದು ಸಚಿವ ಬಸವರಾಜ ಬೊಮ್ಮಾಯಿ, ರಮೇಶ್ ಜಾರಕಿಹೊಳಿ, ಆರ್. ಅಶೋಕ ಮಹತ್ವದ ಖಾತೆ ನೀಡುವಂತೆ ಯಡಿಯೂರಪ್ಪಗೆ ಒತ್ತಡ ಹೇರಿದ್ದು ಇವರ ಖಾತೆಗಳು ಕೂಡ ಬದಲಾಗುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.
ವಿಡಿಯೋ ನೋಡಿ : ಯಡಿಯೂರಪ್ಪ ಸಾಲು ಸಾಲು ಸಭೆ : ಶಾಸಕರ ವಿಸ್ವಾಸಕ್ಕೆ ಮಾಸ್ಟರ್ ಪ್ಲ್ಯಾನ್