ಶಿಮ್ಲಾ : ಹಳೆ ಪಿಂಚಣಿ ಯೋಜನೆಯ ಲಾಭವನ್ನು ಇಂದಿನಿಂದ ನೀಡಲಾಗುವುದು ಮತ್ತು ಈ ಬಗ್ಗೆ ಶೀಘ್ರದಲ್ಲೇ ಅಧಿಸೂಚನೆ ಹೊರಡಿಸಲಾಗುವುದು ಎಂದು ಸಿಎಂ ಸುಖವಿಂದರ್ ಸಿಂಗ್ ಸುಖು ಹೇಳಿದರು.
ಸಚಿವ ಸಂಪುಟ ಸಭೆಯ ನಂತರ ಸಿಎಂ, ಸುದ್ದಿಗಾರರೊಂದಿಗೆ ಮಾತನಾಡುತ್ರಾ, ಎನ್ ಪಿಎಸ್ ಯೋಜನೆಯನ್ನು ರದ್ದು ಮಾಡಿ ಓಪಿಎಸ್ ಜಾರಿ ಮಾಡುತ್ತಿದ್ದೇವೆ. ಚುನಾವಣಾ ಸಂದರ್ಭದಲ್ಲಿ ನೀಡಿದ್ದ ಭರವಸೆಯಂತೆ ಒಪಿಎಸ್ ಜಾರಿಯಾಗುತ್ತಿದೆ ಎಂದು ತಿಳಿಸಿದರು.
ಹೊಸ ಪಿಂಚಣಿ ಯೋಜನೆ (NPS) ಅಡಿಯಲ್ಲಿ ನೌಕರರು ಮತ್ತು ಪಿಂಚಣಿದಾರರು ಸೇರಿದಂತೆ 1.36 ಲಕ್ಷ ಉದ್ಯೋಗಿಗಳಿದ್ದಾರೆ. ವಿಷಯವನ್ನು ಆಳವಾಗಿ ಅಧ್ಯಯನ ಮಾಡಲಾಗಿದೆ ಮತ್ತು ಹಣಕಾಸು ಅಧಿಕಾರಿಗಳು ಕೆಲವು ಮೀಸಲಾತಿಗಳ ಹೊರತಾಗಿಯೂ, ಸಮಸ್ಯೆಯನ್ನು ಇತ್ಯರ್ಥಗೊಳಿಸಲಾಗಿದೆ. ಹೊಸ ಪಿಂಚಣಿ ಯೋಜನೆಯಡಿಯಲ್ಲಿ ಎಲ್ಲಾ ನೌಕರರು OPS ವ್ಯಾಪ್ತಿಗೆ ಒಳಪಡುತ್ತಾರೆ ಎಂದು ಅವರು ಹೇಳಿದರು.
ಹಿಂದಿನ ಬಿಜೆಪಿ ಸರ್ಕಾರವು ನೌಕರರಿಗೆ ₹ 4,430 ಕೋಟಿ, ಪಿಂಚಣಿದಾರರಿಗೆ ₹ 5,226 ಕೋಟಿ ಮತ್ತು ಆರನೇ ವೇತನ ಆಯೋಗದ ₹ 1,000 ಕೋಟಿ ತುಟ್ಟಿಭತ್ಯೆ ಸೇರಿದಂತೆ ಅಂದಾಜು ₹ 11,000 ಕೋಟಿ ಮೊತ್ತದ ಬಾಕಿಯನ್ನು ನೀಡಿಲ್ಲ ಎಂದು ಸುಖು ಹೇಳಿದರು.
ಹಿಂದಿನ ಬಿಜೆಪಿ ಸರ್ಕಾರದ ಆರ್ಥಿಕ ದುರುಪಯೋಗ ಮತ್ತು ವ್ಯರ್ಥ ವೆಚ್ಚಗಳಿಂದ ರಾಜ್ಯವು ₹ 75,000 ಕೋಟಿ ಸಾಲದಲ್ಲಿದೆ ಎಂದಿದ್ದಾರೆ ಸುಖು.
ವೋಟ್ ಫಾರ್ ಓಪಿಎಸ್ : ಕರ್ನಾಟಕದಲ್ಲೂ ಹೊಸ ಪಿಂಚಣಿ ರದ್ದುಗೊಳಿಸಿ ಹಳೆಯ ಪಿಂಚಣಿ ಯೋಜನೆ ಜಾರಿ ಮಾಡಿ ಎಂದು ಸರಕಾರಿ ನೌಕರರು ನಿರಂತರವಾಗಿ ಪ್ರತಿಭಟನೆ ನಡೆಸುತ್ತಿದ್ದಾರೆ.
ಇತ್ತೀಚೆಗೆ ಪ್ರೀಡಂಪಾರ್ಕ್ ಬಳಿ 15 ದಿನಗಳ ಕಾಲ ನಿರಂತರ ಪ್ರತಿಭಟನೆಯ ಬಳಿಕ ಸರಕಾರ ಚರ್ಚೆ ನಡೆಸುವುದಾಗ ಭರವಸೆ ನೀಡಿತ್ತು. ಅಲ್ಲಿಂದ ತಾಲ್ಲೂಕ ಮಟ್ಟಕ್ಕೆ ವರ್ಗವಾಣೆಯಾಗಿರುವ ಪ್ರತಿಭಟನೆ ನಿತ್ಯವೂ ನಡೆಯುತ್ತಿದೆ. ಶೀಘ್ರವಾಗಿ ನಮ್ಮ ಬೇಡಿಕೆ ಈಡೇರದೆ ಹೋದಲ್ಲಿ ಬಜೆಟ್ ಅಧಿವೇಶನದಲ್ಲಿ ಮತ್ತೆ ಬೆಂಗಳೂರಿನಲ್ಲಿ ಪ್ರತಿಭಟನೆ ಆರಂಭವಾಗಲಿದೆ ಎಂದು ನೌಕರರು ತಿಳಿಸಿದ್ದಾರೆ.